ದಸರಾ ವೇಳೆ ಕೋಮು ಘರ್ಷಣೆ : ಕಲ್ಲು ತೂರಾಟ, ವಾಹನಗಳ ಧ್ವಂಸ, ಹಲವರಿಗೆ ಗಾಯ

ದಸರಾ ವೇಳೆ ಕೋಮು ಘರ್ಷಣೆ : ಕಲ್ಲು ತೂರಾಟ, ವಾಹನಗಳ ಧ್ವಂಸ, ಹಲವರಿಗೆ ಗಾಯ

ಸಂಕೇಶ್ವರ / ಬೆಳಗಾವಿ : ನವರಾತ್ರಿಯ ದುರ್ಗಾ ಮಾತೆಯ ವಿಸರ್ಜನೆ ಬಳಿಕ ಎರಡು ಕೋಮುಗಳ‌ ನಡುವೆ ಘರ್ಷಣೆ ಉಂಟಾಗಿ ಎರಡು ಗುಂಪುಗಳು ಕಲ್ಲು ತೂರಾಟ ಮಾಡಿದ ಹಿನ್ನೆಲೆಯಲ್ಲಿ ಕೆಲವು ವಾಹನಗಳು ಜಖಂ ಗೊಂಡು, ಹಲವರಿಗೆ ಗಾಯಗಳಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ.


     ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಈ ಘಟನೆ ಗೆ ಸಂಬಂಧಿಸಿದಂತೆ ಕೆಲವರ ವಿರುದ್ದ ಸಂಕೇಶ್ವರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ರವಿವಾರ ತಡರಾತ್ರಿ ಒಂದು ಕೋಮಿನ ಜನರು ದುರ್ಗಾ ಮಾತೆಯ ಪ್ರತಿಮೆಯನ್ನು ವಿಸರ್ಜನೆ ‌ಮಾಡಿ ವಾಪಸಾದಾಗ ಈ ಕೋಮು ಗಲಬೆ ನಡೆದಿದೆ. ಅಲ್ಲದೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಘು ಲಾಠಿ ಚಾರ್ಜ ಮಾಡಿದ್ದು, ಸದ್ಯ ಗ್ರಾಮದಲ್ಲಿ ತ್ವೇಶಮಯ ವಾತಾವರಣ ನಿರ್ಮಾಣ ಆಗಿದ್ಸು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 

ಸುದ್ದಿ ಓದಿ