ಅರ್ಥಪೂರ್ಣ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ : ಸಿಂಧೂರ
ಸಂಘಟನೆ ಕೇವಲ ಹೋರಾಟ ಮಾಡಿದರೆ ಸಾಲದು ;
ಬಳ್ಳಾರಿ 09: ನವಕರ್ನಾಟಕ ಯುವಶಕ್ತಿ ಸಂಘಟನಯಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡ 13ನೇ ವರ್ಷದ ಮಹಾರಾತ್ರಿ ಮನೋರಂಜನೆ ಕಾರ್ಯಕ್ರಮ ನಡೆಸುತ್ತಿರುವುದು ವಿಶೇಷ ಮತ್ತು ಅರ್ಥಪೂರ್ಣವಾದ ಕಾರ್ಯಕ್ರಮ, ಸಂಘಟನೆಯಿಂದ ಕೇವಲ ಹೋರಾಟ ಮಾತ್ರವಲ್ಲದೆ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ನಡೆಸಿ ಸಮಾಜದಲ್ಲಿ ಶಾಂತಿ ಮತ್ತು ಧರ್ಮ ಕಾಪಾಡುವಂತ ಕಾರ್ಯಕ್ರಮ ಸಹ ನಡೆಸುತ್ತಿದೆ, ಈ ಸಂಘಟನೆಯ ಪದಾಧಿಕಾರಿಗಳು ಮತ್ತು ರಾಜ್ಯ ಉಪಾಧ್ಯಕ್ಷರಾದ ಸಿದ್ಮಲ್ ಮಂಜುನಾಥ್ ಶ್ಲಾಘನೀಯರು ಎಂದು ಸರ್ಕಲ್ ಇನ್ಸ್ಪೆಕ್ಟರ್ ಸಿಂದೂರ್ ತಿಳಿಸಿದರು. .
ಅವರು ನಗರದ ತೇರುಬೀದಿಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನವಕರ್ನಾಟಕ ಯುವಶಕ್ತಿ ಸಂಘಟನೆಯಿಂದ 13ನೆ ವರ್ಷದ ಮಹಾರಾತ್ರಿ ಮನೋರಂಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷ ನಿಷ್ಠಿರುದ್ರ್ಪ, ಸಂಘಟನೆಯವತಿಯಿಂದ ಕನ್ನಡ ನಾಡಿನ ಗಡಿ, ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಗೆ ದಕ್ಕೆಯಾದಲ್ಲಿ ತಕ್ಷಣ ಬೀದಿಗೆ ಬಂದು ಹೋರಾಟ ಮಾಡುವುದು ನವ ಕರ್ನಾಟಕ ಯುವಶಕ್ತಿ ಸಂಘಟೆನೆ, ಈ ಸಂಘನೆಯಿಂದ ಮಹಾರಾತ್ರಿ ಮನೋರಂಜನೆ ಧಾರ್ಮಿಕ ಕಾರ್ಯಕ್ರಮ ಸತತವಾಗಿ ಹದಿಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಷಯ ಎಂದರು.
ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕಮ್ಮರಚೇಡು ಮಠದ ಕಲ್ಯಾಣ ಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಯ್ಯನಗೌಡ, ವಾಣಿಜ್ಯ ತೆರಿಗೆಗಳ ಉಪ ಆಯುಕ್ತರಾದ ರಂಗಸ್ವಾಮಿ ಎಚ್ ಸೇರಿದಂತೆ ವೀರಶೈವ ವಿದ್ಯಾವರ್ಧಕ ಸಂಘದ ಹಿರಿಯರ ತಂಡದ ಮುಖಂಡರಾದ ಕೋಳೂರು ಮಲಿಕಾರ್ಜುನಗೌಡ, ಯುವಕ ವೃಂದದ ಕಣೆಕಲ್ ಮಹಾಂತೇಶ್, ಬಿ ಕಟ್ಟೇಗೌಡ, ಹಾಗೂ ನವಕರ್ನಾಟಕ ಯುವಶಕ್ತಿ ಸಂಘಟನೆಯಲ ಎಂ ದೇವೇಶ್, ಹಲಕುಂದಿ ರವಿಕುಮಾರ್, ಕೇಣಿ ಬಸವರಾಜ್, ಮುಂಡಾಸದ ಮಲ್ಲಿಕಾರ್ಜುನ, ಸಿದ್ಮಲ್ ಸಂತೋಷ್ ಸೇರಿದಂತೆ ಸಂಘಟೆನೆ ಇದತರೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಕ್ಷಿತಿ ಮ್ಯೂಸಿಕಲ್ ಇವೆಂಟ್ಸ್, ಕೊಪ್ಪಳ ತಂಡ ಇವರು ಹಾಸ್ಯ ಮತ್ತು ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜ್ಯೂನಿಯರ್ ಉಪೇಂದ್ರ, (ಗವೀಶ್ ಮಂಗಳೂರು) ವೀರೇಶ್, ಅನಿಲ್ಕುಮಾರ್, ಮಿಮಿಕ್ರಿ ಮಾರೇಶ್, ಗಾಯಕಿ ಶ್ವೇತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರನ್ನಾಗಿ ಬಿ ಗಿರಿಬಾಬು, ಸಂಘಟನಾ ಕಾರ್ಯದರ್ಶಿಯಾಗಿ ಜಿ ವೀರನಗೌಡ ಇವರನ್ನು ನೇಮಕ ಮಾಡಲಾಯಿತು.