ಮುಧೋಳ

ಕ್ಷಾತ್ರತೇಜ ಭಾರತ ಅಭಿಯಾನ -75ರಡಿ ಸ್ವಚ್ಚತಾ ಕಾರ್ಯಕ್ರಮ

ಕ್ಷಾತ್ರತೇಜ ಭಾರತ ಅಭಿಯಾನ -75ರಡಿ ಸ್ವಚ್ಚತಾ ಕಾರ್ಯಕ್ರಮ

ಕಸಾಫ,ಬಿಇಓ ಕಚೇರಿ ಸ್ವಚ್ಚ ಮಾಡಿದ ರಾಮಕೃಷ್ಣ ಶಾರದಾ ಸಂಘದ ಸದಸ್ಯರು 

ಮುಧೋಳ13: ಸರ್ಕಾರ ಮಾಡುವ ಹಲವಾರು ಕಾರ್ಯಗಳನ್ನು ಸಂಘ ಸಂಸ್ಥೆಗಳು ಮಾಡುತ್ತಿರುವದು ಶ್ಲಾಘನೀಯ ಎಂದು  ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸಂಘದ ಅಧ್ಯಕ್ಷ ಪ್ರಕಾಶ ಬೆಳಗಲಿ ಹೇಳಿದರು. 

ಭಾನುವಾರ ನಗರದ ರಾಮಕೃಷ್ಣ ಶಾರದ,ವಿವೇಕಾನಂದ ಆಧ್ಯಾತ್ಮಿಕ ಕೇಂದ್ರದಿಂದ "ಕ್ಷಾತ್ರತೇಜ ಭಾರತ ಅಭಿಯಾನ -75 ರ 50ನೇ ಕಾರ್ಯಕ್ರಮದ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಭವನದ ಆವರಣವನ್ನು ಸ್ವಚ್ಚಗೊಳಿಸಿ ಅವರು ಮಾತನಾಡಿದರು 

ಮುಧೋಳ ತಾಲ್ಲೂಕಿನ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪದವಿದರ ಪ್ರಾಥಮಿಕ ಶಾಲಾ  ಶಿಕ್ಷಕರ ಸಂಘ, ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು, ಕ್ರಿಕೆಟ್ ಅಕಾಡೆಮಿ, ರಾಷ್ಟೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು ಮತ್ತು ಹಿರಿಯರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. 

ಸಂಸ್ಥಾಪಕ ಅಂಘದ ಅಧ್ಯಕ್ಷ ಆನಂದ ಶಿರಬೂರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಪ್ರಕಾಶ ಬೆಲಗಲಿ, ರಮೇಶ ಅರಕೇರಿ, ಕಸಾಪ ಅಧ್ಯಕ್ಷ ಆನಂದ ಪೂಜಾರಿ, ರವಿಕುಮಾರ ಮೂಲಿಮನಿ, ಸಿದ್ದು ಚಿಕದಾನಿ, ಶ್ರೀನಿವಾಸಗೌಡ ಪಾಟೀಲ, ಎ.ಜಿ.ಸೋಮನಗೌಡರ,ಸಂಗಮೇಶ ನೀಲಗುಂದ, ಅಕ್ಕಮಹಾದೇವಿ ಪತ್ತಾರ, ಶ್ಯಾಮಲಾ ಮರೇಗುದ್ದಿ, ಶೈಲಜಾ ಲಿಂಗದ,ವಂದನಾ ದೇಶಪಾಂಡೆ, ಮಹಾದೇವಿ ಶಿರಬೂರ.

ಸುದ್ದಿ ಓದಿ