ಶಿಗ್ಗಾವ್

ಸರ್ವತೋಮುಖ ಅಭಿವೃದ್ಧಿಗೆ ಶಾಸ್ತ್ರೀಯ ನೃತ್ಯ ಅವಶ್ಯಕ : ಬನ್ನಿಕೊಪ್ಪ

ಸರ್ವತೋಮುಖ ಅಭಿವೃದ್ಧಿಗೆ ಶಾಸ್ತ್ರೀಯ ನೃತ್ಯ ಅವಶ್ಯಕ : ಬನ್ನಿಕೊಪ್ಪ

ಶಿಗ್ಗಾವಿ,22: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಾಸ್ತ್ರೀಯ ನೃತ್ಯ ಕಲಿಯುವುದು ಬಹಳ ಅವಶ್ಯಕ ಎಂದು ಜಗದೀಶ ಬನ್ನಿಕೊಪ್ಪ ಹೇಳಿದರು.  ಪಟ್ಟಣದ ಜಯನಗರದ ಶ್ರೀ ವರಸಿದ್ದೀ ವಿನಾಯಕ ದೇವಸ್ಥಾನದಲ್ಲಿ ನಟರಾಜ ನೃತ್ಯ ಶಾಲೆಯ ವತಿಯಿಂದ ಗುರು ಪೂರ್ಣಿಮೆ ಆಚರಣೆ ಕಾರ್ಯಕ್ರಮ ಮತ್ತು ಅ. ಬಾ .ಗಂಧರ್ವ ಮಹಾ ವಿದ್ಯಾಲಯ ನಡೆಸುವ ಭರತನಾಟ್ಯ ಪರೀಕ್ಷೆಯಲ್ಲಿ ತೇರ್ಗಡೆಯ ಫಲಿತಾಂಶದ ಅಂಕಪಟ್ಟಿ ವಿತರಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಕಲಿಕೆಗೆ ಪ್ರಾದ್ಯಾನ್ಯತೆಯನ್ನು ನೀಡಿ ಎಂದು ತಂದೆ ತಾಯಿಂದರಿಗೆ ಕಿವಿ ಮಾತು ಹೇಳಿದರು.  ಮುಖ್ಯ ಅತಿಥಿ ಸಿ.ಬಿ.ಹಾನಗಲ್ಲ ಮಾತನಾಡಿ ನೃತ್ಯ ಪರೀಕ್ಷೆಯಲ್ಲಿ ಮಕ್ಕಳು ನೂರಕ್ಕೆ ನೂರು ಫಲಿತಾಂಶ ತಂದಿರುವುದು ತುಂಬಾ ಸಂತೋಷದ ವಿಷಯ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.    ನೃತ್ಯ ಶಾಲೆಯ ಗುರುಗಳು ಸಾಯಿಬಾಬಾ ಕಾಮನಹಳ್ಳಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಪಾಲಕರು, ಪೋಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಿನಿ ಕಾಮನಹಳ್ಳಿ ಸ್ವಾಗತಿಸಿದರು, ಕುಮಾರಿ ಜಾಹ್ನವಿ ಎಸ್ ವಂದಿಸಿದಳು. 


ಸುದ್ದಿ ಓದಿ