ಬಳ್ಳಾರಿ

ಸ್ವಚ್ಛತೆ ಎಂಬುದು ನಮ್ಮ ಮನೆಯಿಂದ ಪ್ರಾರಂಭವಾಗಬೇಕು: ಡಿವಿಪಿಆರ್ ಮೂರಳಿ ಕೃಷ್ಣ

ಸ್ವಚ್ಛತೆ ಎಂಬುದು ನಮ್ಮ ಮನೆಯಿಂದ ಪ್ರಾರಂಭವಾಗಬೇಕು: ಡಿವಿಪಿಆರ್ ಮೂರಳಿ ಕೃಷ್ಣ

ಬಳ್ಳಾರಿ 21: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ  ಆವರಣದಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಬಳ್ಳಾರಿ ಇವರ ಸಹಯೋಗದೊಂದಿಗೆ ಸ್ವಚ್ಛತಾ ಹಿ ಸೇವಾ ಅಭಿಯಾನವನ್ನು ಮುಖ್ಯ ಅಥಿತಿಗಳಾದ ಡಿವಿಪಿಆರ್ ಮೂರಳಿ ಕೃಷ್ಣ, ಸಹಾಯಕ ಮಹಾ ಪ್ರಬಂಧಕರು, ಪ್ರಾದೇಶಿಕ ಕಛೇರಿ ಕೆನರಾ ಬ್ಯಾಂಕ್ ಬಳ್ಳಾರಿ, ಈ ಅಭಿಯಾನಕ್ಕೆ ಚಾಲನೆ ನೀಡಿ ಸ್ವಚ್ಛತೆ ಎಂಬುದು ನಮ್ಮ ಮನೆಯಿಂದ ಪ್ರಾರಂಭವಾಗಬೇಕು ಇದರಲ್ಲಿ ನಾವೂ ಪ್ರತಿನಿತ್ಯ ನಮ್ಮನ್ನು ನಾವೂ ತೋಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಅಥಿತಿಗಳಾದ ವಿನೋಧ ಕುಮಾರ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಬಳ್ಳಾರಿ, ಇವರು ಸ್ವಚ್ಚತೆಯಲ್ಲಿ ನಮ್ಮನ್ನು ನಾವೂ ಮನಪೂರ್ವಕವಾಗಿ ತೊಡಗಿಸಿಕೊಂಡರೆ ರೋಗ ರುಜಿನುಗಳಿಂದ ಮುಕ್ತರಾಗಬಹುದು.  

ಮನೆಯಿಂದ ಗ್ರಾಮ, ಗ್ರಾಮದಿಂದ ರಾಷ್ಟ್ರಮಟ್ಟದ ವರಗೆ ಸ್ವಚ್ಚತೆಗೆ ಹೆಚ್ಚು ಮಹತ್ವ ನೀಡಬೇಕೆಂದು ತಿಳಿಸಿದರು. ಗೀರಿಶ್ ವಿ ಕುಲಕರ್ಣಿ  ಎಲ್‌ಡಿಎಮ್, ಕೆನರಾ ಬ್ಯಾಂಕ್ ಬಳ್ಳಾರಿ. ಇವರು ನಾವೂ ಪರಿಸರ ಮತ್ತು ನಮ್ಮ ಸುತ್ತಲಿನ ವಾತಾವರಣವನ್ನು ಸ್ವಚ್ಚವಾಗಿಡುವದರ ಜೊತೆಗೆ ತ್ಯಾಜ್ಯ ವಸ್ತುಗಳ ಸರಿಯಾದ ವಿಲೆವಾರಿ ಹಾಗೂ ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಶ್ರಮೀಸಬೇಕು ಎಂದು ತಿಳಿಸಿದರು. ರಾಜೇಶ್ ಹಿರಿಯ ವ್ಯವಸ್ಥಾಪಕರು ಪ್ರಾದೇಶಿಕ ಕಛೇರಿ ಕೆನರಾ ಬ್ಯಾಂಕ್ ಬಳ್ಳಾರಿ. ರಾಜೇಸಾಬ್ ಎಚ್ ಎರಿಮನಿ ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬಳ್ಳಾರಿ, ದಿನೇಶ ಆರ್ಥಿಕ ಸಮಾಲೋಚಕರು, ಜಡೇಪ್ಪ,  ಚೆನ್ನಪ್ಪ , ಸಿದ್ದಲಿಂಗಮ್ಮ, ಸಂತೋಷ ಕುಮಾರ, 30 ಜನ ಶಿಭಿರಾರ್ಥಿಗಳು ಈ ಕಾರ್ಯಕ್ರನದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ