ಬಳ್ಳಾರಿ

ಬಳ್ಳಾರಿ ಲಾರಿ ಮಾಲೀಕರ ಮುಷ್ಕರ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಬಳ್ಳಾರಿ ಲಾರಿ ಮಾಲೀಕರ ಮುಷ್ಕರ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಬಳ್ಳಾರಿ,25:  ನಗರದಲ್ಲಿ  ಜಿಲ್ಲಾ ಲಾರಿ ಮಾಲೀಕರ ಸಂಘ ಏರ್ಪಡಿಸಿದ್ದ ಹಲಕುಂದಿ ಮಠ ಬಳಿಯ ಮುಷ್ಕರ ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಭೇಟಿ ನೀಡಿ ಸಂಘದ ಬೇಡಿಕೆಗಳ ಕುರಿತು ಮಾಹಿತಿ ಪಡೆದರು. 

ಸರಕು ಸಾಗಣೆಯ ಬಾಡಿಗೆ ದರ ಹೆಚ್ಚಿಸುವಂತೆ ಸಂಬಂಧಿಸಿ ಸ್ಪಾಂಜ್ ಐರನ್ ಕಾರ್ಖಾನೆ ಸಂಘ,ಸ್ಪಾಂಜ್ ಐರನ್ ಮಾಲೀಕರ ಜೊತೆಗೆ ಸೋಮವಾರದಂದು ಸಭೆ ಏರಿ​‍್ಡಸಿ ದರ ಏರಿಸುವ ಕುರಿತು ಚರ್ಚೆ ನಡೆಸಲಾಗುವುದು ಹೀಗಾಗಿ ಮುಷ್ಕರವನ್ನು ಹಿಂಪಡೆಯುವಂತೆ ಪ್ರತಿಭಟನಾ ನಿರತರನ್ನು ಮನ ಒಲಿಸಲು ಪ್ರಯತ್ನಿಸಿದರು. 

ಜಿಲ್ಲಾ ಮಾಲೀಕರ ಸಂಘದ ಅಧ್ಯಕ್ಷ ವಿ.ಶ್ರೀನಿವಾಸುಲು ಅವರು ಜಿಲ್ಲಾಧಿಕಾರಿಗಳ ಮಾತಿಗೆ ಒಪ್ಪದೇ, ತಾವು ಜಿಲ್ಲೆಗೆ ಮುಖ್ಯಸ್ಥರಾಗಿದ್ದ ತಾವು ಅಂದು ಕೊಂಡರೆ ಅರ್ಧ ಗಂಟೆಯಲ್ಲಿ ಸಭೆ ಏರಿ​‍್ಡಸಿ ನಮ್ಮ ಸಮಸ್ಯೆಯನ್ನು ಬಗೆಹರಿಸಬಹುದು.ಲಾರಿ ಮಾಲೀಕರು ಬಹಳ ದಿನಗಳಿಂದ ಸರಕು ಸಾಗಣೆಯ ಬಾಡಿಗೆ ದರ ಸಮರ​‍್ಕವಾಗಿ ಸಿಗದೇ ನಷ್ಟ ಅನುಭವಿಸುತ್ತಿದ್ದಾರೆ ಹೀಗಾಗಿ ನಮ್ಮ ಈ ಬೇಡಿಕೆಯನ್ನು ಕಾರ್ಖಾನೆಯ ಮಾಲೀಕರು ಈಡೇರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ವಿ.ಶ್ರೀನಿವಾಸುಲು ಮನವಿ ಮಾಡಿಕೊಂಡರು. 

ಈ ವೇಳೆ ಹೆಚ್ಚುವರಿ ಎಸ್ಪಿ ರವಿಕುಮಾರ್,ನಗರ ಡಿ ವೈಎಸ್ಪಿ ನಂದಾರೆಡ್ಡಿ,ಸಿ. ಪಿ ಐ ಸತೀಶ್ ಮೊದಲಾದ ಅಧಿಕಾರಿಗಳು ಹಾಜರಿದ್ದರು.ಜಿಲ್ಲಾಧಿಕಾರಿ ಭೇಟಿ ನಂತರವೂ ಪ್ರತಿಭಟನೆ ಮುಂದುವರೆಯಿತು.ಮುಷ್ಕರಕ್ಕೆ ಉತ್ತಮ ಸ್ಪಂದನೆ.ಸರಕು ಸಾಗಣೆಯ ಲಾರಿಗಳ ಬಾಡಿಗೆ ದರ ಹೆಚ್ಚಿಸುವಂತೆ ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಮುಷ್ಕರಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಗುರುವಾರ ಬೆಳಿಗ್ಗೆ 7. ಗಂಟೆಯಿಂದ ಹಲುಕುಂದಿ ಮಠದ ಬಳಿ ಲಾರಿಗಳನ್ನು ತಡೆದು ಪಕ್ಕದ ಮೈದಾನದಲ್ಲಿ ನಿಲುಗಡೆ ಮಾಡಿಸುವ ಮೂಲಕ ಮುಷ್ಕರ ಆರಂಭಗೊಂಡಿತು ಬೆಳಿಗ್ಗೆ 11. ಗಂಟೆ ಹೊತ್ತಿಗೆ ಬಳ್ಳಾರಿಗೆ ಬರುತ್ತಿದ್ದ ಹಾಗು ತೆರಳುತ್ತಿದ್ದ ಇನ್ನೂರಕ್ಕೂ ಹೆಚ್ಚು ಲಾರಿಗಳನ್ನು ನಿಲುಗಡೆ ಮಾಡಲಾಯಿತು.  

ಈ ಸಂದರ್ಭದಲ್ಲಿ ಲಾರಿ ಮಾಲೀಕರು  ,ಉಪಾಧ್ಯಕ್ಷ ಕೆ. ನೂರ್ ಮಹಮ್ಮದ್, ಕಾರ್ಯದರ್ಶಿ ಎಂ.ಮಹಬೂಬ್ ಬಾಷಾ,ಮತ್ತು 3ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್ ಹಾಗು ಲಾರಿ ಮಾಲೀಕರ ಸಂಘದ ಸದಸ್ಯರಾದ ಟಿ.ಪ್ರವೀಣ್ ಕುಮಾರ್,ಎಂ.ನೀಲಕಂಠ ನಾಯುಡು,ಡಿ.ರಾಮ್ ಕುಮಾರ್, ಪೂಜಾದೇವಿ ಶ್ರೀನಿವಾಸ್,ಹಿರಿಯರಾದ ಟಿ.ನರಸಿಂಹಲು,ಪೆದ್ದನ್ನ. ವೆಂಕಟೇಶ್,ಎಂ. ಡಿ ಫಯಾಜ್ ಬಾಷಾ,ಸಿ.ಸಂತೋಷ್,ಕುಮಾರ್ ರಾಮ್ ನಾಯ್ಕ,ಲಕ್ಷ್ಮಿ ನಾರಾಯಣ,ಶ್ರೀಕಾಂತ್ ರೆಡ್ಡಿ. ಸಿದ್ದಾರೆಡ್ಡಿ ಚಲ್ಲಾ ರಮೇಶ್,ಲೋಕೇಶ್, ರವಿ,ಸುರೇಶ್,ಅಂಜನೆಯಲಲು , ರಾಹುಲ್, ಗಿರಿಧರ್ ರೆಡ್ಡಿ, ಶ್ರೀನಿವಾಸ್ ಶೆಟ್ಟಿ,ಬಾಲರಾಜ್, ಸುರೇಂದ್ರ, ನೆಟ್ಟಪ್ಪ , ಲೋಕನಾಥ್,  ಈ ಕೆಆರ್ ಚಂದ್ರ , ವಿ ಎಸ್ ಎಸ್ ಸುರೇಶ್ , ಭೀಮಣ್ಣ, ತಿಪ್ಪಯ್ಯ, ಸಾಯಿನಾಥ್, ಹರೀಶ್, ಪವನ್ ಇನ್ನು ಹಲವು ಲಾರಿ ಮಾಲೀಕರು ವಿವಿಧ ಪದಾಧಿಕಾರಿಗಳು ಇತರರು ಆಗಮಿಸಿದ್ದರು. 


ಸುದ್ದಿ ಓದಿ