ಸಮುದಾಯದ ಸಹಾಯ ಹಸ್ತ ; ರಂಗೇರಿದ ಕ್ರೀಡಾಕೂಟ
ಮಹಾಲಿಂಗಪುರ 14: ಸೈದಾಪುರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವು ಸಮೀಪದ ಸೈದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೇತೃತ್ವದಲ್ಲಿ ಶ್ರೀ ಶಿವಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಜರುಗಿತು. ಎಸ್ ಡಿ ಎಮ್ ಸಿ ಅಧ್ಯಕ್ಷ ಸಿದ್ದಪ್ಪ ಹೊಸವಾಲಿಕಾರ, ರಾಜ್ಯ ಕಬ್ಬು ನಿಯಂತ್ರಣ ಮಂಡಳಿಯ ನಿರ್ದೇಶಕ ರಂಗನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಪಿಕೆಪಿಎಸ್ ಅಧ್ಯಕ್ಷ ಬಸವಣ್ಣೆಪ್ಪ ಬ್ಯಾಳಿ ಮತ್ತು ದೈಹಿಕ ಶಿಕ್ಷಣ ಪರೀವೀಕ್ಷಕ ಎಸ್.ಎಂ.ಕುರಣಿ ಕ್ರೀಡಾ ಧ್ವಜಾರೋಹಣ ಮತ್ತು ಕ್ರೀಡಾ ಜ್ಯೋತಿ ಸ್ವೀಕಾರ ನೆರವೇರಿಸಿ ಮಾತನಾಡಿದರು.ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಶಾಲೆಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾಕಷ್ಟು ದಾನಿಗಳು ಸಹಾಯ ಹಸ್ತ ಚಾಚಿ ಸಂಭ್ರಮ ತಂದರು.
ರಂಗನಗೌಡ ಪಾಟೀಲ ಮಧ್ಯಾಹ್ನದ ಊಟದ ವ್ಯವಸ್ಥೆ ಪಿಕೆಪಿಎಸ್ ವತಿಯಿಂದ ಸವಿನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ, ಬ್ಯಾಡ್ಜ್ ಗಳು, ಬ್ಯಾನರ್, ಹಾಲು ಉತ್ಪಾದಕರ ಸಂಘದ ವತಿಯಿಂದ ಬೆಳಗಿನ ಉಪಹಾರ, ಸಿದ್ಧಪ್ಪ ಹೊಸವಾಲಿಕಾರ ಸಕ್ಕರೆ, ಮತ್ತು ಗ್ರಾಮ ಪಂಚಾಯತಿಯ ವತಿಯಿಂದ ಕ್ರೀಡಾಕೂಟದ ಟೋಪಿ, ಮಂಜುನಾಥ ಮುತ್ತಪ್ಪಗೋಳ ಶೀಲ್ಡ್, ಮೆಡಲ್, ಕಲ್ಲನಗೌಡ ಪಾಟೀಲ ತರಕಾರಿ ಮತ್ತು ಗೋಧಿ ಹಿಟ್ಟು, ರಮೇಶ ಚಿಂಚಲಿ ಪೆಂಡಾಲ, ಸುರೇಶ ಜೋಗನ್ನವರ 300ರೊಟ್ಟಿ, ವಿರೂಪಾಕ್ಷ ಉಳ್ಳಾಗಡ್ಡಿ 50 ಹೂವಿನಹಾರ, ರಾಮನಗೌಡ ಪಾಟೀಲ, ಶಿವಲಿಂಗ ಪೋಳ, ಮಹಾಲಿಂಗಪ್ಪ ಮುಗಳಖೋಡ 70ಶಾಲು ಹಾಗೂ ಬಿ.ಆರ್.ಪಾಟೀಲ, ಮಲಗೌಡ ಪಾಟೀಲ, ಬಾಳನಾಯಕ ನಾಯಕ, ವಸಂತ ಪಾಟೀಲ, ಮಹಾಲಿಂಗಪ್ಪ ಬಾಯಪ್ಪಗೋಳ, ಶಿವಪ್ಪ ಬಾಯಪ್ಪಗೋಳ ಮುಂತಾದವರು ಸಹಾಯಧನ ನೀಡಿ ವ್ಯವಸ್ಥೆ ಸರ್ಕಾರಿ ಶಾಲೆಯ ಕಾರ್ಯಕ್ರಮ ಖಾಸಗಿ ಕಾರ್ಯಕ್ರಮ ಮೀರಿಸುವಂತೆ ಮಾಡಿದರು. ಶ್ರೇಯಾ ಕೌಜಲಗಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಮುಖ್ಯೋಪಾಧ್ಯಾಯೆ ಸುಶೀಲ ಸ್ವಾಗತಿಸಿ, ಶಿಕ್ಷಕ ಚಂದ್ರಶೇಖರ ದಾದನಟ್ಟಿ ಪ್ರತಿಜ್ಞಾವಿಧಿ ಬೋಧಿಸಿ, ಸಿಆರ್ ಪಿ ನವೀನ್ ಜಿಗಜಿನ್ನಿ ನಿರೂಪಿಸಿದರು.