ಶಿಗ್ಗಾವ್

ಡಾ.ಟಿ.ಬಿ.ಸೊಲಭಕ್ಕನವರ ಪುಣ್ಯಸ್ಮರಣೆ ನಿಮಿತ್ಯ ಕಲಾಯಾನ ಉದ್ಘಾಟನೆ

ಡಾ.ಟಿ.ಬಿ.ಸೊಲಭಕ್ಕನವರ ಪುಣ್ಯಸ್ಮರಣೆ ನಿಮಿತ್ಯ ಕಲಾಯಾನ ಉದ್ಘಾಟನೆ

ಶಿಗ್ಗಾವಿ : ಡಾ.ಟಿ.ಬಿ.ಸೊಲಭಕ್ಕನವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಗೋಟಗೋಡಿಯ ಶಿಲ್ಪ ಕಲಾ ಕುಟೀರ ಆವರಣದಲ್ಲಿ ದಿ : 19 ರಂದು ಶನಿವಾರ ಬೆಳಿಗ್ಗೆ 10.30 ಕ್ಕೆ  ಡಾ.ಟಿ.ಬಿ.ಸೊಲಭಕ್ಕನವರ ಪ್ರತಿಮೆಗೆ ಪುಷ್ಪಾರ್ಪಣೆ ಸಲ್ಲಿಸಿ ನಂತರ ಕಲಾಯಾನದ ಉದ್ಘಾಟನೆಯನ್ನು ಆಯೋಜಿಸಲಾಗಿದೆ.

ದಿವ್ಯ ಸಾನಿಧ್ಯವನ್ನು ಸಂಗನಬಸವ ಶ್ರೀಗಳು ಶಿಗ್ಗಾವಿ, ಉದ್ಘಾಟನೆ ದಿ ಐಡಲ್ ಪೈನ್ ಆಟ್ರ್ಸ ನಿದರ್ೇಶಕ ವಿ.ಜಿ.ಅಂದಾನಿ, ಅಧ್ಯಕ್ಷತೆ ಡಾ.ಡಿ.ಎ.ಉಪಾಧ್ಯ, ಮುಖ್ಯ ಅತಿಥಿಗಳು : ಸತೀಶ ಕುಲಕಣರ್ಿ, ಶ್ರೀಕಾಂತ ದುಂಡಿಗೌಡ್ರ, ಕರಿಯಪ್ಪ ಹಂಚಿನಮನಿ, ಕೊಟ್ರೇಶ ಮಾಸ್ತರ, ಶಶಿಧರ ಯಲಿಗಾರ ಪಕ್ಕಿರೇಶ ಕೊಂಡಾಯಿ, ಹರೀಶ ಮಾಳಪ್ಪನವರ, ರಮೇಶ ಸಾತಣ್ಣವರ, ಉಪಸ್ಥಿತಿ : ಸಾವಿತ್ರಮ್ಮ ಸೊಲಭಕ್ಕನವರ, ಪ್ರಾರ್ಥನೆ ಬಸವರಾಜ ಶಿಗ್ಗಾವಿ ತಂಡದವರಿಂದ, ಸನ್ಮಾನಿತರು : ಅಡವಯ್ಯಸ್ವಾಮಿ ಹಿರೇಮಠ, ಶ್ರೀಶೈಲ್ ಹುದ್ದಾರ, ಜಯದೇವ ಅಗಡಿ, ಪಕ್ಕಿರೇಶ ಬಿಶೆಟ್ಟಿ, ಸೊಲಭಕ್ಕನವರ ಕಂಡಂತೆ : ಶಿವಾನಂದ ಮ್ಯಾಗೇರಿ, ಬಾ.ಮ.ಬಸವರಾಜಯ್ಯ, ಮಹಾಲಿಂಗಪ್ಪ, ಜಗದೀಶ ಚೌವಟಗಿ, ಜಗನ್ನಾಥ ಗೇಣನ್ನವರ, ಗೂಳಪ್ಪ ಅರಳೀಕಟ್ಟಿ ಉಪಸ್ಥಿತರಿರುವರು.

ಮಧ್ಯಾಹ್ನ ನಾಗರಾಜ ಶಿಂಧೆ ಕಲಾನಗರಿ ಹುಲಸೋಗಿ ತಂಡದವರಿಂದ ವೀರ ಅಭಿಮನ್ಯು ದೊಡ್ಡಾಟ ಪ್ರದರ್ಶನಗೊಳ್ಳಲಿದೆ, ಪ್ರಸಾಧನ ಶಂಕರ ಅರ್ಕಸಾಲಿ, ಉದ್ಘಾಟನೆ ಪ್ರೊ.ಸಿ.ಟಿ.ಗುರುಪ್ರಸಾದ, ಅಧ್ಯಕ್ಷತೆ ಪ್ರೊ.ಟಿ.ಎಂ.ಬಾಸ್ಕರ, ಮುಖ್ಯಅತಿಥಿಗಳು ಪ್ರೋ ಎನ್.ಎಂ.ಸಾಲಿ, ಯಲ್ಲಪ್ಪ ಶಿಂಧೆ, ಹನುಮಂತಪ್ಪ ಗುಳೇದ, ಸುಭಾಷ ಸಕ್ರಣ್ಣನವರ, ಶಿಲ್ಪಕಲಾ ಕುಟೀರದ ಕಲಾವಿದರಿಗೆ ಗೌರವ ಸನ್ಮಾನ, ಕಲಾಯಾನದಲ್ಲಿ ಬೇರೆ ಬೇರೆ ಜಿಲ್ಲೆಗಳ ಕಲಾವಿದರು ಪಾಲ್ಗೋಳ್ಳುವರು ಸಂಚಾಲಕರು : ಕುಮಾರ ಕಾಟೇನಹಳ್ಳಿ, ಕಾರ್ಯಕ್ರಮ ನಿರ್ವಹಣೆಯನ್ನು ಶರೀಫ ಮಾಕಪ್ಪನವರ, ಅಲ್ತಾಫ ಯತ್ನಳ್ಳಿ ನಿರ್ವಹಿಸುವರು ಎಂದು ಪ್ರಕಟಣೆಗೆ ಕೋರಿದ್ದಾರೆ.

 

ಸುದ್ದಿ ಓದಿ