ಮಹಲಿಂಗಪುರ

ಸ್ವಚ್ಛ ಭಾರತ ಮಿಷನ್‌: ಜಾಗೃತಿ ಕಾರ್ಯಕ್ರಮ

ಸ್ವಚ್ಛ ಭಾರತ ಮಿಷನ್‌: ಜಾಗೃತಿ ಕಾರ್ಯಕ್ರಮ

ಮಹಾಲಿಂಗಪುರ 09: ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಹಸಿ ಹಾಗೂ ಒಣ ಕಸ ಬೇರಿ​‍್ಡಸಿ ಪುರಸಭೆ ವಿಲೇವಾರಿ ವಾಹನಕ್ಕೆ ಹಾಕುವ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ನಡೆಯಿತು.  

ಇದರ ಪ್ರಯುಕ್ತ ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ ಮತ್ತು 21ನೇ ವಾರ್ಡಿನ ಸದಸ್ಯ ರಾಜು ಚಮಕೇರಿ ಅವರ ಉಪಸ್ಥಿತಿಯಲ್ಲಿ, ಪ್ರತಿ ಮನೆಗೆ ಎರಡು ಕಸದ ಡಬ್ಬಿಗಳನ್ನು ವಿತರಿಸುವ ಮೂಲಕ ವಾರ್ಡಿನ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಚ್‌.ಎಸ್‌. ಚಿತ್ತರಗಿ, ನರಗಟ್ಟಿ ವಕೀಲರು, ಯಲ್ಲಪ್ಪ ಹಟ್ಟಿ, ಮಲ್ಲು ಯರಡ್ಡಿ, ಗುರಲಿಂಗಯ್ಯ ಮಠಪತಿ, ವಿನೋದ ಹುರಕಡ್ಲಿ, ಶಿವಾನಂದ ಹುಣಶ್ಯಾಳ, ಮಹಾಂತೇಶ ಮೇಟಿ, ಮಹಾಲಿಂಗ ಬಾಳಿಕಾಯಿ, ಶೇಖರ ಮಗದುಮ, ಪುರಸಭೆ ಸಿಬ್ಬಂದಿಗಳಾದ ಎಸ್‌.ಎನ್‌. ಪಾಟೀಲ್, ರಾಜು ಹೂಗಾರ್, ಸಿದ್ದು ಅಳ್ಳಿಮಟ್ಟಿ, ಶಂಕರಗೌಡ ಪಾಟೀಲ್ ಇನ್ನೂ ಮುಂತಾದವರಿದ್ದರು. 


ಸುದ್ದಿ ಓದಿ