ಹಗರಿಬೊಮ್ಮನಹಳ್ಳಿ

ಹಾಲಿ ಮಾಜಿಗಳ ಪೈಪೋಟಿಗೆ ತೆರೆ: ಕಾಂಗ್ರೆಸ್ ಕೈವಶವಾದ ಪುರಸಭೆ

ಹಾಲಿ ಮಾಜಿಗಳ ಪೈಪೋಟಿಗೆ ತೆರೆ: ಕಾಂಗ್ರೆಸ್ ಕೈವಶವಾದ ಪುರಸಭೆ

ಹಗರಿಬೊಮ್ಮನಹಳ್ಳಿ 30:  ಪಟ್ಟಣದ ಪುರಸಭೆಯ 22ವಾರ್ಡ್‌ಗಳ ಮತ ಏಣಿಕೆ ಕಾರ್ಯ ಬುಧವಾರ ನಡೆದಿದ್ದು ಎಣಿಕೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ಸ್ಥಾನ ಗಿಟ್ಟಿಸಿಕೊಂಡು 8ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಅವಿರೋಧ ಆಯ್ಕೆಯಿಂದ ಕೈ ಮೇಲುಗೈ ಸಾಧಿಸಿದ್ದು ಹಾಲಿ ಮಾಜಿಗಳ ಪೈಪೋಟಿಗೆ ತೆರೆ ಬಿದ್ದಿದ್ದು ಪುರಸಭೆ ಕಾಂಗ್ರೇಸ್ ಕೈವಶವಾಗಿದೆ. 

ಇಲ್ಲಿನ ಜಿವಿಪಿಪಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಬೆಳೆಗ್ಗೆ 8ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಯಿತು.  

1 ವಾರ್ಡ್‌ನ: ಬಿಜೆಪಿಯ ಮಮತ ಮೇಘರಾಜ 588 ಮತಗಳಿಸಿದರು ಪ್ರತಿಸ್ಫರ್ಧಿ ಸರಸ್ವತಿ ಗುಂಡ್ರ ಹನುಮಂತ 593ಗಳಿಸಿ 5ಮತಗಳ ಅಂತರದಿಂದ ಜಯಗಳಿಸಿದರು.  

2ನೇ ವಾರ್ಡ್‌ನಲ್ಲಿ: ಬಿಜೆಪಿಯ ಅಭ್ಯರ್ಥಿ ನಿಯಾಜ್ 306 ಮತ ಗಳಿಸಿದರೆ, ಜೆಡಿಎಸ್‌ನ ಇಕ್ಬಾಲ್ ಖಾಜಿ 43 ಮತಗಳಿಸದರು, ಕಾಂಗ್ರೇಸ್‌ನ ನೆಲ್ಲು ಇಸ್ಮಾಯಿಲ್ 477 ಮತಗಳಿಸಿ 171 ಮತಗಳ ಅಂತರದಿಂದ ಜಯಗಳಿಸಿದರು. 

3ನೇ ವಾರ್ಡ್‌: ಬಿಜೆಪಿ ಅಭ್ಯರ್ಥಿ ಕಾಂಗ್ರೇಸ್‌ನ ಅಭ್ಯರ್ಥಿ ಸುಧಾ.ಬಿ 261ಮತಗಳಿಸಿದರೆ ಪ್ರತಿಸ್ಫರ್ಥಿ ಬಿಜೆಪಿ ಅಭ್ಯರ್ಥಿ ಹೆಚ್‌.ಎಂ.ಚನ್ನಮ್ಮ 649 ಮತಗಳಿಸಿ 388ಮತಗಳ ಅಂತರದಿಂದ ಜಯಗಳಿಸಿದರು. 

4ನೇ ವಾರ್ಡ್‌: ಬಿಜೆಪಿ ಅಭ್ಯರ್ಥಿ ಲಲಿತಾ ಬಾಯಿ 551 ಮತ ಗಳಿಸಿದರೆ, ಕಾಂಗ್ರೇಸ್ ಅಭ್ಯರ್ಥಿ ಮಂಜುಳಾ ಬಾಯಿ 687ಗಳಿಸಿ 136 ಮತಗಳ ಅಂತರದಂದ ಜಯಗಳಿಸಿದರು. 

5ನೇ ವಾರ್ಡ್‌: ಬಿಜೆಪಿ ಅಭ್ಯರ್ಥಿ ಕೊಟ್ರೇಶ್ 379ಮತಗಳಿಸಿದರೆ,ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ರಾಘವೇಂದ್ರ 19ಮತಗಳಿಸಿ,ಕಾಂಗ್ರೇಸ್‌ನ ಗಣೇಶ್ 547ಮತ ಪಡೆದು 168ಮತಗಳ ಅಂತರದಿಂದ ಜಯಗಳಿಸಿದರು. 

6ನೇ ವಾರ್ಡ್‌: ಕಾಂಗ್ರೆಸ್ ಅಭ್ಯರ್ಥಿ ಸುಕನ್ಯಮ್ಮ 404 ಮತಗಳಿಸಿದರೆ, ಕೆಆರ್‌ಎಸ್ ಪಕ್ಷದ ಅಭ್ಯರ್ಥಿ  ಸಾಕಮ್ಮ 23 ಮತಗಳಿಸಿದರೆ, ಎಎಪಿ ಯಾಸ್ಮೀನ್ 23 ಮತಗಳಿಸಿದರೆ ಬಿಜೆಪಿ ಅಭ್ಯರ್ಥಿ ಅಂಬಳಿ ಮಂಗಳ 543ಗಳಿಸಿ 139ಮತಗಳ ಅಂತರದಿಂದ ಜಯಗಳಿಸಿದರು. 

7ನೇ ವಾರ್ಡ್‌: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಳಪ್ಪ 368 ಮತ ಗಳಿಸಿದರೆ ಬಿಜೆಪಿ ಪಕ್ಷದ ಅಭ್ಯರ್ಥಿ ದೀಪಕ್ ಕಠಾರೆ 349 ಮತಗಳಿಸಿ 19ಅಂತರದಿಂದ ಜಯಗಳಿಸಿದರು. 

8ನೇ ವಾರ್ಡ್‌: ಕಾಂಗ್ರೆಸ್ ಅಭ್ಯರ್ಥಿ ರೇಷ್ಮಾ ಸಿಕಂದರ್ ಅವಿರೋಧವಾಗಿ ಆಯ್ಕೆಯಾದರು 

9ನೇ ವಾರ್ಡ್‌: ಬಿಜೆಪಿ ಅಭ್ಯರ್ಥಿ ಯುಕೆ ಕೊಟ್ರೇಶ್ 248ಮತ ಗಳಿಸಿದರೆ ಕಾಂಗ್ರೇಸ್ ಅಭ್ಯರ್ಥಿ558 ರಾಜೇಶ್ ಬ್ಯಾಡಗಿ ಮತಗಳಿಸಿ 310ಮತಗಳ ಅಂತರದಿಂದ ಜಯಗೊಳಿಸಿದರು. 

10ನೇ ವಾರ್ಡ್‌: ಬಿಜೆಪಿಯಿಂದ ಲಕ್ಷಣ ಕಲಾಲ್ 396ಮತಗಳಿಸಿದರೆ ಕಾಂಗ್ರೇಸ್ ಅಭ್ಯರ್ಥಿ ಅಜಿಜುಲ್ಲಾ 458 ಮತಗಳಿಸಿ62 ಮತಗಳ ಅಂತರದಿಂದ ಜಯಗಳಿಸಿದರು. 

11ನೇ ವಾರ್ಡ್‌: ಕಾಂಗ್ರೆಸ್ ಅಭ್ಯರ್ಥಿ ಚಿರಂಜೀವಿ 338ಮತಗಳಿಸಿದರೆ ಬಿಜೆಪಿಯಿಂದ ವೀರೇಶ್381 ಮತಗಳಿಸಿ 43 ಮತಗಳ ಅಂತರದಿಂದ ಜಯಗಳಿಸಿದರು. 

12ನೇ ವಾರ್ಡ್‌: ಬಿಜೆಪಿ ಅಭ್ಯರ್ಥಿ ಸುನಂದ ಸ್ಫರ್ಥಿಸಿ 488ಮತಗಳಿಸಿದರೆ ಕಾಂಗ್ರೇಸ್ ಅಭ್ಯರ್ಥಿ ಅಂಬಿಕಾ ದೇವೇಂದ್ರ​‍್ಪ 651ಮತಗಳಿಸಿ 163ಮತಗಳ ಅಂತರದಿಂದ ಜಯಗಳಿಸಿದರು. 

13ನೇ ವಾರ್ಡ್‌: ಕಾಂಗ್ರೆಸ್ ಅಭ್ಯರ್ಥಿ ಬಾರಿಕರ ಮಂಜುನಾಥ್ 487ಮತಗಳಿಸಿದರೆ ಬಿಜೆಪಿ ಅಭ್ಯರ್ಥಿ ಸುರೇಶ್ ಬಣಕಾರ 631ಮತಗಳಿಸಿ 144ಮತಗಳ ಅಂತರದಿಂದ ಜಯಗಳಿಸಿದರು. 

14ನೇ ವಾರ್ಡ್‌: ಕಾಂಗ್ರೆಸ್ ಅಭ್ಯರ್ಥಿ ಯು.ಬಾಬುವಲಿ 526ಮತಗಳಿಸಿದರೆ ಬಿಜೆಪಿಯಿಂದ ನಾಗರಾಜ ಜನ್ನು ಸ್ಫರ್ಥಿಸಿ 584ಮತಗಳಿಸಿ 58ಮತಗಳ ಅಂತರದಿಂದ ಜಯಗಳಿಸಿದರು. 

15ನೇ ವಾರ್ಡ್‌: ಕಾಂಗ್ರೆಸ್ ಅಭ್ಯರ್ಥಿ ಎಂ.ಎಂ.ಶಶಿಕಲಾ ಸ್ಫರ್ಥಿಸಿ ಮತಗಳಿಸಿದರೆ 179ಬಿಜೆಪಿ ಮಲ್ಲೇಶ್ವರಿ ಭರತ್ 763ಮತಗಳಿಸಿ 584 ಮತಗಳ ಅಂತರದಿಂದ ಜಯಗಳಿಸಿದರು. 

16ನೇ ವಾರ್ಡ್‌: ಕಾಂಗ್ರೆಸ್ ಅಬ್ಯರ್ಥಿ ಕೊಟ್ರೇಶ್ ಸ್ಫರ್ಥಿಸಿ 182ಮತಗಳಿಸಿದರೆ ಬಿಜೆಪಿ ಅಭ್ಯರ್ಥಿ ಗಂಗಾಧರ ಸ್ಫರ್ಥಿಸಿ 538ಮತಗಳಿಸಿ 356 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

17ನೇ ವಾರ್ಡ್‌: ಬಿಜೆಪಿ ಅಭ್ಯರ್ಥಿ ಉಮಾದೇವಿ ನೇತಾಜಿ ಗೌಡ ಸ್ಫರ್ಥಿಸಿ 366ಮತಗಳಿಸಿದರೆ ಕಾಂಗ್ರೇಸ್ ಅಭ್ಯರ್ಥಿ ಖಾಜಾಮುನ್ನಿ ಸ್ಫರ್ಧಿಸಿ 457ಮತಗಳಿಸಿ 91 ಮತಗಳ ಅಂತರದಿಂದ  ಜಯಗಳಿಸಿದ್ದಾರೆ. 

18ನೇ ವಾರ್ಡ್‌: ಕಾಂಗ್ರೆಸ್ ಅಭ್ಯರ್ಥಿ  ಜೋತಿ ರಾಜೇಶ್ ಬ್ಯಾಡಗಿ ಸ್ಫರ್ಧಿಸಿ 130ಮತಗಳಿಸಿದರೆ, ಪಕ್ಷೇತ್ರವಾಗಿ ಅಮಿತಾ ಸಂಪತ್ 208ಸ್ಫರ್ಧಿಸಿ ಮತಗಳಿಸಿ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರೆ. ಬಿಜೆಪಿ ಅಭ್ಯರ್ಥಿ  ಎಸ್‌.ಕಮಲ ಸ್ಫರ್ಧಿಸಿ 424 ಮತಗಳಿಸಿ 216 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

19ನೇ ವಾರ್ಡ್‌: ಕಾಂಗ್ರೆಸ್‌ನ ಅಭ್ಯರ್ಥಿ ದೊಡ್ಡಬಸಪ್ಪ ಸ್ಫರ್ಧಿಸಿ 67ಮತಗಳಿಸಿದರೆ, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 263 ಮತಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದು ಬಿಜೆಪಿಯ ನವೀನ ಕುಮಾರ 304ಮತಗಳಿಸಿದ್ದು 41ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

20ನೇ ವಾರ್ಡ್‌: ಪಕ್ಷೇತರ ಅಭ್ಯರ್ಥಿ ಮುದ್ದಮ್ಮ ಹುಳ್ಳಿ ಪ್ರಕಾಶ್ ಸ್ಫರ್ಧಿಸಿ 173ಮತಗಳಿಸಿದರೆ, ಬಿಜೆಪಿಯ ಅಭ್ಯರ್ಥಿ ಮಮತಾ ವಿಜಯೇಂದ್ರ ಸ್ಫರ್ಧಿಸಿ 218 ಮತಗಳಿಸಿದರೆ,ಕಾಂಗ್ರೆಸ್ ಅಭ್ಯರ್ಥಿ ನೇತ್ರಾವತಿ ಸೆರೆಗಾರ ಹುಚ್ಚಪ್ಪ ಸ್ಫರ್ಧಿಸಿ 351 ಮತಗಳಿಸಿ 133 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

21ನೇ ವಾರ್ಡ್‌: ಬಿಜೆಪಿ ಅಭ್ಯರ್ಥಿ ಅಂಬಾಡಿ ಮಹೇಶ್ ಸ್ಫರ್ಧಿಸಿ 307ಮತಗಳಿಸಿದರೆ ಕಾಂಗ್ರೇಸ್ ಅಭ್ಯರ್ಥಿ ಮರಿ ರಾಮಪ್ಪ ಸ್ಫರ್ಧಿಸಿ 508ಮತಗಳಿಸಿ 201 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

22ನೇ ವಾರ್ಡ್‌: ಬಿಜೆಪಿ ಅಭ್ಯರ್ಥಿ ಬಿ.ಮಂಜುನಾಥ್ ಸ್ಫರ್ಧಿಸಿ  311ಮತಗಳಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಪವಾಡಿ ಹನುಮಂತಪ್ಪ ಸ್ಫರ್ಧಿಸಿ 765ಮತಗಳಿಸಿ 454 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

23ನೇ ವಾರ್ಡ್‌: ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಟಿ ಸ್ಫರ್ಧಿಸಿ 403 ಮತಗಳಿಸಿದರೆ ಬಿಜೆಪಿ ಪಕ್ಷದ ಅಭ್ಯರ್ಥಿ ಜೋಗಿ ಹನುಮಂತಪ್ಪ ಸ್ಫರ್ಧಿಸಿ 529 ಮತಗಳಿಸಿ 126 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

ಒಟ್ಟರೆಯಾಗಿ ಪಟ್ಟಣದಲ್ಲಿ ತೀವ್ರ ಕೂತುಹಲ ಕೆರಳಿಸಿದ್ದ ಹಾಗೂ ಹಾಲಿ ಮಾಜಿ ಶಾಸಕರುಗಳ ಪ್ರತಿಷ್ಠೆಯ ಕಣವಾಗಿದ್ದ ಪುರಸಭೆ ಚುನಾವಣೆ ಫಲಿತಾಂಶವು ಹೊರಬಿದ್ದಿದ್ದು ,  ಕೈ ಕಮಲ ಸಮಬಲ ಪಡೆದುಕೊಂಡು 8ನೇ ವಾರ್ಡ್‌ನ ಅಭ್ಯರ್ಥಿಯು ಅವಿರೋಧ ಆಯ್ಕೆ ಬಿಜೆಪಿಗೆ ಮುಳುವಾಗಿ ಪುರಸಭೆ ಕಾಂಗ್ರೇಸ್ ತೆಕ್ಕೆಗೆ ಬಿದ್ದಿದೆ. 


ಸುದ್ದಿ ಓದಿ