ಹರ್ಷಿತಾಳಿಗೆ ಅಭಿನಂದನೆ
ಮಹಾಲಿಂಗಪುರ 23: ಹೊಸ ದಿಗಂತ ಪತ್ರಿಕೆಯ ವರದಿಗಾರರು ಹಾಗೂ ಸ್ಥಳೀಯ ಕಾನಿಪ ಕಾರ್ಯದರ್ಶಿ ನಾರನಗೌಡ ಉತ್ತಂಗಿ ಇವರ ಪುತ್ರಿ ಕು. ಹರ್ಷಿತಾ ಉತ್ತಂಗಿ ಜಮಖಂಡಿ ತುಂಗಳ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿ ಯು ಸಿ ಯಲ್ಲಿ ಶೇ. 97 (582) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.ಈ ಸಾಧನೆಗೆ ಪುರಸಭೆ ಸದಸ್ಯರಾದ ಯಲ್ಲನಗೌಡ ಪಾಟೀಲ, ಶೇಖರ್ ಅಂಗಡಿ, ಜಾವೇದ್ ಭಾಗವಾನ, ನಿಂಗಪ್ಪ ಬಾಳಿಕಾಯಿ ವರದಿಗಾರರಾದ ಜಯರಾಮ ಶೆಟ್ಟಿ, ಮೀರಾ ತಟಗಾರ, ಲಕ್ಷ್ಮಣ ಕಿಶೋರ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.