2 ದಿನಗಳ ತೆರಬಂಡಿ ಸ್ಪರ್ಧೆ ಮುಕ್ತಾಯ
ಮಹಾಲಿಂಗಪುರ 06: ದೇಶಿ ಕ್ರೀಡೆ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ. ಮನಸ್ಸು, ಬುದ್ಧಿ ಸಮತೋಲನದಲ್ಲಿ ಸಾಗಿದರೆ ಯಶಸ್ಸು ಸಾಧ್ಯ ಎಂದು ಕಾಂಗ್ರೆಸ್ ಕೆಪಿಸಿಸಿ ತೇರದಾಳ ಮತಕ್ಷೇತ್ರ ಕಿಸಾನ ಘಟಕ ಸಂಚಾಲಕ ಡಾ.ಪದ್ಮಜೀತ ನಾಡಗೌಡ ನುಡಿದರು.
ಬಸವೇಶ್ವರ ಜಾತ್ರಾ ಕಮಿಟಿ ಹಾಗೂ ಪುರಸಭೆ ಮಹಾಲಿಂಗಪುರ ಇವರ ಸಂಯುಕ್ತ ಆಶ್ರಯದಲ್ಲಿ 2 ದಿನಗಳ ನಡೆದ ರಾಜ್ಯ ಮಟ್ಟದ ತೆರಬಂಡಿ ಸ್ಪರ್ಧೆ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಸಮೀಪದ ವಡೇರಹಟ್ಟಿಯ ರೇವಣ ಶ್ರೀ ಸಿದ್ದೇಶ್ವರ ಪ್ರಸನ್ನ ತಂಡದ ಮಾಲಕ ಕುಮಾರ ಬೋರಡ್ಡಿ ಅವರ ಎತ್ತುಗಳು 1320.4 ಅಡಿ ವೇಗ ಕ್ರಮಿಸಿ 1 ಲಕ್ಷ ರೂಗಳ ಪ್ರಥಮ ಬಹುಮಾನ ಗಿಟ್ಟಿಸಿದವು, ನಂತರ ಬನಹಟ್ಟಿಯ ಕಾಡಸಿದ್ದೇಶ್ವರ ಪ್ರಸನ್ನ ತಂಡದ ಎತ್ತುಗಳು 1308.8 ಅಡಿ ದೂರ ಕ್ರಮಿಸಿ ದ್ವೀತಿಯ ಬಹುಮಾನ 50ಸಾವಿರ, ಒಂಟಗೋಡಿಯ ಲಕ್ಷಿ??ದೇವಿ ಪ್ರಸನ್ನ ತಂಡದ ಎತ್ತುಗಳು 1290 ಅಡಿ ದೂರ ಕ್ರಮಿಸಿ ತೃತೀಯ ಬಹುಮಾನ ಹಾಗೂ ನಿಂಗನೂರಿನ ಸತ್ಯದೇವಿ ಪ್ರಸನ್ನ ತಂಡದ ಎತ್ತುಗಳು 1286.6 ಅಡಿ ದೂರ ಕ್ಷಮಿಸಿ ಚತುರ್ಥ ಬಹುಮಾನವನ್ನು ಪಡೆದುಕೊಂಡವು.
13 ಜೋಡಿ ಎತ್ತುಗಳಿಗೆ ಆಕರ್ಷಕ ಬಹುಮಾನ ವಿತರಿಸಲಾಯಿತು. ಒಟ್ಟು 63 ಜೋಡಿ ಎತ್ತುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾತ್ರಾ ಕಮಿಟಿ ಅಧ್ಯಕ್ಷ ಯಲ್ಲನಗೌಡ ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಂಕರ ಸೋರಗಾಂವಿ, ಸಾಗರ ಚವಜ, ರವಿ ಬಾಡಗಿ, ಶ್ರೀನಿವಾಸ ಮಾಲಬಸರಿ, ವಿಜಯ ಮಾಲಬಸರಿ, ಶ್ರೀಶೈಲ ಬಜಂತ್ರಿ, ಮಹಾಲಿಂಗಪ್ಪ ತಟ್ಟಿಮನಿ, ನಿಂಗಪ್ಪ ಬಾಳಿಕಾಯಿ, ಕೃಷ್ಣಗೌಡ ಪಾಟೀಲ, ರವಿಗೌಡ ಪಾಟೀಲ, ದೇವರೇಶ ಉಳ್ಳಾಗಡ್ಡಿ, ರವಿ ಬಿದರಿ, ವಿಠ್ಠಲ ಕುಳಲಿ, ಕಲ್ಲಪ್ಪ ಹೆಬ್ಬಾಳ, ಅನೀಲ ದೇಸಾಯಿ, ವೆಂಕಣ್ಣ ಕಣಬೂರ, ಸುನೀಲಗೌಡ ಪಾಟೀಲ, ಸಂಜು ಅಮ್ಮಣಗಿಮಠ, ಅಶೋಕ ತಳವಾರ, ಆನಂದ ಬಂಡಿ, ಹನ್ಮಂತ ಬ್ಯಾಕೋಡ್, ಕುಮಾರ ಬೋರಡ್ಡಿ ಮುಂತಾದವರಿದ್ದರು.