ಒತ್ತಡದ ಜೀವನಕ್ಕೆ ಸ್ವಚ್ಛ ಪರಿಸರ ಸುಪರ್ ಸ್ಪ್ಪೆಷಲ್ ಕ್ಲಿನಿಕ್: ಅಲ್ಲಾಬಕ್ಷಿ
ಹಗರಿಬೊಮ್ಮನಹಳ್ಳಿ. 07 : ಪ್ರಸ್ತುತ ಒತ್ತಡದ ಜೀವನಕ್ಕೆ ಸ್ವಚ್ಛ ಸುಣದರ ಪರಿಸರ ಸುಪರ್ ಸ್ಪಷಲ್ ಕ್ಲಿನಿಕ್ ಇದ್ದ ಹಾಗೆ ಎಂದು ಪುರಸಭೆ ಸದಸ್ಯ ಅಲ್ಲಾಬಕ್ಷಿ ಹೇಳಿದರು.ಪಟ್ಟಣದ 17ನೇ ವಾಡರ್್ನೇ ಅಂಗನವಾಡಿಯ ಮುಂಭಾದಲ್ಲಿ ಸಸಿ ನೆಡುವುದರ ಮೂಲಕ ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಿ ಅವರು ಮಾತನಾಡಿ ಇಂದು ಮನುಷ್ಯ ಜೀವನದ ಪ್ರತಿಯೊಂದು ಹಂತದಲ್ಲೂ ಒತ್ತಡದಲ್ಲಿ ಸಿಲುಕಿ ತನ್ನ ಆರೋಗ್ಯದ ಮೇಲಿನ ಕಾಳಜಿಗೆ ಕಿಂಚಿತ್ತು ಸಮಯ ನೀಡದೇ ಬಳಲಿ ಬೆಂಡಾಗುತ್ತಿರುವುದು ಕಾಣಬಹುದಾಗಿದೆ ಇದರಿಂದ ಅನೇಕ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗಳ ಅಲೆದಾಟ ನಿರಂತರವಾಗಿದೆ ಇದಕ್ಕೆಲ್ಲ ಹಿಂದಿನ ಕಾಲದ ಜೀವನ ಶೈಲಿ ಮಾಯವಾಗಿರುವುದು ಎಂದರೆ ತಪ್ಪಿಲ್ಲ.
ಮನುಷ್ಯ ತನ್ನ ಸ್ವಾರ್ಥಕ್ಕೆ ಗಿಡ ಮರುಗಳ ದಾರುಣ ಹತ್ಯೆ,ಪ್ಲಾಸ್ಟಿಕ್ ಬಳಕೆ,ನಿರಂತರವಾಗಿ ಹೊಗೆ ಉಗುಳುತ್ತಿರುವ ಕೈಗಾರಿಕಾ ಘಟಕಗಳು ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಜೊತೆ ಸ್ವಚ್ಛ ಗಾಳಿಯನ್ನು ಸೇವಿಸದಂತಹ ಇಕ್ಕಟ್ಟಿನ ಪರಿಸ್ಥಿತಿ ನಿಮರ್ಾಣವಾಗಿದೆ ಇದಕ್ಕೆಲ್ಲಾ ಪರಿಸರ ನಾಶ ಪ್ರಮುಖ ಕಾರಣವಾಗಿದೆ, ಪರಿಸರ ದಿನಾಚರಣೆ ಕೇವಲ ಆಚರಣೆಗ ಸೀಮಿತವಾಗದೇ,ಪರಿಸರ ರಕ್ಷಣೆ ನಿರಂತರವಾಗಬೆಕಿದೆ ಎಂದರು. ಜೂ.07 ಹೆಚ್ಬಿಹೆಚ್ 01 : ಪಟ್ಟಣದ 17ನೇ ವಾಡರ್್ನ ಅಂಗನವಾಡಿ ಕೇಂದ್ರದ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು. ಪುರಸಭೆ ಸದಸ್ಯ ಅಲ್ಲಾಭಕ್ಷ , ರಫಿ,ಅಂಗನವಾಡಿಯ ಮಾಬುನ್ನಿ,ಸಹಾಯಕಿ ಸರಸ್ವತಿ ಇದ್ದರು