ಮಹಲಿಂಗಪುರ

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ‘ಚಿತ್ರ ಮಿತ್ರ’ ಕಾರ್ಯಕ್ರಮ

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ‘ಚಿತ್ರ ಮಿತ್ರ’ ಕಾರ್ಯಕ್ರಮ

ಮಹಾಲಿಂಗಪುರ 6: ರನ್ನ ಬೆಳಗಲಿಯ ಸಿದ್ದಾರೂಢ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಇಲಾಖೆಯ ಆದೇಶದ ಪ್ರಕಾರ ರಾಜ್ಯಮಟ್ಟದ ಅಂಚೆ ಪತ್ರಗಳಲ್ಲಿ ವಿಜ್ಞಾನ ಚಿತ್ರಗಳನ್ನು ಬಿಡಿಸುವ  ಚಿತ್ರ ಮಿತ್ರ  ಎಂಬ ವಿನೂತನ ಕಾರ್ಯಕ್ರಮ ನಡೆಯಿತು. 

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ವಿಜ್ಞಾನ ಚಿತ್ರಗಳನ್ನು ಬಿಡಿಸಿ ಅವುಗಳ ಭಾಗಗಳನ್ನು ಗುರುತಿಸುವುದರ ಮೂಲಕ ತಮ್ಮ ಜ್ಞಾನವನ್ನು ಒರೆಗೆ ಹಚ್ಚಿದರು.

ಕಾರ್ಯಕ್ರಮದಲ್ಲಿ ರಾಧಿಕಾ ಗೌರವ್ವಗೊಳ, ಆಕಾಶ್ ಗರಗದ, ಶಂಕರ್ ಕುಂಬಾರ, ಮಹೇಶ್ ಲೋಕಾಪುರ ಎಂಬ ವಿದ್ಯಾರ್ಥಿಗಳ ಚಿತ್ರಗಳ ಅಂಚೆ ಪತ್ರಗಳನ್ನು ಇಲಾಖೆಯ ಮುಂದಿನ ಕ್ರಮಕ್ಕಾಗಿ ಮೈಸೂರು ವಿಭಾಗಕ್ಕೆ ಕಳುಹಿಸಿಕೊಡಲಾಯಿತು.

ಕೊರೋನಾ ಕಾರಣ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್, ಇನ್ನೂ ಇತ್ಯಾದಿ ಆರೋಗ್ಯ ಇಲಾಖೆಯ ಶಿಷ್ಟಾಚಾರಗಳ ಪಾಲನೆ ಮಾಡಲಾಯಿತು.

ಪ್ರೌಢ ಶಾಲೆಯ ಮು.ಗುರುಗಳಾದ ಆರ್ ಹೆಚ್ ಕಂಬಾರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. 

ಶಾಲೆಯ ಶಿಕ್ಷಕರಾದ ಐ ಹೆಚ್ ಗಸ್ತಿ, ಎಸ್ ಎಸ್ ಮದುರಖಂಡಿ, ಬಿ ಪಿ ಚೋಪಡೆ, ಆನಂದ ಏಳೆಮ್ಮಿ,   ಎಂ ಆರ್ ಕುಲಕರ್ಣಿ,   ಬಿ ಕೆ ಕಂಬಾರ ಉಪಸ್ಥಿತರಿದ್ದರು.

ಸುದ್ದಿ ಓದಿ