ಸಾಧನಾ ಮಹಿಳಾ ಒಕ್ಕೂಟದಿಂದ ಅಭಿನಂದನಾ ಕಾರ್ಯಕ್ರಮ
ಮುದ್ದೇಬಿಹಾಳ : ಸಾಧಿಸುವ ಛಲ ಇರುವ ಹೆಣ್ಣು ಮಕ್ಕಳು ಮನಸ್ಥಿತಿ ಮತ್ತು ಮನಸ್ಥಿತಿಗಳನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ನುಡಿದರು.
ಪಟ್ಟಣದ ಹಳೆಯ ಕಾಯಿಪಲ್ಲೆ ಮಾರುಕಟ್ಟೆಯಲ್ಲಿರುವ ಖಾಸ್ಗತೇಶ್ವರ ಮಠದಲ್ಲಿ, ಸಾಧನಾ ಮಹಿಳಾ ಒಕ್ಕೂಟ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹಳೆಯ ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಜೀವನ ಕಳೆಯಬೇಕಾಗಿದ್ದ ಹೆಣ್ಣು ಮಕ್ಕಳು ಸಧ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವುದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ. ಸಮಾಜ ಗುರುತಿಸುವಂತಹ ಕೆಲಸಗಳನ್ನು ನಾವು ಮಾಡಬೇಕೆ ಹೊರತು, ನಾವು ಮಾಡುವ ಸಮಾಜಮುಖಿ ಕೆಲಸಕ್ಕೆ ಸಮಾಜ ನಮ್ಮನ್ನು ಗುರುತಿಸಲಿಲ್ಲ ಎಂದು ಅಂದುಕೊಳ್ಳಬಾರದು. ಯಾವಾಗಲೂ ನಮ್ಮ ಸಾಧನೆಗಳ ಬಗ್ಗೆ ನಾವು ಹೇಳಿಕೊಳ್ಳಬಾರದು ಅದನ್ನು ಸಮಾಜ ಎತ್ತಿ ತೋರಿಸಬೇಕು ಅಂದಾಗ ನಮ್ಮ ಬದುಕಿಗೊಂದು ಅರ್ಥ ಬರುತ್ತದೆ ಎಂದರು.
ಭಾಜಪಾ ಜಿಲ್ಲಾ ಉಪಾಧ್ಯಕ್ಷೆ ಕಾಶೀಬಾಯಿ ರಂಪೂರ ಮಾತನಾಡಿ, ಪುರುಷರಿಗೆ ವಾರಕ್ಕೊಂದು ದಿನವಾದರೂ ರಜೆ ಸಿಗುತ್ತದೆ. ಆದರೆ ಮಹಿಳೆ ರಜೆ ಇಲ್ಲದೇ, ಸಂಬಳ ಇಲ್ಲದೇ ಮನೆಯ ಒಡೆಯನಿಗಾಗಿ, ಮಕ್ಕಳಿಗಾಗಿ ತನ್ನ ಕುಟುಂಬಕ್ಕಾಗಿ ದುಡಿಯುತ್ತಲೇ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಧನಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಿರಿಜಾಕಡಿ ಮಾತನಾಡಿ, ಸಮಾಜದಲ್ಲಿ ನಡೆಯುವ ಅನ್ಯಾಯ ಅಕ್ರಮಗಳನ್ನು ನೋಡಿಕೊಂಡು ಸುಮ್ಮನಿರದೇ ಅದರ ವಿರುದ್ಧ ಧ್ವನಿ ಎತ್ತಿದಲ್ಲಿ ಮಾತ್ರ ಸಮಾಜ ಸುಧಾರಿಸಲು ಸಾಧ್ಯ ಎಂದರು.
ಸನ್ಮಾನಿತರ ಪರವಾಗಿ ಮಹಾದೇವಿ ನಾಲತವಾಡ, ಅನಿತಾ ಕುಪ್ಪಸ್ತ, ಪುಂಡಲೀಕ ಮುರಾಳ, ಸಿದ್ಧರಾಜ ಹೊಳಿ ಮತ್ತೀತರರು ಮಾತನಾಡಿ, ಸಾಧನಾ ಮಹಿಳಾ ಒಕ್ಕೂಟದ ಸದಸ್ಯರು ಯಾವುದೇ ಸ್ವಾರ್ಥವಿಲ್ಲದೇ ಸಮಾಜಕ್ಕಾಗಿ ಸೇವೆ ನೀಡುತ್ತಿದ್ದಾರೆ. ಪಟ್ಟಣದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಕರೆ ನೀಡಿದರೆ ಸಾಕು ಮಹಿಳೆಯರ ಪಡೆಯೇ ಬರುತ್ತದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಹೆಚ್ಚು ಹೆಚ್ಚು ಸೇವೆ ನೀಡುವಂತಾಗಲಿ ಎಂದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಶಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಸಾಹಿತಿ ಪಾರ್ವತಮ್ಮ ಲಿಂಗದಳ್ಳಿ ಮಾತನಾಡಿದರು. ಪೂಜ್ಯರಾದ ಸಂಗಯ್ಯವಿರಕ್ತಮಠ ಶ್ರೀಗಳು ಸಾನಿಧ್ಯವಹಿಸಿದ್ದರು, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುಗರ್ಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಾದೇವಿ ನಾಲತವಾಡ, ಅನಿತಾ ಕುಪ್ಪಸ್ತ, ಪುಂಡಲೀಕ ಮುರಾಳ, ಸಿದ್ಧರಾಜ ಹೊಳಿ, ಲಕ್ಷ್ಮೀ ಶಿವಯೋಗಿಮಠ, ಸಿದ್ದಮ್ಮ ಒನರೊಟ್ಟಿ, ಭಾರತಿ ಮುದ್ದರಕಿ, ವಿಜಯಲಕ್ಷ್ಮೀ ಹಾದಿಮನಿ, ರೇಣುಕಾ ಹಾದಿಮನಿ, ಶಶಿಕಲಾ ಕೆಂಧೂಳಿ, ಬಸಮ್ಮ ಕೊಳೂರ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಂಗು ಪಾಟೀಲ, ಗಿರಿಜಾ ನಾಶಿ, ಸವಿತಾ ಬಿಂಜಲಭಾವಿ, ನೀಲಮ್ಮಖಾಸ್ಗತಮಠ, ರೇಖಾ ಹೂಗಾರ, ಶಾಂತಾಧೂಪದ, ಲಕ್ಷ್ಮೀಕಡಿ, ಸುನಿತಾಕತ್ತಿ, ಮೀನಾಕ್ಷಿ ಹಿರೇಮಠ, ಸುಗಲಾ ಶಿವಯೋಗಿಮಠ, ವಿಜಯಲಕ್ಷ್ಮೀ ಶಿವಯೋಗಿಮಠ, ಸ್ನೇಹಾ ಹಿರೇಮಠ, ಭಾರತಿ ಹೂಗಾರ, ಶಾಂತವ್ವ ಹೆಬ್ಬಾಳ, ಪಾರ್ವತಿ ಕೋಳೂರ, ಲಕ್ಚ್ಮೀ ಹೊಸಮನಿ, ಅನಸೂಯಾ ಹೂಗಾರ, ಶಕುಂತಲಾ ಲಿಂಗದಳ್ಳಿ, ಸುಮಂಗಲಾ ಮಡಿವಾಳರ ಸೇರಿದಂತೆ ಮತ್ತೀತರರುಇದ್ದರು. ಸರೋಜಾಕೋರಿ, ನಾಗಮ್ಮದಶವಂತ, ಜ್ಯೋತಿದಡ್ಡಿ, ರೇಣುಕಾ ಹಳ್ಳೂರ ಕಾರ್ಯಕ್ರಮ ನಿರ್ವಹಿಸಿದರು.