ವಿಶಿಷ್ಟವಾದ ಶಿಕ್ಷಣವನ್ನು ನೀಡಿದರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ: ಮಾತಾ ಮಂಜಮ್ಮ ಜೋಗತಿ
ಬಳ್ಳಾರಿ 23: ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯವು ಕೇವಲ ಶಿಕ್ಷಣ ಮಾತ್ರವಲ್ಲ ಕಲೆ ಸಾಹಿತ್ಯ ಸಂಸ್ಕೃತಿ ಜಾನಪದ ಆಯಾಮಗಳ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವು ನೀಡುತ್ತಿದೆ. ಇದು ಆರೋಗ್ಯಕರವಾದ ವಾತಾವರಣ ಎಂದು ಹೇಳಿದರು. ಈ ರೀತಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಈ ರೀತಿಯ ವಿಶಿಷ್ಟವಾದ ಶಿಕ್ಷಣವನ್ನು ನೀಡಿದರೆ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಪದ್ಮ ಶ್ರೀ ಪ್ರಶಸ್ತಿ ಲಭಿಸಿದ ಮಾತಾ ಮಂಜಮ್ಮ ಜೋಗತಿ ಹೇಳಿದರು.
ನಗರದ ಕಪ್ಪಗಲ್ ರಸ್ತೆಯ 22ನೇ ವಾರ್ಡಿನ ಶ್ರೀ ಸತ್ಯಂ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯವು ಆಯೋಜಿಸಿದ 2021-22ನೇ ಸಾಲಿನ ಬಿ.ಇಡಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಅನನ್ಯ ಸಾಧಕಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಂತರ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಅವರು ಮಾತ ಮಂಜಮ್ಮ ಜೋಗತಿ ಅವರ ಕಲಾ ಸೇವೆಯನ್ನು ಪರಿಗಣಿಸಿ ಅನನ್ಯ ಸಾಧಕಿ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯದರ್ಶಿ ಜಗದೀಶ್ ಕುಮಾರ್ ಅವರು ಮಾತನಾಡಿ ನಮ್ಮ ಸಂಸ್ಥೆಯು 2005ರಲ್ಲಿ ಸ್ಥಾಪನೆಯಾದಾಗಿನಿಂದ ಕಳೆದ ಹದಿನೆಂಟು ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ. ಬೇರೆ ಬೇರೆ ಉದ್ಯೋಗಗಳಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಜೊತೆಗೆ ನಮ್ಮ ಸಂಸ್ಥೆಯು ನುರಿತ ಬೋಧಕ ಸಿಬ್ಬಂದಿ ವರ್ಗವು ಹೊಂದಿದ್ದು ಶೇಕಡಾ ನೂರರಷ್ಟು ಫಲಿತಾಂಶ ಪಡೆದ ಹೆಮ್ಮೆ ಇದೆ. ಕಲೆ ಸಾಹಿತ್ಯ ಸಂಸ್ಕೃತಿ ಸಂಬಂಧಿಸಿದಂತೆ ಅನೇಕ ಪಠ್ಯೇತರ ಚಟುವಟಿಕೆಗಳನ್ನು ಕೂಡ ಸಂಘಟಿಸುತ್ತಾ, ಸಾಕ್ಷಿ ಪ್ರಜ್ಞೆಯಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತ ಮಂಜಮ್ಮ ಜೋಗತಿಯವರ ಸಾಧನೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರನ್ನು ಆಹ್ವಾನಿಸಿ ಗೌರವಿಸಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ, ವೃತ್ತಿಯಲ್ಲಿ ಸೇವಾ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಶಾಂತ್ ಕುಮಾರ್ ಅವರು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಅಶ್ವ ರಾಮು ಅವರು ಮಾತನಾಡಿ ಮಂಜುನಾಥ ನಿಂದ ಮಂಜಮ್ಮಳಾಗಿ ಅನೇಕ ಅವಮಾನ ಅಪಮಾನಗಳನ್ನು ಸಹಿಸಿಕೊಂಡು ಯಾವ ಸಮಾಜ ಅವರನ್ನು ತಿರಸ್ಕರಿಸಿದರೋ ಅದೇ ಸಮಾಜದಿಂದ ಪುರಸ್ಕಾರ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ ಮಾತೆ ಪದ್ಮಶ್ರೀ ಮಂಜಮ್ಮ ಜೋಗತಿ ಅವರು ನಮಗೆಲ್ಲ ಆದರ್ಶರಾಗಿದ್ದಾರೆ. ಅವರ ಎಂಟು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿರುವುದು ದಾಖಲೆಯ ವಿಶೇಷ ಎಂದರು. ಶಿಕ್ಷಣ ವೆಂದರೆ ಕೇವಲ ಓದು ಬರಹ ಮಾತ್ರವಲ್ಲ, ವರ್ತನೆ, ನಡವಳಿಕೆ, ಬದುಕುವ ಕಲೆ, ಕೌಶಲಗಳನ್ನು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಜೀವನವನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಪ್ರಾಧ್ಯಾಪಕ ಎಂ ವಿ ಜಯದೇವಯ್ಯ, ಆಲಂಭಾಷ, ನಾಗೇಶ್ ಬಾಬು, ಆರ್ ಚಂದ್ರಶೇಖರ್, ಶ್ರೀಕಾಂತ ಮುನಿ ಎನ್, ರೆಡ್ಡಿ ಹಳ್ಳಿ ಗಿರಿಜಾ, ಅಶ್ವಿನಿ, ಅನುಷಾ, ಬೋಧಕೇತರ ಸಿಬ್ಬಂದಿಯವರಾದ ಕೆ.ನೀಲಕಂಠ, ಚಂದ್ರಶೇಖರ ನಾಯ್ಡು, ಸುಲೋಚನಾ ಜೆ, ಚಂದ್ರಶೇಖರ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ನಿರೂಪಣೆಯನ್ನು ಸಂತೋಷ್ ಕುಮಾರ್, ಫೈರೋಜಾ, ಸ್ವಾಗತ ಆಲಂಭಾಷ, ವಂದನಾರೆ್ಣಯನ್ನು ಮಾನಪ್ಪ ನೆರವೇರಿಸಿದರು.