ಶಿಗ್ಗಾವ್

ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನೆ ಕಾರ್ಯಕ್ರಮ

ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನೆ ಕಾರ್ಯಕ್ರಮ

ಶಿಗ್ಗಾವಿ 20: ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಹಾವೇರಿ ನಗರದ ಗುರು ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್  ಆಯೋಜಿಸಿದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ನನಗೆ ಹೆಚ್ಚು ಮತ ಕೊಟ್ಟು ಆಶೀರ್ವದಿಸಿದ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಲ್ಲದೇ  ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ  ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸ್ಮರಣೆ ಮಾಡಿದರು. 

   ಈ ಕಾರ್ಯಕ್ರಮದಲ್ಲಿ  ಶಿಗ್ಗಾವಿ ಮತ್ತು ಸವಣೂರ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ 2023 ವಿಧಾನಸಭೆ ಚುನಾವಣೆಯ ಆಕಾಂಕ್ಷಿಗಳಾದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಸೋಮಣ್ಣ ಬೇವಿನಮರದ, ಯಾಸಿರ್‌ಖಾನ್ ಪಠಾಣ, ಸಂಜೀವಕುಮಾರ ನೀರಲಗಿ, ನೂರಅಹ್ಮದ್ ಮಾಳಗಿ,  ಎಸ್ ಎಸ್ ಶಿವಳ್ಳಿ, ಶಶಿಧರ್ ಎಲಿಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. 

  ಸಲೀಂ ಅಹ್ಮದವರನ್ನು ಕಿತ್ತೂರು ರಾಣಿ ಚೆನ್ನಮ್ಮನ ಭಾವಚಿತ್ರ ನೀಡಿ ಹನುಮಂತಪ್ಪ ಬಂಡಿವಡ್ಡರ, ಮಂಜುನಾಥ್ ಮುನ್ನಣ್ಣವರ್, ನಿಸಾರ್ ತೋಕಲ್ಲಿ, ಸದ್ದಾಂ ದಿವಾನ್ನವರ ಸೇರಿಕೊಂಡು  ಆತ್ಮೀಯವಾಗಿ ಗೌರವಿಸಿದರು. 

 ಶಿಗ್ಗಾವಿ ತಾಲೂಕ ಬ್ಲಾಕ್ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ, ಮುಜಾಹಿದ್ ದಿವಾನ್‌ಸಾಬನವರ, ಕರೀಂ ಫಯಾಜ್ ಅಹ್ಮದ್, ಚೆನ್ನು ಕುಮಾರ್ ದೇಸಾಯಿ, ರುದ್ರೇಶ್ ಗುಡಗೇರಿ, ಶಂಭುಲಿಂಗಪ್ಪ ಕತ್ತಿ, ನವೀನ್ ಬಂಡೆವಡ್ಡರ್, ಗದಿಗೆಪ್ಪ ಬಳ್ಳಾರಿ ಸೇರಿದಂತೆ ಶಿಗ್ಗಾವ್ ಬಂಕಾಪುರ ಸವಣೂರ ಪುರಸಭೆಯ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರು ಪಕ್ಷದ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು. 


ಸುದ್ದಿ ಓದಿ