ಕುರಿ, ಉಣ್ಣೆ ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 21: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಸಿ.ರಮೇಶ ನೇತೃತ್ವದಲ್ಲಿ ಸೋಮವಾರ ಹೊಬಳಿಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಭೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ನೇಮಿಸಲಾಯಿತು.
ಅಧ್ಯಕ್ಷರನ್ನಾಗಿ ಚನ್ನಬಸಪ್ಪ, ಉಪಾಧ್ಯಕ್ಷರನ್ನಾಗಿ ಲಿಂಗರಾಜ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾರುತಿ ಬಿ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.ಪದಾಧಿಕಾರಿಗಳನ್ನು ಬ್ಯಾಟಿ ನಾಗರಾಜ, ದೊಡ್ಡಬಸಪ್ಪ, ಮಂಜುನಾಥ್ ಹೆಚ್ ಅನುಮೋದಿಸಿದರು.
ಈ ಸಂಧರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಕೆ.ಚನ್ನ ಬಸಪ್ಪ, ಪ್ರಧಾನ ಕಾರ್ಯದರ್ಶಿ ಮಾರುತಿ, ವೆಂಕಟೇಶ, ಯಮುನಮ್ಮ, ಸರೊಜಮ್ಮ, ಹೊಬಳಿಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸದಸ್ಯರುಗಳು ಬಾಗವಹಿಸಿದ್ದರು.