ಹಗರಿಬೊಮ್ಮನಹಳ್ಳಿ

ಉತ್ತಮ ಆದರ್ಶಗಳ ಅನುಕರಣೆಗೆ ಮುಂದಾಗಿ : ತಹಶಿಲ್ದಾರ್ ಶರಣಮ್ಮ

ಉತ್ತಮ ಆದರ್ಶಗಳ ಅನುಕರಣೆಗೆ ಮುಂದಾಗಿ : ತಹಶಿಲ್ದಾರ್ ಶರಣಮ್ಮ

ಹಗರಿಬೊಮ್ಮನಹಳ್ಳಿ.ಜೂ.29 : ದೇಶ ಪ್ರೇಮ ಮೆರೆದ ಮಹಾನ್ ನಾಯಕರ ಉತ್ತಮ ಆದರ್ಶಗಳನ್ನು ಅನುಕರಣೆ ಮಾಡುವಂತೆ ಮಕ್ಕಳಿಗೆ ತಹಶಿಲ್ದಾರ್ ಶರಣಮ್ಮ ಕರೆ ನೀಡಿದರು. 

ಪಟ್ಟಣದ ಕ್ರಿಸ್ತ ಶರಣ ವಿದ್ಯಾಪೀಠದ ಆವರಣದಲ್ಲಿ ಬುಧವಾರ ನಡೆದ 2022-23ನೇ ಸಾಲಿನ ಶಾಲಾ ಆರಂಭೋತ್ಸವ ಹಾಗೂ ವಿದ್ಯಾರ್ಥಿಗಳ ಸಂಸತ್ ರಚನೆಯ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶ ಮತ್ತು ರಾಜ್ಯದ ಉತ್ತಮ ನಾಯಕರು ನಡೆದು ಬಂದ ದಾರಿಯನ್ನು ಅರ್ಥೈಸಿಕೊಂಡು ಅವರ ಆದರ್ಶ ಮಾರ್ಗದಲ್ಲಿ ವಿದ್ಯಾರ್ಥಿಗಳು ಮುನ್ನೆಡೆದರೆ, ಕಂಡ ಸಾಧನೆಯ ಪಥ ತಲುಪುವಲ್ಲಿ ಯಾವುದೇ ಅನುಮಾನವಿಲ್ಲ, ಪುಸ್ತಕಗಳು ಉತ್ತಮ ಗೆಳೆಯನ ಕಾರ್ಯ ನಿರ್ವಹಿಸುತ್ತವೆ ಒದಿನ ಕಡೆ ಶ್ರಧ್ಧೆ ವಹಿಸಿ ಮೊಬೈಲ್, ಟಿವಿ ಸೇರಿದಂತೆ ದುರ್ನಡೆತೆಗಳಿಂದ ದೂರವಿದ್ದು ಉಜ್ವಲ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು. 

ಶಾಲಾ ಆಡಳಿತಾಧಿಕಾರಿ ಫಾದರ್ ವೈ.ಚಿನ್ನಪ್ಪ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣವನ್ನು ಅಳವಡಿಸಿಕೊಂಡು ಬೆಳೆಯಬೇಕು. ಶಿಕ್ಷಣದ ಜೀವನ ಮುಗಿದ ಮೇಲೆ, ಸಮಾಜಕ್ಕೆ ಪ್ರತಿಯೊಬ್ಬರು ಮಾಧರಿಯಾಗಬೇಕು. ಖಾತೆಗಳ ಹಂಚಿಕೆಯೊಂದಿಗೆ ನಡೆಯುತ್ತಿರುವ ದೇಶದ ಆಡಳಿತದಂತೆ, ಈ ಶಾಲೆಯಲ್ಲಿಯೂ ಸಂಸತ್ ಮಾದರಿಯಲ್ಲಿಯೇ ವಿದ್ಯಾರ್ಥಿಗಳು ಆಯ್ಕೆಯಾಗಿ ನಾನಾ ಖಾತೆಗಳೊಂದಿಗೆ ಶಾಲೆಯಲ್ಲಿ ಸುಸಂಸ್ಕೃತರಾಗಿ ಶಿಕ್ಷಣ ಪಡೆಯಿರಿ, ಪ್ರತಿಯೊಬ್ಬರನ್ನು ಸಹೋದರ ಸಹೋದರಿಯರಂತೆ ಕಾಣಬೇಕು ಎಂದು ತಿಳಿಸಿದರು. 

ವೇದಿಕೆಯಲ್ಲಿ ವಿದ್ಯಾರ್ಥಿಗಳು ನೃತ್ಯದೊಂದಿಗೆ, ಅರಣ್ಯ ಸಂರಕ್ಷಣೆಯ ಕುರಿತಂತೆ ಸೇರಿ ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 

ಈ ವೇಳೆ ಸಿಆರ್‌ಪಿ ನರೇಂದ್ರ, ಪ್ರಾಂನ್ಸಸ್ಸ್‌ ಸಿಸ್ಟರ್ ಲಿಟ್ಟಿ, ಪ್ರೌಢಶಾಲೆಯ ಮುಖ್ಯಶಿಕ್ಷಕಿ ನೆಲ್ಕುದ್ರಿ ಶೋಭ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಆರೋಗ್ಯಪ್ಪ, ಶಿಕ್ಷಕರು ಹಾಗೂ ಪಾಲಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ