ಬಳ್ಳಾರಿ

4ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯ ಸಮಾರೋಪ

4ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯ ಸಮಾರೋಪ

ಬಳ್ಳಾರಿ 04: ಪಂಚಾಕ್ಷರಿ ಮರ್ಷಿಯಲ್ ಆಟ್ಸ್‌ ಟ್ರಸ್ಟ್‌ ಕಳೆದ 20 ವರ್ಷಗಳಿಂದ ಮಕ್ಕಳಿಗೆ ಉಚಿತವಾಗಿ ಕರಾಟೆ, ಯೋಗ, ಧಾನ್ಯವನ್ನು ಕಲಿಸುತ್ತದೆ. ಜೊತೆಗೆ ಸುಮಾರು ವರ್ಷಗಳಿಂದ, ಇಂತಹ ಹಲವಾರು ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಈ ಸ್ಪರ್ಧೆಯನ್ನು ಕೂಡಾ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿ ಯಶಸ್ವಿಯಾಗಿದ್ದಾರೆಎಂದು ಮಾಜಿ ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್ ಹೇಳಿದರು. 

ಅವರು ದಿ. 03ರಂದು ಬಳ್ಳಾರಿ ನಗರದ ವಾಲ್ಮೀಕಿ ಭವನದಲ್ಲಿ ಸಂಜೆ 5.30ಕ್ಕೆ ಜರುಗಿದ 4ನೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. 

ಇವರ ಸೇವೆಯನ್ನು ಗಮನಿಸಿ ನಮ್ಮ ಅಧಿಕಾರದ ಅವಧಿಯಲ್ಲಿ ಟ್ರಸ್ಟಿಗೆ ನಾಗರೀಕ ನಿವೇಶನವನ್ನು ನೀಡಿರುತ್ತೇವೆ. ಈ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದ ಸುಮಾರು 1000ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿ ಮಾಡಿದಕ್ಕೆ ನಾನು ಎಲ್ಲಾ ತೀರ್ಪುಗಾರರಿಗೆ, ತರಬೇತಿದಾರರಿಗೆ, ಕರಾಟೆ ಪಟುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕರಾಟೆ ಕಲೆಯಿಂದ ಮಕ್ಕಳಲ್ಲಿ ದೈಹಿಕ, ಮಾನಸಿಕ ಮತ್ತು ಉತ್ತಮ ಆರೋಗ್ಯ ದೊರೆಯುತ್ತದೆ, ಮುಂದೆ ಸಧೃಢ ಸಮಾಜ ನಿರ್ಮಾಣವಾಗಲು ಕರಾಟೆ ಸಹಾಯಕ ಕಾರ್ಯವಾಗಿದೆ. ಸ್ಪರ್ಧೆ ಏರ್ಪಡಿಸಿ ಯಶಸ್ವಿಗೊಳಿಸಿದಕ್ಕೆ ಟ್ರಸ್ಟನ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಳ್ಳಾರಿ ಉದ್ದಿಮೆದಾರ ಪೋಲೋ ಪ್ರವೀಣ್ ಅವರು ಮಾತನಾಡಿ ಟ್ರಸ್ಟ್‌ ಬಳ್ಳಾರಿ ನಗರದಲ್ಲಿ ಕರಾಟೆ ಭವನವನ್ನು ಕಟ್ಟುವ ವಿಷಯ ತಿಳಿದು, ಸಂತೋಷವಾಯಿತು. ಕರಾಟೆ ಭವನವನ್ನು ಕಟ್ಟಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.  

ವಿಶೇಷ ಅತಿಥಿಗಳಾಗಿ ಭಾಗವಹಿಸಿದ ವಕೀಲರು ಹಾಗೂ ಸಂಪಾದಕರು ವಿಜಯ್‌ಕುಮಾರ್, ಅವರು ಮಾತನಾಡಿ ಜಿಲ್ಲಾ ಮಟ್ಟದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಏರಿ​‍್ಡಸಿ ಯಶಸ್ವಿಯಾಗುವುದು ಸುಲಭದ ಮಾತಲ್ಲ ಆದರೆ ಪಂಚಾಕ್ಷರಿ ಮರ್ಷಿಯಲ್ ಆಟ್ಸ್‌ ಟ್ರಸ್ಟ್‌ ನಿಸ್ವಾರ್ಥ ಸೇವೆಯನ್ನು ನೋಡಿ ಎಲ್ಲಾರು ಅವರಿಗೆ ಸಹಕಾರ ನೀಡಿದ್ದರಿಂದ ಈ ಸ್ಪರ್ಧೆ ಯಶಸ್ವಿಯಾಗಿದೆ. ಮುಂದಿನ ದಿನಮಾನದಲ್ಲಿ ಇಂತಹ ಹಲವಾರು ಸ್ಪರ್ಧೆಗಳನ್ನು ಯಶಸ್ವಿಯಾಗಿ ನಡೆಸಬೇಕು, ಸ್ಪರ್ಧೆಯಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆಂದು ತಿಳಿಸಿದರು. 

ಅಖಿಲ ಭಾರತ ವೀರಶೈವ ಮಹಾಸಭಾದ ಆಂಧ್ರ ಪ್ರದೇಶ ರಾಜ್ಯಾಧ್ಯಕ್ಷ ದಂಡಿನ ಶಿವಾನಂದನವರು,  ಚಾನಾಳ್ ಶೇಖರ್, ಅ.ಭಾ.ವೀ.ಮ.ಸಭಾ, ಜಿಲ್ಲಾಧ್ಯಕ್ಷರು, ಬಿ.ಜೆ.ಪಿ. ಹಿರಿಯ ಮುಖಂಡರಾದ ರಾಮಲಿಂಗಪ್ಪ ನವರು, ಮರ್ಚೆಡು ಮಲ್ಲಿಕಾರ್ಜುನಗೌಡ್ರು ಉದ್ದಿಮೆದಾರರು, ಎಸ್‌.ಮಲ್ಲನಗೌಡ್ರು, ಬಿ.ಜೆ.ಪಿ.ಮುಖಂಡರು, ವೇಮಣ್ಣ, ಬಿ.ಜೆ.ಪಿ. ಮುಖಂಡರು, ಹಲಕುಂದಿ ವೀರನಗೌಡ್ರು, ಬಿ.ಜೆ.ಪಿ.ನಗರ ಉಪಾಧ್ಯಕ್ಷರು, ವಿಕ್ರಮ್ ಮಹಿಪಾಲ್, ದರೂರು ಪುರುಷೋತ್ತಮಗೌಡ್ರು, ಹನುಮಂತಪ್ಪ ಮ.ಪಾ.ಸದಸ್ಯರು, ಕೆ.ಅಶೋಕ್ ಕಾರ್ಯದರ್ಶಿಗಳು, ವಿಶ್ವ ಹಿಂದೂಪರಿಷತ್, ಶಬರಿ ರವಿಚಂದ್ರನ್, ಹೆಚ್‌.ಎಂ.ಕಿರಣ್, ಜಿ.ವಿರೇಶ್, ವಕೀಲರು ಮುರಡಿ, ಗಂಗಾವತಿ ವಿರೇಶ್, ಅಂಗಡಿ ಶಂಕರ್, ಹೆಚ್‌.ಕೆ.ಗೌರಿಶಂಕರ್‌ಸ್ವಾಮಿ, ಜಾಲಿಹಾಳ್ ಶ್ರೀಧರಗೌಡ, ಕೊಳೂರು ಚಂದ್ರಶೇಖರ್‌ಗೌಡ, ಶ್ರೀ ಸುರೇಶ್, ವಕೀಲರು ರಾಂಪುರ ಮುಂತಾದವರು ಭಾಗವಹಿಸಿದ್ದರು.  

ಎರಡು ದಿನ ನಡೆದ ಸ್ಪರ್ಧೆಯಲ್ಲಿ ಸುಮಾರು 1500ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು. ಅದರಲ್ಲಿ ಮೊದಲನೆ ಟೀಮ್ ಚಾಂಪಿಯನ್ ಶೀಪ್ ಟ್ರೋಪಿಯನ್ನು ಹುಬ್ಬಳಿಯ ಅಣ್ಣಪ್ಪ ಮಾರ್ಕಲ್ ಅವರ ತಂಡೆ ಪಡೆಯಿತು. ಎರಡನೇ ಟೀಮ್ ಚಾಂಪಿಯನ್ ಶೀಪ್ ಟ್ರೋಪಿಯನ್ನು ಬಳ್ಳಾರಿ ಕರಾಟೆ ಶಿಕ್ಷಕರ ಸಂಘದ ವಿದ್ಯಾರ್ಥಿಗಳು ಪಡೆದರು. ಮೂರನೇ ಟೀಮ್ ಚಾಂಪಿಯನ್ ಶೀಪ್ ಟ್ರೋಪಿಯನ್ನು ತೆಲಂಗಾಣ ರಾಜ್ಯದ ಸನ್‌ಸಾಯಿ ರಾಜು ಅವರ ಕರಾಟೆ ತಂಡ ಮತ್ತು ಧಾರವಾಡದ ಕೋಶಿ ಶ್ರೀಕಾಂತ ಅಗ್ನಿಗೋತ್ರಿಯವರ ತಂಡ ಪಡೆಯಿತು. ಟೀಮ್ ಚಾಂಪಿಯನ್ ಶೀಪ್ ಟ್ರೋಪಿಯನ್ನು ಗದುಗಿನ ಹಿರಿಯ ಶಿಕ್ಷಕರಾದ ಪರಶುರಾಮ್ ಹಬೀಬ್ ಅವರು ಪ್ರಧಾನ ಮಾಡಿದರು.  

ಎರಡು ದಿನ ನಡೆದ ಸ್ಪರ್ಧೆಯಲ್ಲಿ ಮಕ್ಕಳಿಗೆ ಉಪಹಾರ, ಊಟ, ವಸತಿ ವ್ಯವಸ್ಥೆಯನ್ನು ಮಾಡಲಾಯಿತು. ವಿವಿಧ ಶ್ರೇಣಿಯಲ್ಲಿ ಕಟಾ ಮತ್ತು ಕುಮ್ಮತಿ ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ಕರಾಟೆ ಪಟುಗಳಿಗೆ ಪ್ರಮಾಣ ಪತ್ರ ಮತ್ತು ಆಕರ್ಷಕ ಶೀಡ್‌ಗಳನ್ನು ಮತ್ತು ಪದಕಗಳನ್ನು ನೀಡಲಾಯಿತು. 

ಸ್ಪರ್ಧೆಯ ಮುಖ್ಯಸ್ಥರಾಗಿ ಸನ್‌ಸಾಯಿ ಕೃಷ್ಣನ್‌ಗೌಳಿ, ಎ.ಕೆ.ಎಫ್ ತೀರ​‍್ುಗಾರರು ಗುಲ್ಬಾರ್ಗ ಮತ್ತು ಸನ್‌ಸಾಯಿ ಭಾಗರ್ವರೆಡ್ಡಿ, ಪ್ರಧಾನ ಕಾರ್ಯದರ್ಶಿಗಳು, ಆ.ಕ.ಸ.ಕ, ಬೆಂಗಳೂರು ಇವರು ವಹಿಸಿದ್ದರು.  

ಟ್ರಸ್ಟ್‌ನ ಅಧ್ಯಕ್ಷ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ  ಅಭಿನಂದನೆಗಳನ್ನು ತಿಳಿಸಿದರು. 


ಸುದ್ದಿ ಓದಿ