ಮುದ್ದೆಬಿಹಾಲ್

ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಿ: ಡಾ. ರಾಜಶೇಖರ ವಿಲಿಯಮ್ಸ್‌

ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಿ: ಡಾ. ರಾಜಶೇಖರ ವಿಲಿಯಮ್ಸ್‌

ಮುದ್ದೇಬಿಹಾಳ 20: ದೇಶದಲ್ಲಿ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೊಂಡಿರುವ ಹಿನ್ನೆಯಲ್ಲಿ ಸಧ್ಯ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೊಂಡಿದೆ ಕಾರಣ ಎಲ್ಲ ರಾಜಕೀಯ ಪಕ್ಷಗಳು, ಆಯಾ ಪಕ್ಷಗಳ ಮುಖಂಡರು ಪದಾಧಿಕಾರಿಗಳು,  ನೀತಿ ಸಂಹಿತೆ ಯನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಶಾಂತಿಯುತ ಚುನಾವಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರ ತಾಲೂಕಾ ಚುನಾವಣಾ ಅಧಿಕಾರಿ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್‌ ತಿಳಿಸಿದರು. 

ಪಟ್ಟಣದ ತಾಲೂಕಾ ಆಡಳಿತ ಭವನದ ಮುಖ್ಯ ಕಚೇರಿಯಲ್ಲಿ ಮಾತನಾಡಿದ  ಅವರು ಸರ್ವ ಪಕ್ಷಗಳ ರಾಜಕೀಯ ಪಕ್ಷಗಳ ಮುಖಂಡರುಗಳ ಸಭೆ ನಡೆಸಿ ಮಾದರಿ ನೀತಿ ಸಂಹಿತೆ ಪಾಲನೆ ಕುರಿತು ಉಪಯುಕ್ತ ಮಾಹಿತಿ ನೀಡಿದ ಅವರು ಈಗಾಗಲೇ ತಮಗೆಲ್ಲ ತಿಳಿದಿರುವಂತೆ ಚುನಾವಣೆಯ ನೀಯಮಗಳನ್ನು  ಪಾಲಿಸಲು ಮುಂದಾಗಬೇಕು, ಈ ವೇಳೆ ಮದುವೆ, ಮುಂಜಿವೆ, ಜಾತ್ರೆ, ಸಭೆ ಸಮಾರಂಭಗಳನ್ನು ನಡೆಸುವವರು ಚುನಾವಣಾ ಆಯೋಗದಿಂದ ಪರವಾನಿಗೆ ಪಡೆದುಕೊಳ್ಳುವುದು ಜೊತೆಗೆ ಸಂಪೂರ್ಣ ನೀತಿ ಸಂಹಿತ ಮಾಹಿತಿ ಪಡೆದುಕೊಳ್ಳಲು ದೂರುಗಳನ್ನು ನೀಡಲು ಏಕಗವಾಕ್ಷಿ ಎನ್ನುವ ವಿನೂತನ ನಿಯಮ ಆರಂಭಿಸಲಾಗಿದೆ ಅದಲ್ಲದೇ ಸುವಿಧಾ ತಂತ್ರಾಂಸವನ್ನು ಬಳಸಿಕೊಳ್ಳಬಹುದಾಗಿದೆ.  1 ಚುನಾವಣಾ ವೆಚ್ಚ ಪರೀವೀಕ್ಷಣಾ ತಂಡ  ಸೇರಿದಂತೆ ಚೇಕ್ ಪೋಸ್ಟ್‌ ಗಳಲ್ಲಿ ಪರೀವೀಕ್ಷಣಾ ತಂಡವೂ ಅಕ್ರಮ ನಡೆಯದಂತೆ ಜಾಗೃತಿ ವಹಿಸಿರುತ್ತದೆ  

ತಹಶೀಲ್ದಾರ್ ಬಸವರಾಜ ನಾಗರಾಳ ಮಾತನಾಡಿ ಸಧ್ಯ ಲೋಕಸಭಾ ಚುನಾವಣೆಯನ್ನು ಮತಕ್ಷೇತ್ರದಲ್ಲಿ ಯಾವೂದೇ ಗೊಂದಲ ಹಾಗೂ ಆಕ್ರಮಗಳು ನಡೆಯದಂತೆ ಸೂಲಲಿತವಾಗಿದೆ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ದಂತೆ ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಿಷ್ಪಕ್ಷಪಾತದಿಂದ ಚುನಾವಣೆ ನಡೆಸಲು ಮತಕ್ಷೇತ್ರದ  ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕರ್ತರು ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳೊಂದಿಗೆ ಸಲಹೇ ಸಹಕಾರ ನೀಡುವುದು ಅತ್ಯಗತ್ಯವಾಗಿದೆ. ಜೊತೆಗೆ ಚುನಾವಣಾ ವೇಳೆ ಮತದಾರರಿಗೆ ಮತ್ತು ವಿಶೇಷಚೇತನ, ವಯೋವೃದ್ಧ ಮತದಾರರಿಗೆ ಯಾವೂದೇ ತೊಂದರೆಯಾಗದಂತೆ ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಮತಗಟ್ಟೆ ಸಿಬ್ಬಂದಿಗಳಿಗೆ ಯಾವೂದೇ ತೊಂದರೆಯಾಗದಂತೆ ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಶೌಚಾಲಯ ಸೇರಿದಂತೆ  ಮೂಲಬೂತ ಸೌಲಭ್ಯಗಳನ್ನು ಒದಗಿಸಲಾಗುವುದು.  

ಮತಕ್ಷೇತ್ರದಲ್ಲಿ 11939 ಪುರುಷ, 110030 ಮಹಿಳೆ ಮತ್ತು 20 ಇತರೆ ಸೇರಿ ಒಟ್ಟು 221993 ಮತದಾರರಿದ್ದಾರೆ. 245 ಮತಗಟ್ಟೆ ಸ್ಥಾಪಿಸಲಾಗಿದೆ. ತಂಗಡಗಿ, ನಾರಾಯಣಪುರ ಚೆಕ್‌ಪೋಸ್ಟ್‌ ಮತ್ತು - ಮಿಣಜಗಿ ಕ್ರಾಸ್ ಸೇರಿ ಮೂರು ಕಡೆಗಳಲ್ಲಿ ಚೆಕ್‌ಪೋಸ್ಟ್‌ ಪ್ರಾರಂಭಿಸಲಾಗಿದೆ. 08356-220227, 9 ಎಫ್‌ಎಸ್ ತಂಡ, 20 ಜನ ಸೆಕ್ಟರ್ ಆಫೀಸರ್, 9 ಎಸ್ ಎಸ್‌ಟಿ,  3 ವಿಎಸ್‌ಟಿ ತಂಡ 5 ಕ್ರಿಟಿಕಲ್ ಮತಗಟ್ಟೆಗಳು,. ಮಿಣಜಗಿಯ ಮತಗಟ್ಟೆ ಸಂಖ್ಯೆ 2 (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-2), ಕಾಳಗಿಯ ಮತಗಟ್ಟಿ ಸಂಖ್ಯೆ 169 (ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಲಭಾಗದ ಒಂದನೇ ಕೊಠಡಿ), ತಂಗಡಗಿಯ ಮತಗಟ್ಟೆ ಸಂಖ್ಯೆ 225 (ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಬಲಬಾಗದ ಕೊಠಡಿ ಸಂಖ್ಯೆ-3), ತಾಳಿಕೋಟಿ ಪಟ್ಟಣದ ಮತಗಟ್ಟೆ ಸಂಖ್ಯೆ 30 (ಸರ್ಕಾರಿ ಉರ್ದು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ-3) ಮತ್ತು ಕೋಳೂರನ ಮತಗಟ್ಟೆ ಸಂಖ್ಯೆ 208 (ಸರ್ಕಾರಿ ಮಾದರಿ ಹಿರಿಯ ಪ್ರಾತಮಿಕ ಶಾಲೆಯ ಹಳ ಕಟ್ಟಡದ ಎಡಭಾಗದ ಕೊಠಡಿ ಸಂಖ್ಯೆ-6) ಇವುಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರ್ತಿಸಲಾಗಿದೆ ಎಂದರು. 

ಜಮಾ ಅಭ್ಯರ್ಥಿಗೆ 95 ಲಕ್ಷ ರೂ. ಖರ್ಚಿನ ಮಿತಿ ಇದೆ. ಮತಕ್ಷೇತ್ರದಲ್ಲಿ ಏನೇ ಖರ್ಚು ಮಾಡಿದರೂ ಅದು ಸಂಬಂಧಿಸಿದ ಪಕ್ಷದ ಅಭ್ಯರ್ಥಿಗಳ ಲೆಕ್ಕದ. ಖಾತೆಗೆ ಆಗುತ್ತದೆ. ಚೆಕ್ ಪೋಸ್ಟ್‌ಗಳಲ್ಲಿ 'ವಾಹನಗಳ ತಪಾಸಣೆ ನಡೆಸುವುದರಿಂದ ಪ್ರಯಾಣಿಕರು 50,000ಕ್ಕಿಂತ ಹೆಚ್ಚಿನ ನಗದು ಸಾಗಿಸುವಂತಿಲ್ಲ ಹೆಚ್ಚಿನ ನಗದು ಇದ್ದಲ್ಲಿ ಅದಕ್ಕೆ ದಾಖಲೆ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಿಟ್ಟೂರ, ಕಾಂಗ್ರೆಸ್‌ನ ಗೋಪಿ ಮಡಿವಾಳರ, ಜೆಡಿಎಸ್ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ