ಕಾಂಗ್ರೆಸ್ ಪಕ್ಷದ ಜನಸಂಘಟನೆ ಯಾತ್ರೆ
ತೇರದಾಳ ಮತ ಕ್ಷೇತ್ರದಲ್ಲಿ ನಡೆಯುತ್ತಿರುವ ಜನಸಂಘಟನೆ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ನಿನ್ನೆ ಸಂಜೆಮಹಾಲಿಂಗಪುರದ ಪೆಂಡಾರಿ ಗಲ್ಲಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಜನಸಂಘಟನೆ ಯಾತ್ರೆ ನಡೆಯಿತು.
ಕಾರ್ಯಕ್ರಮದಲ್ಲಿ ಡಾಕ್ಟರ್ ಬೆಳಗಲಿ ಅವರು ಮಾತನಾಡುತ್ತಾ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಎಂಬ ದೃಷ್ಟಿಯಿಂದ ಎಲ್ಲ ಜನರ ಅಭಿವೃದ್ಧಿಗಾಗಿ ಯೋಜನೆಗಳು ಜಾರಿಯಲ್ಲಿದ್ದವು. ಯಾವುದೇ ಜಾತಿ ಧರ್ಮಕ್ಕೆ ಧಕ್ಕೆಯಾಗದಂತೆ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯಕ್ಕೆ ತೀರಾ ಕಡೆಗಣಿಸುತ್ತಿದೆ.
ನಮ್ಮ ಸಿದ್ದರಾಮಯ್ಯನವರ ಸರಕಾರದಲ್ಲಿ ಮುಸ್ಲಿಂ ಸಮಾಜಕ್ಕೆ ಶಾದಿಭಾಗ್ಯ ನೀಡಿ ಬಡ ಮುಸ್ಲಿಂ ಜನರ ನೆರವಿಗೆ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೇವು. ಆದರೆ ಈಗಿನ ಬಿಜೆಪಿ ಸರ್ಕಾರ ಜಾತಿ ಜಾತಿಗಳ ಮಧ್ಯೆ ಜಗಳ ಧರ್ಮ-ಧರ್ಮದ ಮಧ್ಯೆ ಭಿನ್ನಾಭಿಪ್ರಾಯ ತಂದು ಸರ್ವ ಜನಾಂಗದ ಶಾಂತಿಯ ತೋಟ ವಾಗಿದ್ದ ನಮ್ಮ ನಾಡಿನ ಶಾಂತಿಯನ್ನು ಹಾಳುಮಾಡುತ್ತಿದೆ. ರಾಜ್ಯದ ಎಲ್ಲ ಜನರು ಶಾಂತಿ ಸಮೃದ್ಧಿಯಿಂದ ಬಾಳಬೇಕಾದರೆ ಮತ್ತೆ ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ. ಎಲ್ಲ ಮತದಾರರು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಮಯದಲ್ಲಿ ದಾದಾಪೀರ ಪರೋಶಿ, ಪೈಗಂಬರ, ಮುಸ್ತಾಕ ತನಗುಂಡಿ, ಮಹಮ್ಮದ ಪೆಂಡಾರಿ, ಹುಸೆನ್ ಸೌದಾಗರ, ರಸೂಲ್ ಸಿಂದಗಿಕರ, ತಾಹಿರಾ ಜಮಾದಾರ, ಎಸ್.ಎಮ್ ಉಳ್ಳಾಗಡ್ಡಿ ಅವರು ಸೇರಿದಂತೆ ಪೆಂಡಾರಿಗಲ್ಲಿಯ ಹಿರಿಯರು ತಾಯಂದಿರು, ಯುವಕರು, ಕಾರ್ಯಕರ್ತರು ಉಪಸ್ಥಿತರಿದ್ದರು