ಮಹಲಿಂಗಪುರ

ವಾರ್ಷಿಕ ಸ್ನೇಹ ಸಮ್ಮೇಳನ: ಚಿನ್ನರ ಕಲರವ ವಿಶೇಷ ಕಾರ್ಯಕ್ರಮ

ವಾರ್ಷಿಕ ಸ್ನೇಹ ಸಮ್ಮೇಳನ: ಚಿನ್ನರ ಕಲರವ ವಿಶೇಷ ಕಾರ್ಯಕ್ರಮ

ಮಹಾಲಿಂಗಪುರ: ಸ್ಥಳೀಯ ಡಾ.ರಾಧಾಕೃಷ್ಣನ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯು 18ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ 2022-23ನೇ ಸಾಲಿನ ವಾರ್ಷಿ ಕ ಸ್ನೇಹ ಸಮ್ಮೇಳನ ' ಚಿನ್ನರ ಕಲರವ ' ವಿಶೇಷ ಕಾರ್ಯಕ್ರಮ ಫೆ. 18ರಂದು ಬನಶಂಕರಿ ದೇವಿ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶಾಲಾ ಸಂಸ್ಥಾಪಕರು, ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತರೂ ಆದ ನಿವೃತ್ತ ಪ್ರಾಚಾರ್ಯ ಎಸ್ ಎಂ. ಉಳ್ಳೇಗಡ್ಡಿ ವಹಿಸಲಿದ್ದಾರೆ.ಈ ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ. ಸ್ವಾಗತ ಮತ್ತು ಪರಿಚಯ, ಮಾಲಾರ್ಪಣೆ, ವಾರ್ಷಿಕ ವರದಿ ವಾಚನ, ಕಿರು ಪಾತ್ರಾಭಿನಯ, ಗಣ್ಯರಿಗೆ ಸನ್ಮಾನ, ಸಾಧಕ ಮಕ್ಕಳಿಗೆ ಪ್ರಶಸ್ತಿ ವಿತರಣೆ ನಂತರ ಮುಖ್ಯ ಅತಿಥಿಗಳ ಭಾಷಣ ನಡೆಯಲಿದ್ದು ಸಂಸ್ಥೆಯ ಅಧ್ಯಕ್ಷರಿಂದ ಸಮಾರೋಪ ಭಾಷಣ ಅಲ್ಲದೆ ಗಣ್ಯರಿಗೆ ಸವಿ ನೆನಪಿನ ಕಾಣಿಕೆ ವಿತರಣೆ ಮಾಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷೆ ಎಂ ಎಸ್.ಉಳ್ಳೇಗಡ್ಡಿ, ಕಾರ್ಯದರ್ಶಿ  ಶಶಿಧರ್ ಉಳ್ಳೇಗಡ್ಡಿ ಮಾಹಿತಿ ನೀಡಿದ್ದಾರೆ.

ಮುಖ್ಯ ಅತಿಥಿಗಳಾಗಿ, ಪುರಸಭಾ ಅಧ್ಯಕ್ಷರ ಬಸವರಾಜ ಹಿಟ್ಟಿನಮಠ, ಜಂಟಿ ನಿರ್ದೇಶಕರು, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರ ಕಚೇರಿ ಧಾರವಾಡ ಗಜಾನನ ಮನ್ನಿಕೇರಿ, ಸಂಸ್ಥೆಯ ಸಲಹಾ ಸಮಿತಿ ಸದಸ್ಯೆ ಸಂಜನಾ ಬಸವರಾಜ. ಹಿಟ್ಟಿನಮಠ ಅತಿಥಿಗಳಾಗಿ ಪುರಸಭೆ ಸದಸ್ಯರಾದ ಯಲ್ಲನಗೌಡ ಪಾಟೀಲ್, ಜಾವೇದ್ ಭಾಗವಾನ, ಜಿಲ್ಲಾ ಕಾನಿಪ ಸದಸ್ಯ ಎಸ್ ಎಸ್.ಈಶ್ವರಪ್ಪಗೋಳ, ಉಪಾಧ್ಯಕ್ಷ ಗ್ರಾಪಂ ಢವಳೇಶ್ವರ ಲಕ್ಷ್ಮಣ ಪಟ್ಟಣಶೆಟ್ಟಿ, ಭೂಮಾಪಕ ಶಿವಕುಮಾರ ಕುಳ್ಳೋಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ಎಂ.  ಮುಲ್ಲಾ, ಸಮೂಹ ಸಂಪನ್ಮೂಲ ವ್ಯಕ್ತಿ ಎಸ್ ಎನ್.ಬ್ಯಾಳಿ, ಪಿಕೆಪಿಎಸ್ ವಿಷ್ಣುಗೌಡ ಪಾಟೀಲ್, ಗಣ್ಯ ವ್ಯಾಪಾರಸ್ತರು ಸಿದ್ದು ಕಾಖಂಡಿಕಿ, ಸಲಹಾ ಸಮಿತಿ ಸದಸ್ಯ ಮಹಾಲಿಂಗ ಗೋಕಾವಿ ಮತ್ತು ಸಿದ್ದು ಹೂಗಾರ, ನ್ಯಾ. ಪ್ರಶಾಂತ ಕಜಗಲ್, ಪ್ರಶಾಂತ ಕಡೆಮನಿ, ಏಜಾಜ್ ಯಾದವಾಡ ಇನ್ನೂ ಅನೇಕರು ಆಗಮಿಸಲಿದ್ದಾರೆ. 


ಸುದ್ದಿ ಓದಿ