"ಯಮಕನಮರಡಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ತಡೆದು ಪ್ರತಿಭಟನೆ"
ಲೋಕದರ್ಶನ ವರದಿ
ಯಮಕನಮರಡಿ 10 : ಸ್ಥಳೀಯ ಮತಕ್ಷೇತ್ರದ ಕಾಂಗ್ರೆಸ ಕಾರ್ಯಕರ್ತರಿಂದ ದಿನಾಂಕ 10/9/2026 ರಂದು ಮತಕ್ಷೇತ್ರದ ವ್ಯಾಪ್ತಿಗೆ ಬರುವ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ನಂಬರ ನಾಲ್ಕು ದಾದಬಾನಟ್ಟಿಯ ಹತ್ತಿರ ರಸ್ತೆ ತಡೆದು ಪ್ರತಿಭಟನೆ ಮಾಡಿದರು ಲೋಕೋಪಯೋಗಿ ಸಚಿವರು ಆದ ಶ್ರೀ ಸತೀಶಣ್ಣ ಜಾರಕಿಹೊಳಿ ಅವರ ಮೇಲೆ ಇಡಿ ದಾಳಿ ಮಾಡಿದ್ದಕ್ಕಾಗಿ ಗ್ರಾಮಸ್ಥರಿಂದ ಪ್ರತಿಭಟನೆ ಮಾಡಲಾಯಾಯಿತು ಯಮಕನಮರಡಿ ಕಾಂಗ್ರೆಸ ಪಕ್ಷದ ಮುಖಂಡರಾದ ಸಚಿವರ ಆಪ್ತರಾದ ರವೀಂದ್ರ ಜಿಂಡ್ರಾಳಿ ಗುತ್ತಿಗೆದಾರ ಈರಣ್ಣ ಬಿಸಿರೊಟ್ಟಿ ಬ್ಲಾಕ್ ಅಧ್ಯಕ್ಷ ಮಹಾಂತೇಶ ಮಗದುಮ, ದೇವಪ್ಪ ಹುನುರಿ, ಬಸವರಾಜ ದರನಟ್ಟಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ರಾಮ ಗುಳ್ಳಿ, ಜಂಗ್ಲಿ ಸಾಹೇಬ ನಾಯಕ, ಮಹಾದೇವ ಪಟೋಳ್ಳಿ, ಮಹಾಲಿಂಗ ಶಿರುಗುಪ್ಪಿ, ಗುಲಾಬಸಿಂಗ್ ರಜಪೂತ, ರಾಜು ರೇವಣ್ಣವರ, ಜಾವಿದ ಜಕಾತಿ, ಗೀರೀಶ ಮಿಶ್ರಿಕೊಟ್ಟಿ, ಈರಣ್ಣ ತೇಲಿ, ಶಶಿಕಾಂತ ಹಟ್ಟಿ, ವಿನಾಯಕ ಹಳ್ಳಿ ಅಬ್ದುಲ್ ಗಣಿ ದರ್ಗಾ ಉಪಸ್ತಿತರಿದ್ದರು.