ಕಸ ವಿಲೇವಾರಿ ವಾಹನ ಹತ್ತಿ ಕಾರ್ಮಿಕರ ಕೆಲಸ ವೀಕ್ಷಿಸಿದ ಆಯುಕ್ತ ದುಡುಗುಂಟಿ : ಸೈಕಲ್ ಸವಾರಿಯಿಂದ ವಾಹನ ಶಾಖೆಗೆ ದಿಢೀರ್ ಭೇಟಿ

ಕಸ ವಿಲೇವಾರಿ ವಾಹನ ಹತ್ತಿ ಕಾರ್ಮಿಕರ ಕೆಲಸ ವೀಕ್ಷಿಸಿದ ಆಯುಕ್ತ ದುಡುಗುಂಟಿ : ಸೈಕಲ್ ಸವಾರಿಯಿಂದ ವಾಹನ ಶಾಖೆಗೆ ದಿಢೀರ್ ಭೇಟಿ

ಬೆಳಗಾವಿ : ಸೈಕಲ್ ಸವಾರಿಯೊಂದಿಗೆ ಬೆಳಂಬೆಳಿಗ್ಗೆ ದಿಢೀರ್ ವಾಹನ ಶಾಖೆಗೆ ಭೇಟಿ ನೀಡಿರುವ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಹಾನಗರ ಪಾಲಿಕೆಯ ಕಸ ವಿಲೇವಾರಿ ವಾಹನದಲ್ಲಿ ಸ್ವತಃ ಸಂಚರಿಸಿ ಕಾರ್ಮೀಕರ ಕೆಲಸ ಹಾಗೂ ಕಸ ವಿಲೇವಾರಿ ಕಾರ್ಯವನ್ನು ವೀಕ್ಷಿಸುವದರೊಂದಿಗೆ ಪಾಲಿಕೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ‌ ಹಾಡಿದರು.


    ಸೋಮವಾರ ಬೆಳಿಗ್ಗೆ 5-30 ಗಂಟೆಗೆ ಪಾಲಿಕೆಯ ಆಯುಕ್ತ ಅಶೋಕ ದುಡಗುಂಡಿ ಅವರು ಸೈಕಲ್ ಸವಾರಿ ಮಾಡಿ ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ತೆರಳಿ, ವಾಹನಗಳನ್ನು ಪರಿಶೀಲಿಸಿದರು.

  ಅಲ್ಲದೆ ವಾಹನ ಚಾಲಕರ ಹಾಜರಾತಿ ಪರಿಶೀಲನೆ ಮಾಡಿ, ಬಯೋಮೆಟ್ರಿಕ ಅಳವಡಿಸುವಂತೆ ಹಾಗು ಎಲ್ಲ ವಾಹನ ಚಾಲಕರಿಗೆ ಹಾಗು ಕ್ಲೀನರ್ಸಗಳಿಗೆ ಬೆಳಿಗ್ಗೆ 5-30 ಕರ್ತವ್ಯಕ್ಕೆ ಹಾಜರಾಗಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.


  ಬಳಿಕ ಸ್ವತಃ ಪಾಲಿಕೆಯ ಕಸದ ವಾಹನದಲ್ಲಿ ಕುಳಿತುಕೊಂಡು ಪೊರ್ಟ್ ರಸ್ತೆಯ ಡಿಸಿಸಿ ಬ್ಯಾಂಕ್ ಹತ್ತಿರ ಕಸ ವಿಲೇವಾರಿ ಮಾಡುವಂತೆ ಸಂಬಂಧಿಸಿದ ನೈರ್ಮಲ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು. ವಾರ್ಡ ನಂಬರ 43ರ ವರೆಗೆ ಸಂಚರಿಸಿ ಶ್ರೀಮತಿ ವಾಣಿ ವಿಲಾಸ ಜೋಶಿ ವಾರ್ಡ ನಂ 43 ರ ನಗರ ಸೇವಕರು ಹಾಗು ಅಧ್ಯಕ್ಷರು, ನಗರ ಯೋಜನೆ ಮತ್ತು ನಗರ ಅಭಿವೃಧ್ದಿ ಸ್ಥಾಯಿ ಸಮಿತಿ ಇವರೊಂದಿಗೆ ಅನಗೋಳ  ಸ್ಮಶಾನದ ಸ್ಥಳ ಪರಿಶೀಲಿಸಿ ಅಲ್ಲಿ ಸ್ವಚ್ಜತೆ ಕಾಪಾಡುವಂತೆ ಹಾಗೂ ಗೀಡಗಳನ್ನು ನೆಡುವಂತೆ, ವಿದ್ಯುತ ದೀಪಗಳನ್ನು ಸರಿಪಡಿಸುವಂತೆ ಹಾಗು ಅಭಿವೃದ್ದಿಪಡಿಸುವಂತೆ ಸೂಚನೆಯನ್ನು ನೀಡಲಾಯಿತು.


    ನಂತರ ವಾರ್ಡ ನಂ.43ರ ವಾರ್ಡ ಸಂಚರಿಸಿ ಕಸ ವಿಲೇವಾರಿ ಕುರಿತು ಪರಿಶೀಲಿಸಿ, ಕಸ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸುವಂತೆ ನೈರ್ಮಲ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು ಮತ್ತು ಸಾರ್ವಜನಿಕರೊಂದಿಗೆ ಅವರ ಸಮಸ್ಯೆ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು‌. 

    ಅಲ್ಲದೆ ಅತೀಕ್ರಮಣ ಮಾಡಿ ಕಟ್ಟಡ ಕಟ್ಟುತ್ತಿರುವ ಕಟ್ಟಡದ ಪರಿಶೀಲನೆ ಮಾಡಿ ಸಂಬಂಧಿತರಿಗೆ ವಿವರ ಸಲ್ಲಿಸುವಂತೆ ಸೂಚಿಸಿದರು.ಅಲ್ಲಿಂದ ಭಾಗ್ಯನಗರ 1 ಮತ್ತು 2ನೇ ಕ್ರಾಸಗೆ ತೆರಳಿ, ಅಲ್ಲಿನ ಕಸ ವಿಲೇವಾರಿ, ನಾಲಾಗಳ ಸ್ವಚ್ಚತಾ, ಪಾಲಿಕೆಯ ಖುಲ್ಲಾ ಜಾಗೆಗಳ ಪರಿಶೀಲನೆ ಸಂಬಂಧಿಸಿದವರಿಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ಸುದ್ದಿ ಓದಿ