ಸಂವಿಧಾನದಿಂದ ಮಹಿಳೆಯರು ಅಬಿವೃದ್ಧಿ ಹೊಂದಲು ಸಹಕಾರಿಯಾಗಿದೆ: ಬಳಗಾನೂರ
ಸಿಂದಗಿ 06; ಮಹಿಳೆಯರು ಎಲ್ಲಾ ರಂಗಗಳಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ನಮ್ಮ ದೇಶದ ಸ್ವಾತಂತ್ರ-್ಯ ಪೂರ್ವದಲ್ಲಿ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯದಲ್ಲಿ ಜೀವಿಸುತ್ತಿದ್ದರು, ಮಹಿಳೆಯರಿಗೆ ಯಾವುದೇ ಹಕ್ಕುಗಳು ಇರಲಿಲ್ಲ. ಸ್ವಾತಂತ್ರ-್ಯ ಪಡೆದುಕೊಂಡು ಸಂವಿಧಾನ ಅಳವಡಿಸಿಕೊಂಡಾಗ ಮಹಿಳೆಯರು ಸ್ವತಂತ್ರವಾಗಿ ಬದಕಲು, ಅರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅಬಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದು ಉಪತಶೀಲ್ದಾರ ಇಂದ್ರಾಬಾಯಿ ಬಳಗಾನೂರ ಹೇಳಿದರು.
ಪಟ್ಟಣದ ಲೊಯೋಲ ಶಾಲೆಯ ಆವರಣದಲ್ಲಿ ಸ್ಪೂರ್ತಿ ಸಿಂದಗಿ ತಾಲ್ಲೂಕ ಮಹಿಳಾ ಸಂಘಗಳ ಒಕ್ಕೂಟ, ಸಿಂಧೂತಾಯಿ ಮಾಜಿ ದೇವದಾಸಿ ತಾಯಂದಿರ ಒಕ್ಕೂಟ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ದಿ ಕೇಂದ್ರ ಸಿಂದಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಗಮನ ಮಹಿಳಾ ಸಮೂಹದ ಮುಖ್ಯಸ್ಥೆ ಮಮತಾ ಯಜಮಾನ ಉಪನ್ಯಾಸ ನೀಡಿ, ಮಹಿಳೆಯರು ಶಿಕ್ಷಣ ಪಡೆಯಲು ಇಬ್ಬರು ಮಹಿಳೆಯರು ನಮ್ಮ ಏಳ್ಗೆಗಾಗಿ ಶ್ರಮ ಪಟ್ಟಿದ್ದಾರೆ ಅವರೇ ಸಾವಿತ್ರಿಬಾಯಿ ಪುಲೆ ಹಾಗೂ ಫಾತಿಮಾ ಶೇಖ್. ಇವರು ಮಹಿಳೆಯರಿಗೆ ಮೊಟ್ಟ ಮೊದಲು ಶಿಕ್ಷಣಕ್ಕೆ ಅದ್ಯತೆ ಕೊಟ್ಟು ಸ್ಪೂರ್ತಿಯಾದರು. ಇಂದು ಅವರ ಪುಣ್ಯದಿಂದ ನಾವು ಶಿಕ್ಷಣ ಪಡೆದುಕೊಂಡು ಒಳ್ಳೆಯ ಸಮಾಜ ಕಟ್ಟುವುದರ ಜೊತೆಗೆ ಯಾವುದೇ ರಾಜೀಕೀಯ ಸುಳಿಗೆ ಸಿಲುಕದೆ ನಾವು ಎಲ್ಲಾ ಧರ್ಮದವರು ಭಾವೈಕ್ಯತೆಯಿಂದ ನಾವೆಲ್ಲರೂ ಮಾನವ ಧರ್ಮದವರು ಆದರಿಂದ ಮಾನವೀಯ ಮೌಲ್ಯಗಳನ್ನು ಬೆಳಿಸಿಕೊಂಡು ಸದೃಢವಾದ ಸಮಾಜ ಕಟ್ಟುವುದರ ಜೊತೆಗೆ ಸಮೃದ್ಧಿ ಭಾರತ ಕಟ್ಟಬೇಕು ಎಂದರು.
ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸುಜಾತ ಕಲುಬುರ್ಗಿ ಮಾತನಾಡಿ, ಮಹಿಳೆಯರು ಮೊದಲು ನಾಲ್ಕು ಗೋಡೆಯ ಮಧ್ಯದಲ್ಲಿ ಅಡುಗೆ ಮಾಡಲು ಅಷ್ಟೇ ಸೀಮಿತವಾಗಿದ್ದರು, ಆದರೆ ಕಾಲ ಬದಲಾಗಿ ಇಂದು ನಾವು ಎಲ್ಲಾ ರಂಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದೇವೆ. ನಿಮ್ಮ ಕುಟುಂಬದಲ್ಲಿ ಹೆಣ್ಣು ಗಂಡುವೆಂಬ ಬೇಧಬಾವ ಮಾಡದೆ ನಿಮ್ಮ ಮಕ್ಕಳಿಗೆ ಸಮಾನವಾಗಿ ಶಿಕ್ಷಣ ಕೊಡಿಸಿ ಅವರನ್ನು ಸ್ವಾಲಂಬಿಗಳಾಗಿ ಮಾಡಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಸಂಗಮ ಸಂಸ್ಥೆಯ ನೀರ್ದೇಶಕ ಪಾಽಽ ಸಂತೋಷ್, ಪಾಽಽ ಲ್ಯಾನ್ಸಿ ಫೆರ್ನಾಂಡಿಸ್ ಲೊಯೋಲ ಶಾಲೆಯ ಪ್ರಾಂಶುಪಾಲರು ಮಾತನಾಡಿದರು.
ಸಂಗಮ ಸಂಸ್ಥೆಯ ಸಹನಿರ್ದೇಶಕರಾದ ಸಿಽಽ ಸಿಂತಿಯಾ ಡಿ ಮೆಲ್ಲೋ ಪ್ರಾಸ್ತವಿಕವಾಗಿ ಮಾತನಾಡಿದರು. ಸ್ವ-ಸಹಾಯ ಸಂಘದ ಸದಸ್ಯೆ ಶಾಪೀಯಾಬೇಗಂ ವಾರ್ಷಿಕ ವರದಿ ಮಂಡಿಸಿದರು, ಶೈಲ ಸಂಗಮ ನಿರೂಪಿಸಿದರು, ಸ್ಪೂರ್ತಿ ಒಕ್ಕೂಟದ ಅಧ್ಯಕ್ಷೆ ರೇವತಿ ಮೇತ್ರಿ ಸ್ವಾಗತಿಸಿದರು. ಸಂಪವತಿ ಹಾಲಯಾಳ ವಂದಿಸಿದರು. ಕಾರ್ಯಕ್ರಮವನ್ನು ಸಂವಿಧಾನ ಪ್ರಸ್ತಾವನೆ ಹಾಡುವುದರ ಮೂಲಕ ಪ್ರಾರಂಭಿಸಲಾಯಿತು. ಸ್ಪೂರ್ತಿ ಮಾಹಿಳಾ ಒಕ್ಕೂಟದ ಪದಾಧಿಕಾರಿಗಳು ಮತ್ತು ವಿವಿಧ ಹಳ್ಳಿಗಳಿಂದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.