ಕಾಂಗ್ರೇಸ್ ಸರ್ಕಾರ ವೀರಶೈವ-ಲಿಂಗಾಯತ ಅಭಿವೃದ್ಧಿಗೆ ಅನ್ಯಾಯ: ವಸ್ತ್ರದ ಅಸಮಾಧಾನ
ಬೆಳಗಾವಿ 22: ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೇಸ್ ಸರ್ಕಾರವು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ಗೌರವ ಸದಸ್ಯರುಗಳಾದ ಮಂಜುನಾಥ ವಸ್ತ್ರದ ಹಾಗು ವಿಜಯ ಮಠಪತಿ ತಮ್ಮಯ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾದ ಈ ನಡೆಯನ್ನು ಖಂಡಿಸಿದ್ದಾರೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಸಮುದಾಯದವರ ಪ್ರಗತಿಯ ಹಿತದೃಷ್ಟಿಯಿಂದ ಸಭಿವೃದ್ಧಿ ನಿಗಮವನ್ನು ಸ್ಥಾಪಿಸಿತ್ತು. ಅಲ್ಲದೆ ಪ್ರಗತಿಪರ ಯೋಜನೆಗಳ ಅನುಷ್ಠಾನಕ್ಕಾಗಿ 100 ಕೋಟಿ ರೂ ಪಾಯಿಗಳ ಅನುದಾನದ ಹಣವನ್ನು ಮೀಸಲಿಡುವ ಮೂಲಕ ಸಮಾಜದ ಅಭಿವೃದ್ಧಿಗೆ ಮುನ್ನುಡಿ ಬರೆದಿತ್ತು. ಆದರೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಈಗಿನ ಸರ್ಕಾರವು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅನುದಾನವನ್ನು 100 ಕೋಟಿಗಳಿಂದ ಕೇವಲ 25 ಕೋಟಿರೂಗಳಿಗೆ ಇಳಿಸಿದ್ದು, ಅದರ ಮಾನಸಿಕ ದಿವಾಳಿತನ ಕ್ಕೆ ಸಾಕ್ಷಿಯಾಗಿದೆ. ಮಾತೆತ್ತಿದರೆ ಸಾಮಾಜಿಕ ನ್ಯಾಯ ಎಂದು ಬೊಬ್ಬೆ ಇಡುತ್ತಿರುವ ಕೆಲ ಮಂತ್ರಿ-ಮಹೋದಯರಿಗೆಲ್ಲಾ ಈ ಅನ್ಯಾಯವು ಕಣ್ಣಿಗೆ ಕಾಣುತ್ತಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ವೀರಶೈವ-ಲಿಂಗಾಯತರಲ್ಲಿಯೂ ಸಹ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಓದ್ಯೋಗಿಕವಾಗಿಯೂ ಸಹ ಲಕ್ಷಾಂತರ ಜನ ಹಿಂದುಳಿದವರಾಗಿದ್ದಾರೆ. ಅವರ ಜೀವನ ಮಟ್ಟವು ಸಹ ಸಾಮಾಜಿಕವಾಗಿ ಹಾಗೂ ವಯಕ್ತಿಕವಾಗಿ ಪ್ರಗತಿಯ ಪಥದತ್ತ ಸಾಗಬೇಕಿದೆ. ಇಂಥಹ ಜವಾಬ್ದಾರಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಬಂದಿರುವ ಸರ್ಕಾರದ ಜವಾಬ್ದಾರಿ ಅದನ್ನು ಮರೆತು ಸರ್ವಾಧಿಕಾರದ ವರ್ತನೆ ತೋರಿದರೆ ಆಶ್ರೋತ್ತರಗಳಿಗೆ ದಕ್ಕೆ ಬರದಂತೆ ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಎಲ್ಲಾ ಪಕ್ಷಗಳಲ್ಲಿರುವ ವೀರಶೈವ-ಲಿಂಗಾಯತ ಜನಪ್ರತಿನಿಧಿಗಳು ಮಾಡಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
ಹಾಗಾಗಿ ರಾಜ್ಯದ ಎಲ್ಲ ಸಮುದಾಯ, ಸಮಾಜಗಳೊಂದಿಗೆ ಸೌಹರ್ದ,ಸ್ನೇಹಪರ ಸಂಬಂಧಗಳನ್ನು ಹೊಂದಿರುವ ವೀರಶೈವ-ಲಿಂಗಾಯತ ಸಮಾಜವು ತನ್ನ ಒಳಿತನ್ನು ಬಯಸುವದು ಹಾಗು ಸರ್ಕಾರಗಳಿಂದ ಅದನ್ನೇ ನೀರೀಕ್ಷಿಸುವುದು ಸಹಜ ಪ್ರಕ್ರಿಯೆ ಎಂದು ಅವರು ಆಭಿಪ್ರಾಯ ಪಟ್ಟಿದ್ದಾರೆ.ಲಿಂಗೈಕ್ಯ ಪಂ.ಪಂಚಾಕ್ಷರಿ ಗವಾಯಿಗಳು ಹಾಗು ಲಿಂ,ಪಂಡಿತ ಪುಟ್ಟರಾಜ ಗವಾಯಿಗಳಂಥ ಮಹನೀಯರು, ಜಾತಿ, ಕುಲಧರ್ಮ ಎನ್ನದೆ ಅಂಧ ಹಾಗು ಅನಾಥರಿಗೆ ಅನ್ನದಾಸೋಹ ಹಾಗೂ ಸಂಗೀತ ಜ್ಞಾನವನ್ನು ಧಾರೆ ಎರೆದು ಅವರಲ್ಲಿ ಸ್ವಾಭಿಮಾನದ ಬದುಕಿಗೆ ಭದ್ರ ಬುನಾದಿ ಹಾಕಿದ್ದಾರೆ. ತುಮಕೂರಿನ ಸಿದ್ದಗಂಗೆಯ ಶ್ರೀಗಳೂ ಸಹ ಜಾತಿ-ಮತ ಧರ್ಮಗಳು ಎಲ್ಲೆಯನ್ನು ಮೀರಿ ಅನ್ನ ಹಾಗೂ ಅಕ್ಷರ ದಾಸೋಹವನ್ನು ಮಾಡುವ ಮೂಲಕ ಮಹಾ ಮಾನತಾವಾದಿಗಳಾಗಿದ್ದಾರೆ.