ಮಹಲಿಂಗಪುರ

ಚಿಮ್ಮಡಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ ಪರೀಶೀಲನೆ

ಚಿಮ್ಮಡಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ ಪರೀಶೀಲನೆ

ಚಿಮ್ಮಡಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ ಪರೀಶೀಲನೆ 

ಮಹಾಲಿಂಗಪುರ 18: ಚಿಮ್ಮಡ ಗ್ರಾಮದ ಹಲವೆಡೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ ಹಲವು ಆಧಿಕಾರಿಗಳ ತಂಡದೊಂದಿಗೆ ಚಿಮ್ಮಡ ಗ್ರಾಮಕ್ಕೆ ಭೇಟಿ ನೀಡಿ ಹಲವು ಕಾಮಗಾರಿಗಳ ಪರೀಶೀಲನೆ ನಡೆಸಿದರು. 

 ಚಿಮ್ಮಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದರೂ ಸ್ಟಾಪ್ ನರ್ಸ (ಶುಸ್ರುಕಿ) ಸಿಬ್ಬಂದಿ ಕೊರತೆಯಿಂದ ಇಲ್ಲಿನ ಬಡ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗುತಿದ್ದು ಕೂಡಲೆ ಆಸ್ಪತ್ರೆಗೆ ನರ್ಸ ನೇಮಕಗೊಳಿಸುವಂತೆ ಗ್ರಾಮಸ್ಥರು ಆಧಿಕಾರಿಗಳಲ್ಲಿ ಮನವಿ ಮಾಡಿದರು.  

 ಈ ಕುರಿತು ಸಂಭದಿಸಿದ ಆಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೇ ಅನುದಾನ ಬಿಡುಗಡೆಯಾಗದೆ ಸ್ಥಗಿತಗೊಂಡಿರುವ ಸಂಜೀವಿನಿ ಸೆಡ್ ಕಾಮಗಾರಿಗೆ ಅವಶ್ಯವಿರುವ ಅನುದಾನ ಬಿಡುಗಡೆಗೊಳಿಸುವುದಾಗಿ ತಿಳಿಸಿದರು. ಗ್ರಾಮದಲ್ಲಿ ಕುಂಟಿತ್ತಾ ಸಾಗಿರುವ ಜಲ್ ಜೀವನ್ ಮಿಷನ್ (ಜೆ.ಜೆ.ಎಂ) ಕಾಮಗಾರಿಯ ಟ್ಯಾಂಕ್ ಹಾಗೂ ಸಂಪು ಇರುವ ಸ್ಥಳಕ್ಕೆ ಭೇಟೀನೀಡಿ ಜೆ.ಜೆ.ಎಂ ಕಾಮಗಾರಿ ಈಗಾಗಲೇ ತುಂಬಾ ತಡವಾಗಿದ್ದು ಕೂಡಲೆ ಮುಕ್ತಾಯಗೊಳಿಸಬೇಕೆಂದು ಗುತ್ತಿಗೆದಾರರಿಗೆ ಹಾಗೂ ಸಂಬದಿಸಿದ ಅಧಿಕಾರಿಗಳಿಗೆ ಆದೇಶ ನೀಡಿದರು.  

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರರೊಂದಿಗೆ ರಬಕವಿ-ಬನಹಟ್ಟಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪಾ ಪಟ್ಟಿಹಾಳ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜೆ.ಪಿ. ಶೆಟ್ಟಿ ವಿಭಾಗಾಧಿಕಾರಿ ಸುರೇಶ ಪಂಚಾಳ, ಆಗಮಿಸಿದ್ದರು, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಅಶೋಕ ಮೋಟಗಿ, ಗ್ರಾ.ಪಂ. ಸದಸ್ಯರಾದ ನಾಗಪ್ಪಾ ಆಲಕನೂರ ಅರುಣ ಗಾಣಿಗೇರ, ಹಣಮಂತ ಬಜಂತ್ರಿ, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ ವೈದ್ಯಾಧಿಕಾರಿ ಡಾ. ಕೆ,ಎಸ್‌. ತಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 





ಸುದ್ದಿ ಓದಿ