ಮಹಲಿಂಗಪುರ

ಪೆಂಡಾರಿಗೆ ವಾರ್ಡಿನ ಜನ ಪ್ರೀತಿಯಿಂದ ಅಭಿನಂದನೆ ಸಮಾರಂಭ

ಪೆಂಡಾರಿಗೆ ವಾರ್ಡಿನ ಜನ ಪ್ರೀತಿಯಿಂದ ಅಭಿನಂದನೆ ಸಮಾರಂಭ

ಮಹಾಲಿಂಗಪುರ 13: ಸ್ಥಳೀಯ ಪುರಸಭೆಯ 3ನೇ ವಾರ್ಡಿಗೆ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾದ 76 ವರ್ಷದ ಸಜನಸಾಬ ಪೆಂಡಾರಿ ಅವರಿಗೆ ವಾರ್ಡಿನ ಜನ ಪ್ರೀತಿಯಿಂದ ಅಭಿನಂದನೆ ಸಮಾರಂಭವನ್ನು ಏರ್ಪಡಿಸಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಅತಿಥಿ ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿ, ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ವಾರ್ಡಿನ ಅಭಿವೃದ್ಧಿ ಕಾರ್ಯದಲ್ಲಿ ಸಜನಸಾಹೇಬರ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದರು.

ಹಿರಿಯ ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿ ಕಳೆದ 50 ವರ್ಷಗಳಿಂದ ಸರ್ವ ಸಮಾಜಗಳ ಸೇವೆ ಮಾಡುತ್ತ ಬಂದಿರುವ ಸಜನಸಾಬರು ಭಾವೈಕ್ಯತೆಗೆ ಹೆಸರಾಗಿದ್ದು ಅವರ ಉತ್ತಮ ಸೇವೆ ವಾರ್ಡಿನ ಜನತೆಗೆ ಸಲ್ಲಲಿ ಎಂದರು.

ಈ ಸಮಾರಂಭದಲ್ಲಿ ಪುರಸಭೆ ಸದಸ್ಯರಾದ ಬಸನಗೌಡ ಪಾಟೀಲ, ಪ್ರಹ್ಲಾದ ಸಣ್ಣಕ್ಕಿ, ರಾಜು ಚೆಮಕೇರಿ, ಚನಬಸು ಯರಗಟ್ಟಿ, ನಗರದ ಗಣ್ಯರಾದ ಮಾಹಲಿಂಗಪ್ಪ ಕೋಳಿಗುಡ್ಡ, ಅರ್ಜುನ್ ದೊಡಮನಿ, ಲಕ್ಷ್ಮಣ ಮಾಂಗ, ಜಮೀರ ಯಕ್ಸಂಬಿ, ಬಾಲಕೃμÀ್ಣ ಮಾಳವದೆ, ರಾಜು ಕೋಳಿಗುಡ್ಡ, ಸಿರಾಜ ಪೆಂಡಾರಿ, ಬಸು ಮಡ್ಡೆನ್ನವರ, ಪೈಗಂಬರ ಪೆಂಡಾರಿ, ಚೆನ್ನಪ್ಪ ರಾಮೋಜಿ, ಸಲೀಮ ಕರೋಶಿ, ನೂರಸಾಬ ಪೆಂಡಾರಿ, ಬಸವರಾಜ ಪರಿಠ, ಈರಪ್ಪ ದಿನ್ನಿಮನಿ, ಅಶೋಕ ಅಂಗಡಿ, ಪಕ್ರುದ್ದಿನ ಕುಂಟೋಜಿ, ಮುಸ್ತಾಖ ಚಿನಗುಂಡಿ, ಬಸವರಾಜ ಚೆಮಕೇರಿ ಸೇರಿದಂತೆ ಹಲವರು ಇದ್ದರು ಖ್ಯಾತ ಜನಪದ ಗಾಯಕ ಎಂ ಡಿ ಆನಂದ ಕಾರ್ಯಕ್ರಮ ನಿರೂಪಣೆ ಮಾಡಿದರು.

ಸುದ್ದಿ ಓದಿ