ಕ್ಲಸ್ಟರ್ ಮಟ್ಟದ ಕ್ರೀಡಾಕೂಟ: ವಿದ್ಯಾರ್ಥಿಗಳ ಉತ್ತಮ ಸಾಧನೆ
ಮಹಾಲಿಂಗಪುರದ 13: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯರ ಕಬ್ಬಡ್ಡಿ ಪ್ರಥಮ, ಬಾಲಕಿಯರ ಥ್ರೋಬಾಲ್ ಪ್ರಥಮ, ಪೃಥ್ವಿ ಮಠದ ಚಕ್ರ ಎಸೆತ ಪ್ರಥಮ, ಪಲ್ಲವಿ ಶಿರೋಳ ಚಕ್ರ ಎಸೆತ ದ್ವಿತೀಯ, ಪೃಥ್ವಿ ಮಠದ ಗುಂಡು ಎಸೆತ ದ್ವಿತೀಯ, ಪ್ರಜ್ವಲ್ ಹಲಸಪ್ಪಗೊಳ್ 100ಮೀ ಓಟ ಪ್ರಥಮ, ಸಂದೀಪ ವಾಲಿಕಾರ್ 400ಮಿ ಓಟ ಪ್ರಥಮ, ಸಂಜನಾ ಮೋಪಗಾರ 100ಮಿ ಓಟ ದ್ವಿತೀಯ, ಅಂಜುಮ್ ಪೆಂಡಾರಿ 100ಮೀ ಓಟ ತೃತೀಯ, ಪಲ್ಲವಿ ಶಿರೋಳ 400ಮೀ ಓಟ ಪ್ರಥಮ, ಅಂಜುಮ್ ಪೆಂಡಾರಿ ಅಡೆತಡೆ ಓಟ ದ್ವಿತೀಯ, ಪ್ರಜ್ವಲ ಹಲಸಪ್ಪಗೋಳ್ ಉದ್ದ ಜಿಗಿತ ದ್ವಿತೀಯ, ಸಂದೀಪ ವಾಲಿಕಾರ್ ಎತ್ತರ ಜಿಗಿತ ದ್ವಿತೀಯ, ಅರ್ಫಾನಾ ಯಕ್ಸಂಬಿ ಎತ್ತರ ಜಿಗಿತ ಪ್ರಥಮ, ಅಂಜುಮ್ ಪೆಂಡಾರಿ ಎತ್ತರ ಜಿಗಿತ ದ್ವಿತೀಯ ಸ್ಥನ ಪಡೆದಿದ್ದಾರೆ ಎಂದು ಶಾಲೆಯ ಮುಖ್ಯ ಗುರು ಅರ್ಜುನ ಚವ್ಹಾಣ ತಿಳಿಸಿದ್ದಾರೆ.