ಬಳ್ಳಾರಿ

ಮಕ್ಕಳು ವಿದ್ಯಾಭ್ಯಾಸದೊಂದಿಗೆ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿ

ಮಕ್ಕಳು ವಿದ್ಯಾಭ್ಯಾಸದೊಂದಿಗೆ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿ

ಬಳ್ಳಾರಿ 15:  ನಗರದ ತಾಳೂರು ರಸ್ತೆಯಲ್ಲಿರುವ ಶ್ರೀನಗರ ಹಯಗ್ರೀವ ಮನೆಪಾಠಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು  ಆಚರಿಸಲಾಯಿತು. ಹಾಗೂ ಶಿಕ್ಷಕಿ  ಭಾರತಿ ಇವರು ಪಾಠಶಾಲೆ ಮಕ್ಕಳಿಂದ ಸಸಿಗೆ ನೀರುವ ಹಾಕಿಸುವುದರ ಮೂಲಕ ಮಕ್ಕಳ ದಿನಾಚರಣೆ ಆಚರಿಸಿದರು.ಅನಂತರ ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಅವರಿಗೆ ಮಕ್ಕಳ ಮೇಲಿನ ಪ್ರೀತಿಯ ಪ್ರತೀಕವಾಗಿದೆ. ಮಕ್ಕಳು ವಿದ್ಯಾಭ್ಯಾಸ ದೊಂದಿಗೆ ಪರಿಸರ ವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂಬ ಉದ್ದೇಶದಿಂದ ನಿಮ್ಮಲ್ಲರಿಮದ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟನೆ ಮಾಡುವ ಉದ್ದೇಶವಾಗಿದೆ.ಎಂದು ಶಿಕ್ಷಕಿ ಭಾರತಿ ಅವರು ಮಕ್ಕಳಿಗೆ ಕಿವಿ ಮಾರು ಮಾತು ಹೇಳಿದರು.ಹಾಗೂ ಮಕ್ಕಳಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಗೀತ ಶಿಕ್ಷಕಿಯಾದ ಕುಮಾರಿ ಸಾಯಿ ಶೃತಿ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳಾದ ರಷ್ಮಿ, ಸಾನ್ವಿ,ರಿಷಿ,ಸಂಜಿತಾ,ನಿಕಿತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು 

ಸುದ್ದಿ ಓದಿ