25ರಂದು ರನ್ನ ಬೆಳಗಲಿಯಲ್ಲಿ ಶಂಕರಾಚಾರ್ಯರ ಜಯಂತಿಗೆ ತೀರ್ಮಾನ
ಮಹಾಲಿಂಗಪುರ 22: ಮುಧೋಳ ತಾಲೂಕಿನ ಸಮೀಪದ ರನ್ನಬೆಳಗಲಿ ಗ್ರಾಮದ ಶ್ರೀಗುರು ಮಹಾಲಿಂಗೇಶ್ವರ ಅನುಭವ ಮಂಟಪ ಸಭಾಂಗಣದಲ್ಲಿ ಮಾರ್ಚ್ 25ರಂದು ಗುರುವಾರ ದಿವಸ ಮುಂಜಾನೆ 10.30ಕ್ಕೆ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವವನ್ನು ಆಚರಿಸಲು ಭಾನುವಾರ ಕರೆದ ಜಂಗಮ ಸಮಾಜದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಮಾಜದ ಪ್ರಮುಖರು ತಿಳಿಸಿದ್ದಾರೆ.ವೀರಶೈವ ಪಂಚಪೀಠಾಧೀಶ್ವರರಲ್ಲಿ ಒಬ್ಬರಾದ ಶ್ರೀಶೈಲ್ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮಿಗಳು ಸಾನಿಧ್ಯವನ್ನು ವಹಿಸಲಿದ್ದಾರೆ. ಪ್ರಭುಲಿಂಗ ಶುಗರ್ಸ್ ಅಧ್ಯಕ್ಷ ಜಗದೀಶ್ ಗುಡಗುಂಟಿಮಠ ಉದ್ಘಾಟನೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಂಗಮ ಸಮಾಜದ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹಾಂತೇಶ ಹಿಟ್ಟಿನಮಠ ಹಾಗೂ ಕಾಡಯ್ಯ ಗಣಾಚಾರಿ ವಹಿಸುವರು.
ಜಿಲ್ಲಾ ಪಂಚಮಸಾಲಿ ಅಧ್ಯಕ್ಷ ಧರೇಪ್ಪ ಸಾಂಗ್ಲಿಕರ್ ಹಾಗೂ ಶ್ರೀರಾಮಸೇನೆಯ ಮುಖಂಡ ಮಹಾಲಿಂಗಪ್ಪ ಗುಂಜಿಗಾವಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಆದಿ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯನ್ನು ರನ್ನ ವೃತ್ತದಿಂದ ಅನುಭವ ಮಂಟಪಕ್ಕೆ ಸ್ವಾಗತ ಮಾಡಿಕೊಂಡು ಶ್ರೀಗಳು ಪೂಜೆ ನೆರವೇರಿಸುವರು. ನಂತರ ಮುಖ್ಯ ಅತಿಥಿಗಳ ಪ್ರಾಸ್ತಾವಿಕ ನುಡಿಗಳು ಹಾಗೂ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ಜರುಗುವುದು. ಸದ್ಭಕ್ತರಿಗೆ ಮಧ್ಯಾಹ್ನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಯೋಜಕರು ತಿಳಿಸಿದ್ದಾರೆ.ಸಿದ್ಧರಾಮಯ್ಯ ಮಠಪತಿ, ಕಾಡಯ್ಯ ಗಣಾಚಾರಿ, ರುದ್ರಯ್ಯ ಸಾಲಿಮಠ, ಶಂಕ್ರಯ್ಯ ಹಿರೇಮಠ, ಸದಾಶಿವ ಹಿರೇಮಠ, ಮಹಾಲಿಂಗಯ್ಯ ಗಣಾಚಾರಿ, ಡಾ.ಅಮೃತಯ್ಯ ಕರಡಿ, ಶ್ರೀಶೈಲ್ ಗಣಾಚಾರಿ, ಈರಯ್ಯ ಮೆಟಗುಡ್ಡ, ಶಿವಯ್ಯ ಮೆಟಗುಡ್ಡ,, ಶಿವಲಿಂಗಯ್ಯ ಮಠಪತಿ, ದುಂಡಯ್ಯ ಮೆಟಗುಡ್ಡ, ಈರಯ್ಯ ಗಣಾಚಾರಿ, ಮಹಾದೇವ ಕಾಡದೇವರ, ಮಹಾದೇವ ಕಿರಸೂರಮಠ ಇನ್ನು ಮುಂತಾದವರಿದ್ದರು.