ಹುಕ್ಕೇರಿ

ಬಂಡವಾಳಶಾಯಿ ಔಷಧ ಮಳಿಗೆಗಳಿಗೆ ಕಡಿವಾಣ ಹಾಕಿ

ಬಂಡವಾಳಶಾಯಿ ಔಷಧ ಮಳಿಗೆಗಳಿಗೆ ಕಡಿವಾಣ ಹಾಕಿ

ಹುಕ್ಕೇರಿ 12: ನಗರದಲ್ಲಿ ನೂತನವಾಗಿ ಆರಂಭವಾಗಲಿರುವ ಅಪೋಲೊ, ವೇಲ್‍ನೆಸ್ ಮತ್ತು ಮೇಡ್‍ಪ್ಲಸ್ ಔಷಧಿ ಅಂಗಡಿಗಳಿಗೆ ನಿಯಂತ್ರಣ ಹಾಕಬೇಕು ಎಂದು ನಗರದ ಔಷಧಿ ವ್ಯಾಪಾರಸ್ಥರ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಕಲ್ಯಾಣಿ ನೇತೃತ್ವದಲ್ಲಿ ಔಷಧಿ ಅಂಗಡಿಗಳ ಮಾಲೀಕರು ಮಿನಿವಿಧಾನಸೌಧ ಎದುರು ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಕಲ್ಯಾಣಿ ಮತ್ತು ಬಸವರಾಜ ಕುಂಬಾರ ರಾಜ್ಯಾದ್ಯಂತ ಕಾರ್ಪೋರೇಟ್ ಕಂಪನಿಗಳು ಔಷಧಿ ಅಂಗಡಿಗಳನ್ನು ತೆರೆದು ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದರಿಂದ ನಮಗೆ ವ್ಯಾಪಾರ ಕುಂಠಿತವಾಗಿ ಮಳಿಗೆಗಳನ್ನು ಬಂದ್ ಮಾಡುವ ಪರಿಸ್ಥಿತಿ ಬಂದಿದೆ. ಕಾರಣ ರಾಜ್ಯ ಸರ್ಕಾರ  ಕಾರ್ಪೋರೇಟ್ ಔಷಧಿ ಅಂಗಡಿಗಳನ್ನು ಸ್ಥಾಪಿಸಲು ಕಡಿವಾಣ ಹಾಕಬೇಕು. ಸರ್ಕಾರದ ಮಾನದಂಡದ ಪ್ರಕಾರ ಜನಸಂಖ್ಯೆ ಆಧಾರದ ಮೇಲೆ ಅಂಗಡಿ ತೆರೆಯಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಔಷಧಿ ವ್ಯಾಪಾರಿಗಳ ಅಸೋಸಿಯೇಷನ್ ಸದಸ್ಯರಾದ ಸುನಿಲ ನಾಯಿಕ, ರಾಜು ಮುಚ್ಚಂಡಿ, ಲಲಿತಕುಮಾರ ಜಾಧವ, ರಾಜು ದೇಸಾಯಿ, ಮಹಾಂತೇಶ ಮಾನವಿ, ಪ್ರವೀಣ ಹೊಸಮನಿ, ಅಜೀತ ಕುಂಬಾರ, ನಾಗರಾಜ ಢಂಗ, ಆರುಂಧತಿ ಸಬನೀಸ್, ಜಯಶ್ರೀ ಚಿರಂತಿಮಠ, ರಾಜೇಂದ್ರ ಕೋರತಿ ಮೊದಲಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ