ರಾಣೆಬೆನ್ನೂರ

ಸಮರ್ಥ ಗುರುಗಳಿಂದ ಸಮರ್ಥ ಶಿಷ್ಯರು ನಿರ್ಮಾಣವಾಗುತ್ತಾರೆ- ಹೊನ್ನಾಳಿ ಶ್ರೀಗಳು

ಸಮರ್ಥ ಗುರುಗಳಿಂದ ಸಮರ್ಥ ಶಿಷ್ಯರು ನಿರ್ಮಾಣವಾಗುತ್ತಾರೆ- ಹೊನ್ನಾಳಿ ಶ್ರೀಗಳು

ರಾಣೇಬೆನ್ನೂರು : ಶಿಷ್ಯನ ವ್ಯಕ್ತಿತ್ವವನ್ನು ರೂಪಿಸಿ, ಅವನೊಳಗಿನ ಸುಪ್ತ ಶಕ್ತಿಯನ್ನು ಜಾಗೃತಗೊಳಿಸುವ ಮಹಾನ್ ಮಾರ್ಗದರ್ಶನವು  ಸಮರ್ಥ ಗುರುಗಳಿಂದ ಸಮರ್ಥ ಶಿಷ್ಯರು ನಿರ್ಮಾಣವಾಗುತ್ತಾರೆ ಎಂದು ಹೊನ್ನಾಳಿ ಹಿರೇಲ್ಮಠದ ಶ್ರೀ, ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.  ಅವರು ಬುಧವಾರ ಸಂಜೆ ಮೃತುಂಜಯ ನಗರದ ಚೆನ್ನೇಶ್ವರ ಮಠದಲ್ಲಿ ನಡೆದ 308ನೇ ಹುಣ್ಣಿಮೆ ಮಾಸಿಕ ಜ್ಞಾನವಾಹಿನಿ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.  

ಗುರುವಿನ ಮಾರ್ಗದರ್ಶನವೇ ಶಿಷ್ಯನ ಯಶಸ್ಸಿನ ಬುನಾದಿ. ಗುರುವು ಯುಕ್ತಿಯನ್ನು ಕಲಿಸುತ್ತಾನೆ, ಶಕ್ತಿಯನ್ನು ತುಂಬುತ್ತಾನೆ ಮತ್ತು ಸಾಧನೆಗೆ ಕಾರಣನಾಗುತ್ತಾನೆ. ಎಂದ ಶಿವಾಚಾರ್ಯರು ಶಿಷ್ಯನ ಪ್ರತಿಯೊಂದು ವಿಜಯೋತ್ಸವದ ಹಿಂದೆ ಗುರುವಿನ ತ್ಯಾಗ, ಪರಿಶ್ರಮ ಮತ್ತು ಆಶೀರ್ವಾದ ಅಡಗಿರುತ್ತದೆ. ನಿಜವಾದ ಗುರು ತನ್ನ ಶಿಷ್ಯನು ತನಗಿಂತಲೂ ಶ್ರೇಷ್ಠನಾಗಿ ಬೆಳೆಯಲಿ ಎಂದು ಬಯಸುತ್ತಾನೆ. ಶಿಷ್ಯನ ಯಶಸ್ಸೇ ಗುರುವಿನ ನಿಜವಾದ ಗೆಲುವು ಎಂದರು.  

ಗುರು ನಮ್ಮ ಜೀವನಕ್ಕೆ ದಿಕ್ಕು ತೋರಿಸುವ ದೀಪಸ್ತಂಭ. ಸುಖದ ಮೂಲವೂ ಗುರು, ಸದುಪದೇಶದ ಮೂಲವೂ ಗುರು.  ಎಂದು ವಿಶ್ಲೇಷಿ ಮಾತನಾಡಿದ ಅವರು ಸಮಾಜದಲ್ಲಿ ಧರ್ಮ ಮತ್ತು ಧಾರ್ಮಿಕತೆ ನಿತ್ಯದ ಬದುಕಿನಲ್ಲಿ ಹಾಸು ಹೂಕ್ಕಾಗಬೇಕು ಅಂದಾಗ ಮಾತ್ರ ಮಾನವ ಜೀವಿ ಶಾಂತಿ ಮತ್ತು ನೆಮ್ಮದಿಯಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.  


ಸುದ್ದಿ ಓದಿ