ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ರಾಜೇಶ್ ಬಿರುಸಿನ ಪ್ರಚಾರ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 22 : ಪಟ್ಟಣದ ಪುರಸಭೆ ಚುನಾವಣೆ ಪ್ರಚಾರ ಜೋರಾಗಿದ್ದು 18ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ರಾಜೇಶ್ ಬ್ಯಾಡಗಿ ಅವರು ಬಿರುಸಿನ ಪ್ರಚಾರ ಮಾಡಿದರು.
ವಾರ್ಡ್ನಲ್ಲಿನ ಅವಶ್ಯಕತೆವಿರುವ ವಸತಿ ಸೌಲಭ್ಯ, ಕುಡಿಯುವ ನೀರು, ರಸ್ತೆ, ಚರಂಡಿ ವ್ಯೆವಸ್ಥೆ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿ ಮಾದರಿ ವಾರ್ಡ್ ಮಾಡುವ ಭರವಸೆಯನ್ನು ನೀಡಿದರು, ಕಾಂಗ್ರೇಸ್ ಪಕ್ಷದಿಂದ ಉತ್ತಮ ಆಡಳಿತ ನೀಡುತ್ತಿದ್ದು, ಸ್ಥಳೀಯ ಸಂಸ್ಥೆಗೆ ನನ್ನನ್ನು ಆಯ್ಕೆ ಮಾಡಿ ನಿಮ್ಮಗಳ ಸೇವೆಯನ್ನು ಮಾಡುವ ಅವಕಾಶ ನೀಡುವಂತೆ ಮತದಾರರಲ್ಲಿ ಕೋರಿ ಮತಯಾಚಿಸಿದರು.