ಮಹಲಿಂಗಪುರ

ತಂತ್ರಜ್ಞಾನ ಸ್ನೇಹಿ ಬ್ಯಾಂಕಿಂಗ್ ಆಶಯಕ್ಕೆ ಬದ್ಧ: ಕೋಳಿಗುಡ್ಡ

ತಂತ್ರಜ್ಞಾನ ಸ್ನೇಹಿ ಬ್ಯಾಂಕಿಂಗ್ ಆಶಯಕ್ಕೆ ಬದ್ಧ: ಕೋಳಿಗುಡ್ಡ

ಮಹಾಲಿಂಗಪುರ29:  2020-21 ನೇ ಸಾಲಿನಲ್ಲಿ ನಮ್ಮ ಮಹಾಲಿಂಗಪುರ ಬ್ಯಾಂಕ್ 21.77 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು 22021- 22 ನೇ ಹಣಕಾಸು ವರ್ಷದಲ್ಲಿ 19 ಕೋಟಿ ರೂ. ವಹಿವಾಟು ಹಾಗೂ ಎಟಿಎಂ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಹೇಳಿದರು.  

ಸ್ಥಳೀಯ ಮಹಾಲಿಂಗಪುರ ಅರ್ಬನ್ ಕೋ-ಆಪ್ ಬ್ಯಾಂಕ್ ನ 43 ನೇ ವರ್ಷದ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಬ್ಯಾಂಕ್ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಆದ್ಯತೆ ನೀಡುತ್ತಾ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ತಂತ್ರಜ್ಞಾನ ಸ್ನೇಹಿ ಬ್ಯಾಂಕಿಂಗ್ ಆಶಯಕ್ಕೆ ಬದ್ಧವಾಗಿದೆ ಎಂದರು.  

ವ್ಯವಸ್ಥಾಪಕ ಎಸ್‌. ಎಂ. ಗುಣದಾಳ ವಾರ್ಷಿಕ ವರದಿ ಮಂಡಿಸಿದರು. ಆದಾಯ, ವೆಚ್ಚ, ಲಾಭ ವಿಂಗಡಣೆ ಮುಂತಾದ ವಿಷಯಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.  

ಬ್ಯಾಂಕಿನ ಉಪಾಧ್ಯಕ್ಷ ಶ್ರೀಶೈಲ ಹಿಪ್ಪರಗಿ, ನಿರ್ದೇಶಕರಾದ ಬಿ. ಎಸ್‌. ಅಂಬಿ, ಎಂ. ವಿ. ಶಿರೋಳ, ಜಿ. ಎಸ್‌. ಮಠಪತಿ, ಬಿ. ಎಂ. ಬಟಕುರ್ಕಿ, ಎಂ. ಡಿ. ಬಂಡಿಗಣಿ, ವಿ. ಎಂ. ಹಲಗತ್ತಿ, ಎಚ್‌. ಎನ್‌. ಬಾಡಗಿ, ಜಿ. ಆರ್‌. ಕಬಾಡಿ, ಎನ್‌. ಜಿ. ಬುರುಡ, ಎಫ್‌.ಎಚ್‌. ಕುಂಟೋಜಿ, ಎಸ್‌. ಎಸ್‌. ಹುದ್ದಾರ, ಪಿ. ಎಸ್‌. ಬೆಳಗಲಿ, ಎನ್‌. ಟಿ. ಕಲಕೇರಿ, ಮಹಾಲಿಂಗಪ್ಪ ಸನದಿ, ಮಲಗೌಡ ಪಾಟೀಲ ಇತರರು ಇದ್ದರು. 

ಕುರಿತು. ಮೇಘನಾ ಹುಣಶ್ಯಾಳ ಮತ್ತು ಸಂಗಡಿಗರು ಪ್ರಾರ್ಥಿಸಿ, ಉಪಾಧ್ಯಕ್ಷ ಶ್ರೀಶೈಲ ಹಿಪ್ಪರಗಿ ಸ್ವಾಗತಿಸಿ, ಜಿ. ಎಸ್‌. ಮಠಪತಿ, ಈರಣ್ಣ ಹಲಗತ್ತಿ ನಿರೂಪಿಸಿದರು. 


ಸುದ್ದಿ ಓದಿ