ಮಹಲಿಂಗಪುರ

ಅಮೂಲ್ಯ ಭಾವ ಚಿತ್ರಗಳ ಸಂಗ್ರಹ ಮರೆಯಲಾಗದ ಗೆಳೆತನ ದ್ಯೋತಕ: ಯಲ್ಲನ್ನಗೌಡ ಪಾಟೀಲ್

ಅಮೂಲ್ಯ ಭಾವ ಚಿತ್ರಗಳ ಸಂಗ್ರಹ ಮರೆಯಲಾಗದ ಗೆಳೆತನ ದ್ಯೋತಕ: ಯಲ್ಲನ್ನಗೌಡ ಪಾಟೀಲ್

ಮಹಾಲಿಂಗಪುರ 20: ಹಳೆ ವಿದ್ಯಾರ್ಥಿಗಳು ದಶಕಗಳಿಂದ ಉತ್ತಮ ಬಾಂಧವ್ಯ ಕಾಪಾಡಿಕ್ಕೊಂಡು, ಸವಿನೆನಪಿಗಾಗಿ ಸಹಪಾಠಿಗಳ ಮತ್ತು ಗುರು ವಂದನ ಕಾರ್ಯಕ್ರಮದ ಅಮೂಲ್ಯ ಭಾವ ಚಿತ್ರಗಳ ಸಂಗ್ರಹ ಮರೆಯಲಾಗದ ಗೆಳೆತನದ ದ್ಯೋತಕವಾಗಿದೆ ಎಂದು ಪುರಸಭೆ ನೂತನ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಹೇಳಿದರು. ಶುಕ್ರವಾರ ಬಸವ ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಎಸ್ ಸಿ ಪಿ ಪ್ರೌಢ ಶಾಲೆಯ 1999 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಬೆಳ್ಳಿ ಮಹೋತ್ಸವ ಅಂಗವಾಗಿ ಜುಲೈ ನಲ್ಲಿ ನಡೆದ ಗುರುವಂದನ ಕಾರ್ಯಕ್ರಮ ಸವಿನೆನಪಿನ ಕೃತಿ ಹಾಗೂ ಭಾವ ಚಿತ್ರಗಳ ಗುಚ್ಛ ಬಿಡುಗಡೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ನಂತರ ಉಪಾಧ್ಯಕ್ಷೆ ಶೀಲಾ ರಾಜೇಶ. ಭಾವಿಕಟ್ಟಿ ಮಾತನಾಡಿ, ಪರಸ್ಪರರಲ್ಲಿ ಗೆಳೆತನದ ಸುಮಧುರ ಬಾಂಧವ್ಯ ಬೆಸೆಯುವ ಘಳಿಗೆ ಇದಾಗಿದ್ದು, ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳ ಆಯೋಜನೆ ಹಳೆ ಸಹಪಾಠಿಗಳಲ್ಲಿ ಶಾಂತಿ, ನೆಮ್ಮದಿ, ಭ್ರಾತೃತ್ವ ನೆಲೆಸುವಂತೆ ಮಾಡುತ್ತವೆ ಎಂದರು. ಪುರಸಭೆಯ ಮಾಜಿ ಉಪಾಧ್ಯಕ್ಷ ಚನಬಸು ಹುರಕಡ್ಲಿ ಮಾತನಾಡಿ, ಇಂದು ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಬೇಧ ಭಾವವಿಲ್ಲದ ಬಾಲ್ಯ, ಅಂದಿನ ನೆನಪುಗಳು ಮಾತ್ರ ಅಚ್ಚಳಿಯದಂತೆ ಉಳಿಯುತ್ತವೆ.ಇದಕ್ಕೆ ಉತ್ತಮ ಉದಾಹರಣೆ ಈ ಭಾವ ಚಿತ್ರಗಳ ಬಿಡುಗಡೆ ಸಮಾರಂಭ ಎಂದರು.ನಿವೃತ್ತ ಶಿಕ್ಷಕರಾದ ಜಿ ಜಿ ಹುಬ್ಬಳ್ಳಿ, ನಿವೃತ್ತ ಶಿಕ್ಷಕಿಯರಾದ ಎಸ್ ಬಿ ಹುಲಕುಂದ, ಎಸ್ ಬಿ ಕೋರಿಶೆಟ್ಟಿ,ಎಸ್ ಸಿ ಪಿ ಕೆಪ್ರೌಢ ಶಾಲೆಯ ಪ್ರಾಚಾರ್ಯ ಬಿ ಎನ್‌.ಅರಕೇರಿ ಮಾತನಾಡಿ ಭಾವ ಚಿತ್ರಗಳ ಹೊತ್ತಿಗೆ ಭವಿಷ್ಯದ ನೆನಪಿನ ಬುತ್ತಿಯಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಮಹಾದೇವ ಬನಹಟ್ಟಿ, ಶ್ರೀಶೈಲ ಬೀಸನಕೊಪ್ಪ, ಮುನ್ನಾ ಕರಡಿ, ಸಂದೀಪ ಚಿಕ್ಕೋರ್ಡೆ, ಮಲ್ಲಿಕಾರ್ಜುನ ಗೋಲಬಾವಿ, ವೆಂಕಟೇಶ ಮಗದುಮ, ಶ್ರೀಶೈಲ ಕಳ್ಯಾಗೋಳ, ಈರಪ್ಪ ಕಿತ್ತೂರ, ಸುನೀಲ್ ಷಿಪ್ರಿ, ರವೀಂದ್ರ ಹೊಸಕೋಟೆ, ಗುರುಪಾದ ಯಂಕಾಂಚಿ, ಸತೀಶ ನಾಯಕ, ಹನುಮಂತ ರೊಡ್ಡನ್ನವರ, ಪ್ರಭು ಮಲಬಾದಿ, ಚನ್ನಗಿರಿ ಪೂಜಾರಿ, ಅರುಣ ಶಿರೋಳ, ಚನ್ನಬಸು ಹುಬ್ಬಳ್ಳಿ, ಪಪ್ಪು ಹುರಕಡ್ಲಿ, ಆನಂದ ಮಿರ್ಜಿ, ರವಿ ಕಾಂಬ್ಳೆಕರ, ಕವಿತಾ ಬಿರಾದರ, ಸವಿತಾ ಒಂಟಗೋಡಿ, ಮುರಿಗೆವ್ವ ಬನ್ನೂರ, ಅನಿತಾ ಹುಲಕುಂದ, ರಂಜಿನ ಅನಂತಪುರ, ರೇಖಾ ಮಡಿವಾಳ, ಶ್ರೀದೇವಿ ಪುರ್ಲಿ, ರಾಜೇಶ್ವರಿ ಉಳ್ಳೆಗಡ್ಡಿ, ಸರಿತಾ ಮಹೇಂದ್ರಕರ, ಗೀತಾ ಕದ್ದಿಮನಿ, ಭಾರತಿ ಬೀರನಗಡ್ಡಿ, ಶಾಂತ ಹುಳ್ಳಿ, ತ್ರಿವೇಣಿ ನಾಗರಾಳ ಮುಂತಾದವರಿದ್ದರು. ಶಶಿಧರ ಉಳ್ಳೇಗಡ್ಡಿ ವೇದಿಕೆಗೆ ಅತಿಥಿಗಳನ್ನು ಸ್ವಾಗತಿಸಿ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿ, ಕಾರ್ಯಕ್ರಮ ನಿರೂಪಿಸಿದರು. ಮಲ್ಲು ಗೋಲಭಾವಿ ವಂದಿಸಿದರು. 


ಸುದ್ದಿ ಓದಿ