ಮುದ್ದೆಬಿಹಾಲ್

ಸಾರ್ವಜನಿಕರ ಎದುರಿಗೆ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಪಕ್ಷ ಸದಾ ಸಿದ್ಧ:

ಸಾರ್ವಜನಿಕರ ಎದುರಿಗೆ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಪಕ್ಷ ಸದಾ ಸಿದ್ಧ:

ಮುದ್ದೇಬಿಹಾಳ: ಕೇವಲ ನಾಲ್ಕೈದು ಸಿ ಸಿ ರಸ್ತೆಗಳನ್ನು ಮಾಡಿ ದೊಡ್ಡ ಅಭಿವೃದ್ಧಿ ಹರಿಕಾರರು ಎಂದು ಬಿಂಬಿಸಿಕೊಳ್ಳುವ ಪೇಪೆರ್ ಟೈಗರ್ ಶಾಸಕ ಎ  ಎಸ್ ಪಾಟೀಲ(ನಡಹಳ್ಳಿ)ಯವರ ಸಾಧನೆಯನ್ನ ಹಾಗೂ ಮಾಜಿ ಸಚಿವ ಸಿ ಎಸ್ ನಾಡಗೌಡರ ಅಭಿವೃದ್ಧಿ ಸಾಧನೆಯನ್ನು ಸಾರ್ವಜನಿಕರ ಎದುರಿಗೆ ಬಹಿರಂಗ ಚರ್ಚೆಗೆ ಕಾಂಗ್ರೇಸ್ ಪಕ್ಷ ಸದಾ ಸಿದ್ಧವಾಗಿದೆ ಎಂದು ಎಸ್ಸಿ ಯುವ ಕಾಂಗ್ರೇಸ್ ತಾಲೂಕಾ ಅಧ್ಯಕ್ಷ ಲಕ್ಷ್ಮಣ ಚವ್ಹಾಣ ಸವಾಲೆಸಿದಿದ್ದಾರೆ. 

ಪಟ್ಟಣದ ಪ್ರವಾಸಿ ಮಂದಿರದ ಹೋರಾಂಗಣ ಉದ್ಯಾನವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಳೆದ 25 ವರ್ಷ ಮತಕ್ಷೇತ್ರದಲ್ಲಿ ಸನ್ನಡತೆ ಹಾಗೂ ಜಾತ್ಯಾತೀತ ರಾಜಕಾರಣಕ್ಕೆ ಹೆಸರಾದವರು ಸಿ ಎಸ್ ನಾಡಗೌಡರು ಯಾವತ್ತಿಗೂ ಯಾರ ಮೇಲು ದರ​‍್ ತೋರಿಸಿದ ಉದಾಹರಣೆಗಳಿಲ್ಲ. ಕಳೇದ 2013 ರಿಂದ 18ವರೆಗೆ ಅಂದಿನ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರದ ಆಡಳಿತದಲ್ಲಿ ಮತಕ್ಷೇತ್ರದಲ್ಲಿ ಸಾವಿರಾರು ಕೋಟಿ ಅನುದಾನ ತರುವ ಮೂಲಕ ಉತ್ತಮ ಸಾಧನೆ ತೊರಿದ್ದಾರೆ. ಆದರೇ ಅವರು ಒಂದು ದಿನವೂ ಮಾಧ್ಯಮದ ಮುಂದೆ ನಿಂತು ಪ್ರಚಾರ ಪಡೆದುಕೊಂಡಿಲ್ಲ. ಜೊತೆಗೆ ಅವರ ದಿವ್ಯ ನಿರ್ಲಕ್ಷತನದಿಂದ ಅವರು ಕಳೆದ ಬಾರಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸುವಂತಾಯಿತು. 

ಮತಕ್ಷೇತ್ರದ ರೈತರ ಕೃಷಿ ಚಟುವಟಿಕೆಗೆ ಅತ್ಯವಶ್ಯಕವಾಗಿದ್ದ ಬೂದಿಹಾಳ ಪೀರಾಪೂರ ಏತನಿರಾವರಿ ಯೋಜನೆ ಹಾಗೂ ನಾಗರಬೆಟ್ಟ ಏತನೀರಾವರಿ ಯೋಜನೆ. ಕೃಷ್ಣಾ ನದಿ ತೀರ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಚಿಮ್ಮಲಗಿ ಏತನೀರಾವರಿ ಯೋಜನೆ ಅನುಷ್ಠಾನ, ಮುದ್ದೇಬಿಹಾಳ ಪಟ್ಟಣದಲ್ಲಿ ಹುಡ್ಕೋ ಬಡಾವಣೆಯಲ್ಲಿರುವ ಹೈಕೋರ್ಟ ಮಾದರಿಯಲ್ಲಿ ಸುಸಜ್ಜಿತ ಕಟ್ಟಡಗೊಂಡ ತಾಲೂಕಾ ಕೋರ್ಟ ಕಟ್ಟಡ, ಹಿಂದುಳಿದ ಜನಾಂಗದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ವಸತಿ ಸಹಿತ ಪದವಿ ಕಾಲೇಜು ನಿರ್ಮಾಣ, ಮಿನಿ ವಿಧಾನ ಸೌಧ. ತಾಲೂಕಾ ಸರಕಾರಿ ಆಸ್ಪತ್ರೆ, ಆಶ್ರಯ ಬಡಾವಣೆ, ಶುದ್ಧ ನೀರಿನ ಘಟಕಗಳ, ಬಸ್ ನಿಲ್ದಾಣ, ಮುಖ್ಯವಾಗಿ ತಂಗಡಗಿಯಿಂದ ತಾಳಿಕೋಟಿಯವರೆಗೂ ನಿರ್ಮಾಣಗೊಂಡ ರಾಜ್ಯ ಹೆದ್ದಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ನಿಜವಾದ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. 

ಆದರೇ ಪ್ರಸ್ತುತ ಹಾಲಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಒಂದೆ ಕಾಮಗಾರಿಗೆ ಎರಡೋ ಮೂರೋ ಬಾರಿ ಭೂಮಿ ಪೂಜೆ ಮಾಡಿ ಬಿಟ್ಟಿ ಪ್ರಚಾರ ಪಡೆದುಕೊಂಡು ಅವರ ದುರ್ನಡತೆಯ ಹಾಗೂ ಬ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದರೆ ಅಂತಹವರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಪ್ರಜಾಪ್ರಭುತ್ವದ ಹಕ್ಕನ್ನೇ ಕಿತ್ತಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 

ಪಟ್ಟಣದ ಅಂಬೇಡ್ಕರ ವೃತ್ತದಿಂದ ತಾಲೂಕಿನ ಅಗಸಬಾಳ ರಸ್ತೆಯವರಿಗೆ ಕೈಗೊಂಡ ರಸ್ತೆ ಕಾಮಗಾರಿ ಒಂದು ವರ್ಷವೂ ಕೂಡ ಗತಿಸಿಲ್ಲ ಆದರೇ ಇಂದು ಸುಮಾರುಕಡೆಗಳಲ್ಲಿ ಗುಂಡಿಗಳು ಬಿದ್ದಿವೆ. ಅದರಂತೆ ಪಟ್ಟಣದ ಕೆಲವು ಕಡೆಗಳಲ್ಲಿ ಅವೈಜ್ಞಾನಿಕ ಸಿ ಸಿ ರಸ್ತೆ ಕಾಮಗಾರಿ ನಡೆಸಿದ್ದರ ಹಿನ್ನೇಲೆಯಲ್ಲಿ  ಮಳೆ ಬಂದ ಸಂದರ್ಭದಲ್ಲಿ ಮಳೆ ನೀರು ಎಲ್ಲ ವಾಣಿಜ್ಯಮಳಿಗೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸುವಂತಾಗಿದೆ. ಒಂದು ಸಿ ಸಿ ರಸ್ತೆ ಮಾಡಿ ವಿದ್ಯುದೀಪ ಹಾಕಿದರೆ ಅದೋಂದು ದೊಡ್ಡ ಅಭಿವೃದ್ಧಿ ತರಹ ಬಿಂಬಿಸುವುದು ದೊಡ್ಡ ಸಾಧನೆ ಎಂದು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. 

ಕೇವಲ ಪ್ರಚಾರಕ್ಕಾಗಿ ಸಾಧನೆ ಮಾಡುವುದನ್ನು ಬಿಟ್ಟು ಮತಕ್ಷೇತ್ರದ ಜನರಿಗೆ ನ್ಯಾಯಯುತವಾಗಿ ಸುಖಶಾಂತಿಯಿಂದ ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕಿದೆ. ಜೊತೆಗೆ ಮತಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಮೂಲಬೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಮಾಡಲು ತಮ್ಮ ಶಾಸಕರಿಗೆ ತಿಳಿಸಲು ಮುಂದಾಗಿ ಅದುಬಿಟ್ಟು ಕೇವಲ ನಾಲ್ಕೈದು ಸಿ ಸಿ ರಸ್ತೆಗಳನ್ನು ಮಾಡಿ ಯಾವೂದೋ ದೊಡ್ಡ ಸಾಧನೆ ಮಾಡಿದ ಹಾಗೆ ದರ​‍್ ತೊರುತ್ತಿರುವುದನ್ನು ಕೈಬಿಡಬೇಕು ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು. 

ಈ ವೇಳೆ, ತಾಲೂಕಾ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೈಬೂಬ ಮೋಕಾಶಿ, ಕಾಂಗ್ರೇಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಸಂಗು ಚಲವಾದಿ,ಮಲ್ಲಿಕಾರ್ಜುನ ಬಗಲಿ, ಸಂಗಪ್ಪ ಬಿಸಲದಿನ್ನಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ