ಇಂದಿನಿಂದ ಚಿಂಚಲಿ ಮಾಯಾಕ್ಕಾದೇವಿ “ಕಿಲ ಮತ್ತು ಕಟ್ಟರ ಜಾತ್ರಾ ಮಹೋತ್ಸವ” ಪ್ರಾರಂಭ
ಇಂದಿನಿಂದ ಚಿಂಚಲಿ ಮಾಯಾಕ್ಕಾದೇವಿ “ಕಿಲ ಮತ್ತು ಕಟ್ಟರ ಜಾತ್ರಾ ಮಹೋತ್ಸವ” ಪ್ರಾರಂಭ
ವರದಿ: ಅನುಷ್ಕಾ ಕೋಳಿಗುಡ್ಡೆ. ಚಿಂಚಲಿ.
ಚಿಂಚಲಿ, 05 : ಅರ್ಧನಾರೇಶ್ವರಿ ಅವತಾರಧಾರಣಿ ಆದ ಮಾಯಕ್ಕಾ ದೇವಿಯ ಜಾಗೃತ ಸ್ಥಳವಾಗಿದೆ. ಈ ಸುಕ್ಷೇತ್ರದಲ್ಲಿ ವರ್ಷ ಪೂರ್ತಿಯ ಸಡಗರ ಸಂಭ್ರಮ ಉತ್ಸವದ ವಾತಾವರಣದಿಂದ ಎಲ್ಲಿ ನೋಡಿದಲ್ಲಿ ಕಂಡು ಬರುತ್ತದೆ. ಮಾಯಕ್ಕಾ ದೇವಿಯ ಮಹಿಮೆ ಅಂಥಹದು. ಇಲ್ಲಿ ಮಾಯಕ್ಕಾ ದೇವಿಯ ಭಾರತ ಹುಣ್ಣುಮೆಯಲ್ಲಿ ಭವ್ಯ ಜಾತ್ರೆ ಅಲ್ಲದೆ. ವಿಶೇಷವಾಗಿ ಮೂರು ವರ್ಷಕ್ಕೊಮ್ಮೆ ‘ಕಿಲಕಟ್ಟೆ’ಯ ಜಾತ್ರೆ ನಡೆಯುತ್ತದೆ. ಈ ಜಾತ್ರೆಯು ತಾಯಿ ಮಾಯಕ್ಕಾ ದೇವಿಯ ನೇತೃತ್ವದಲ್ಲಿ ವಿಶೇಷವಾಗಿ ಮೂರು ದಿನಗಳವರೆಗೆ ನಡೆಯುವ “ ಕಿಲ ಕಟ್ಟರ” ಜಾತ್ರೆ ಆಗಿದೆ. ಜಾತ್ರೇಯಲ್ಲಿ ವಿಶೇಷವಾಗಿ ಇಲ್ಲಿ ಬೆಂಕಿ ಇಲ್ಲದೆ ಅಡಿಗೆ ಆಗುತ್ತದೆ. ಈ ದೈವದ ಲೀಲೆ ನೋಡಬೇಕಾದರೆ ದಕ್ಷೀಣ ಭಾರದದ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಕ್ಷೇತ್ರ ಚಿಂಚಲಿ ಮಾಯಾಕ್ಕಾ ದೇವಿಯ “ ಕಿಲಕಟ್ಟರ ಜಾತ್ರೆಯು ಸಾಕ್ಷೀಯಾಗಿದೆ. ಕಿಲಕಟ್ಟೆ ಅಂದ್ರೆ ಏನು? ಅದರ ಜಾತ್ರೆ ಮಾಯಕ್ಕ ಏಕೆ ಮಾಡಿದಳು? ಬೆಂಕಿ ಇಲ್ಲದೆ ಅಡಿಗೆ ಏಕೆ ಆಗುತ್ತದೆ? ಅನುವ ಯಕ್ಷವಾದ ಪ್ರಶ್ನೆಗೆ ಉತ್ತರ ಇಲ್ಲಿದೆ ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಹಾರಾಷ್ಟ್ರದ ಗಡಿಗೆ ಹತ್ತಿಕೊಂಡಂತ್ತಿರುವ ಚಿಂಚಲಿಯ ಮೂಲತಃ ಹಿರಿದೇವಿಯ ಕ್ಷೇತ್ರವಾಗಿತ್ತು. ಈ ಕ್ಷೇತ್ರದ ಸುತ್ತಲು ಸಾಕಷ್ಟು ದುಷ್ಟ ದೈತ “ಕಿಲ ಮತ್ತು ಕಟ್ಟೆರ” ಹಾವಳಿಯು ಇತ್ತು. ಅವರು ಅಂಥಿಂತಾ ದೈತರಲ್ಲ ಮನುಷ್ಯ, ಪ್ರಾಣಿಗಳು ಕಂಡರೆ ಅವರಿಗೆ ಹಬ್ಬವಾಗುತ್ತಿತ್ತು. ಈ ಕಾರಣಕ್ಕೆ ಇಲ್ಲಿಗೆ ಯಾವ ಪ್ರಾಣಿಗಳಾಗಲಿ, ಮನುಷ್ಯರಾಗಲಿ ಬರಲು ಹೆದರುತ್ತಿದ್ದರು. ಈ ಭಾಗದ ಜನರ ಪಾಡಂತು ಹೇಳತೀರದು. ಈ ದೈತರ ಇಷ್ಟು ಅದ್ಭುತವಾದ ಶಕ್ತಿ ಪಡೆಯಲು ಕಾರಣವು ಇದೆ. “ಕಿಲ’ ಮತ್ತು ಕಟ್ಟ” ಎಂಬ ದೈತ ಮುಖಂಡರು ಘೋರವಾದ ತಪಸ್ಸು ಮಾಡಿ ಬ್ರಹ್ಮನಿಂದ ಯಾವ ಪಕ್ಷಿ ಪ್ರಾಣಿಗಳಿಂದ, ಹೆಣ್ಣು ಗಂಡಿಂಗ ಮರಣವಾಗಾರದೆಂದು ವರ ಪಡದಿದ್ದರು. ಈ ವರವಿನಿಂದ ಕಿಲ-ಕಟ್ಟ ದೈತರು ಬಹಳ ಉದ್ಧಟತನದಿಂದ ಮೆರೆಯಲು ಪ್ರಾರಂಭಿಸಿದರು. ಧರ್ಮದ ಅದಃಪತನವಾಯಿತು. ಇಂತಹ ಸಂದರ್ಭದಲ್ಲಿ ಮಾನ ದೇಶದಿಂದ ಮಾಯಕ್ಕ ತಾಯಿ ಭಕ್ತರ ಕಷ್ಟ ಪರಿಹಾರಕ್ಕಾಗಿ ಈ ನಾಡಿಗೆ ಆಗಮಿಸಿದ್ದಳು. ಹಿರಿದೇವಿಯ ಬೇಟ್ಟಿಯಾದಳು. ಎಲ್ಲ ಇತಿಹಾಸ ತಿಳಿದಳು. ಸಮಯ ಸಾಧಿಸಿ “ಕಿಲ-ಕಟ್ಟ” ದೈತ್ಯೆರೊಡನೆ ಹೊರಾಡಲು ವೀರರನ್ನು (ಈರಗಾರ) ಸಹಾಯಕ್ಕೆ ತಗೆದುಕೊಂಡು ಸಂಹಾರಕ್ಕೆ ಮಾಯಾಕ್ಕಾ ಒರಿಯಿಂದ ಖಡ್ಗ ಹಿರಿದಳು. ಸುದ್ದಿ ತಿಳಿದ ದೈತ್ಯೆರು ಮಾಯಕ್ಕನ ಜೊತೆಗೆ ಯುದ್ಧ ಸಾರಿದರು. ಸುಮಾರು 11 ದಿನ ಮಾಯಕ್ಕಾ ದೈತ್ಯೆರನ್ನು ಓಡಾಡಿಸಿದಳು. ಕೊನೆಗೆ ಮಾಯಕ್ಕನ ಅರ್ಧನಾರೇಶ್ವರಿ ಅವತಾರ ತಾಳಿ ದೈತ್ಯೆರ ಮೇಲೆ ಏರಿ ಬಂದಳು. ಈ ದೇವಿಯ ರೂಪ ನೋಡಿ ತಮ್ಮ ಸಾವು ಸಮೀಪಿಸಿದೆಂದು ತಿಳಿದ ದೈತ್ಯೆರು ಮಾಯಾಕ್ಕಾ ದೇವಿಗೆ ಶೆರಣಾದರು. ಬೇಡಿದ್ದನ್ನು ಕೊಟ್ಟರೆ ಜೀವ ಬಿಡುವುದಾಗಿ ಮಾಯಕ್ಕನಿಗೆ ಪಣವಿಟ್ಟರು. ಮಾಯಕ್ಕ ಕೊಡುವುದಾಗಿ ವಚನ ಕೊಟ್ಟಳು. ಆಗ ದೈತ್ಯೆರು ತಮ್ಮ ಮದುವೆ ಮಾಡಬೇಕು ಹಾಗೂ ಬೆಂಕಿ ಇಲ್ಲದೆ ಅಡಿಗೆ ಮಾಡಿ ಇಡೀ ನಾಡಿನ ಜನರನ್ನು ಕೂಡಿಸಿ ಅವರಿಗೆ ಪ್ರತಿ ಮೂರುವರ್ಷಕ್ಕೋಮ್ಮೆ ಉಣಿಸಬೇಕು, ತಪ್ಪಿದ್ದರೆ ಭಕ್ತರಿಗೆ ಕಷ್ಟ ತೊಂದರೆ ಕೊಡುವುದಾಗಿ ಶರ್ತು ಹಾಕಿದರು. ಇದಕ್ಕೆ ಅವರ ಆಸೆ ತೀರಿಸುವುದಾಗಿ ವಚನ ಕೊಟ್ಟು ಸಂಹಾರ ಮಾಡಿದಳು. ದೈತ್ಯೆರನ್ನು ಸಂಹಾರ ಮಾಡಿದ ನಂತರ ಮಾಯಕ್ಕ ಭಕ್ತರೆಲ್ಲರನ್ನು ಕರೆಯಿಸಿ, ಮದುವೆಯ ಉತ್ಸವದಂತೆ ಹಾಲುಗಂಬ ನೆಟ್ಟು, ಹಂದರ ಹಾಕಿ ನಾಲ್ಕು ರಂಜನಿಗೆ (ದೊಡ್ಡ ಹರವಿಗಳು) ಗಳಲ್ಲಿ ಬೆಂಕಿ ಇಲ್ಲದೆ ಅಡುಗೆ ತಯಾರ ಮಾಡಿದಳು. ಅದನ್ನು ಬಂದ ಭಕ್ತರಿಗೆ ಊಟಕ್ಕೆ ಹಾಕಿದಳು. ಆ ರಂಜನಿಗೆಗಳನ್ನು ಎರಡು ಸ್ಥಳಗಳಲ್ಲಿ ಇಟ್ಟು. ದೈತ್ಯೆರ ಆಸೆಯನ್ನು ನೇರವೇರಿಸಿ ತೃಪ್ತಿಪಡಿಸಿದಳು. ಅಂದಿನಿಂದ ಇಂದಿನವರೆಗೂ ಪ್ರತಿ ಮೂರುವರ್ಷಕ್ಕೊಮ್ಮೆ ಬೆಂಕಿ ಇಲ್ಲದೇ ಅಡುಗೆ ಆಗುತ್ತದೆ. ದೈತರ ಮದುವೆ ನಡೆಯುತ್ತದೆ. ಈ ಕಿಲ ಮತ್ತು ಕಟ್ಟರ ದೈತ್ಯೆರ ಮದುವೆಯ ಉತ್ಸವದಲ್ಲಿ ಸಾಯಕಾಂಲ ಮಾಯಾಕ್ಕಾ ದೇವಸ್ಥಾನದಿಂದ ಧೂಪಾರತಿಯು ಹೊರಗೆ ಬರುವುತ್ತಿದ್ದತೆ ದೈತ್ಯೆರ ಸಂಹಾರಯಾದ ಸ್ಥಳದವರೆಗೆ ಧೂಪಾರತಿಯು ಆರದತ್ತೆ ಅದನ್ನು ನೋಡಿಕೊಳ್ಳುತ್ತಾರೆ ಈ ಧೂಪಾರತಿ ಮುಂದೆ ಹಿಬ್ಬರಿಕಿಯಾಗಿ ಪೂಜಾರಿಯು ಢಾಲ ಮತ್ತು ನವೀಲಿನ ಚವರಿಯನ್ನು ಬಿಸುತ್ತಾ ನಿದ್ದಾನವಾಗಿ ಹಿಂದೆ ಹಿಂದೆ ಬರುತ್ತಿರುತ್ತಾರೆ ಪೂಜಾರಿ ಹತ್ತಿರ ಇರುವ ಧೂಪಾತಿಯು ಮುಂದೆ ಬರುವುದಕ್ಕೆ ತೊಂದರೆಯಾದಂರೆ ಆ ಸಂದರ್ಭದಲ್ಲಿ ಈರಗಾರರು ಅಲಗ (ಖಡ್ಗ) ಗಳಿಂದ ವೀರಾವೇಶದಿಂದ ಕೂಗಿ ಹೊಟ್ಟೆಗೆ ಈರಿದು ಕೊಡ ಮೇಲೆ ಧೂಪಾರತಿ ಮುಂದೆ ಬರುತ್ತದೆ. ಅಲಗ ಹಿಡಿದವರ ಮುಂದೆ ಹೆಜ್ಜೆ ಹಜ್ಜೆ ನೂರಾರು ತೆಂಗಿನಕಾಯಿ ಒಡೆಯುತ್ತಾ ಭಕ್ತರು ಬರುತ್ತಾರೆ, ಈ ದೈತ್ಯೆರ ಮದುವೆ ಉತ್ಸವಕ್ಕೆ ನೂರಾರು ಡೊಳ್ಳಿನ ವಾಲಗ ತಂಡಗಳು, ವೇದ ಘೋಷಗಳೊಂದಿಗೆ ಒಂಟೆ ಕುದುರೆ ಹಾಗೂ ಝಾಂಜ ಮೇಳ, ಡೊಳ್ಳುಕುಣಿತ, ಬ್ಯಾಂಡ್ ವೃಂದ, ಶಹನಾಯಿ, ಭಜನಾ ತಂಡದವರು ಹಾಗೂ ವಿವಿಧ ರೂಪಕಗಳು ಈ ಮೆರವಣಿಗೆಯಲ್ಲಿ ಜನಮನ ಸೆಳೆಯುತ್ತಿದ್ದವು. ಕತ್ತಲಾಗುತ್ತಿದಂತೆ ಬಾನಂಗಳದಲ್ಲಿ ಸುರಬಾಣಗಳು ಆಕಾಶದೆತ್ತರದಲ್ಲಿ ಬಣ್ಣ ಬಣ್ಣದ ನಕ್ಷತ್ರಗಳಂತೆ ಮಿನುಗುತ್ತಾ ಚಿತ್ತಾರ್ಷಕ ಮೂಡಿಸಿದವು ಮತ್ತು ಗ್ರಾಮದ ಉದ್ದಕ್ಕೂ ಪಟಾಕಿಗಳು ಭಕ್ತರು ಹಾರಿಸಿ ತಮ್ಮ ಭಕ್ತಿಯನ್ನು ತೊರಿಸಿದರು. ಗ್ರಾಮದಲ್ಲಿ ವಿದ್ಯುತ್ ಅಲಂಕಾರ, ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಮೆರವಣಿಗೆಗೆ ಸ್ವಾಗತಿಸುವುದು ಸಾಮಾನ್ಯವಾಗಿತ್ತು. ದೇವಸ್ಥಾನದ ಆವರಣದ ತುಂಬೆಲ್ಲ ಮೈಸೂರು ಅರಮನೆಯ ಛಾಯದಂತೆ ಕಾಣುತ್ತಿತ್ತು. ಈ ಉತ್ಸವವು ಬಣ್ಣ ಬಣ್ಣದ ವಿದ್ಯುತ್ ದೀಪದಿಂದ ಝಗಮಗಿಸುತ್ತಿತ್ತು. ಈ ವಿಶ್ವದಲ್ಲಿಯೇ ದೈತ್ಯೆರ ಮದುವೆ ಉತ್ಸವ ನಾವುಗಳು ನಮ್ಮ ಜೀವನದಲ್ಲಿ ನೋಡಬೇಕಾದರೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಕ್ಷೇತ್ರ ಚಿಂಚಲಿ ಪಟ್ಟಣದ ಕಿಲ ಮತು ಕಟ್ಟ ದೈತ್ಯೆರ ಉತ್ಸವವನ್ನು ನೋಡಲೆಬೇಕು. ಈ ಲೇಖನವನ್ನು ಓದಿದರೆ ಸಾಕಾಗುವುದಿಲ್ಲಾ ಪ್ರತ್ಯಕ್ಷವಾಗಿ ಮೂರುದಿನಗಳ ವರೆಗೆ ನಡೆಯುತ್ತದೆ ಉತ್ಸವ ನೋಡಲು ಇಂದೇ ಚಿಂಚಲಿಗಿ ಬನ್ನಿರಿ...!