ಶಿಗ್ಗಾವ್

ಬಾಲ್ಯದಲ್ಲಿಯೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಶಿಕ್ಷಣ ನೀಡಬೇಕು : ವರುಣಗೌಡ್ರ ಪಾಟೀಲ

ಬಾಲ್ಯದಲ್ಲಿಯೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಶಿಕ್ಷಣ ನೀಡಬೇಕು : ವರುಣಗೌಡ್ರ ಪಾಟೀಲ

ಶಿಗ್ಗಾವಿ,26 :  ಮಕ್ಕಳ ಮನಸ್ಸು ಹಸಿ ಗೋಡೆಯತರಹ ಮೃದುವಾಗಿರುತ್ತದೆ ಈ ವಯಸ್ಸಿನಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕುಎಂದು ಲ್ಯಾಂಡ್ ಲಾರ್ಡ್‌ ವರುಣಗೌಡ್ರ ಪಾಟೀಲ ಹೇಳಿದರು. 

ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಗ್ಲೋಬಲ್ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಮಕ್ಕಳ ಆಟಕ್ಕಾಗಿ ಜಾರು ಬಂಡಿ ಕುಳಿತುಕೊಳ್ಳಲು ಕಾಂಕ್ರೀಟ್ ಬೆಂಚಗಳನ್ನು ಕೊಡುಗೆ ನೀಡಿ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳು ಸಹ ನಗರ ಪ್ರದೇಶದ ಮಕ್ಕಳ ಜೊತೆ ಸ್ಪರ್ಧೆ ಮಾಡಲು ಈಗೀನಿಂದಲೆ ಅವರಿಗೆ ತಯಾರಿ ಮಾಡುವ ಜವಾಬ್ದಾರಿ ಶಿಕ್ಷಕರಿಗೆ ಇದೆ ಹಾಗಾಗಿ ಈ ಕಾನ್ವೆಂಟ್ ಶಾಲೆಗೆ ಮಕ್ಕಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಪಾಠದ ಜೊತೆಗೆ ಆಟಗಳಿಗೂ ಸಹ ಅಷ್ಟೆ ಪ್ರಾಮುಖ್ಯತೆ ನೀಡಿದರೆ ಕಲಿಕೆಯಕಡೆಗೆ ಮಕ್ಕಳ ಆಸಕ್ತಿ ಹೆಚ್ಚುವುದು ಎನ್ನುವ ದಿಸೆಯಿಂದ ಆಟದ ಮೈಧಾನದಲ್ಲಿ ಬೇಕಾಗುವ ಜಾರು ಬಂಡೆ ಹಾಗೂ ಇನ್ನಿತರೆ ವಸ್ತುಗಳನ್ನು ನೀಡಿರುವುದು ಸಂತೋಷವೆನಿಸುತ್ತದೆ ಹಾಗಾಗಿ ಶಾಲಾ ಮಂಡಳಿಯ ಮನವಿ ಮೇರೆಗೆ ಈ ಕಾರ್ಯ ಮಾಡಿದ್ದೆನೆ ಎಂದರು. 

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ನಾಗರಾಜ ಕ್ಯಾಬಳ್ಳಿ, ವಿನಯ ಹೊನ್ನಣ್ಣವರ ಗ್ರಾಮದ ವೇ ಮೂ ರೇವಣಸಿದ್ದಯ್ಯ ಹಿರೇಮಠ, ನಾಗರಾಜ ಪಟ್ಟಣಶೆಟ್ಟಿ, ರಮೇಶ ಸಾತಣ್ಣವರ, ಇರ್ಷಾದ ಅಹ್ಮದಖಾನ್ ಭಾವಾಖಾನವರ, ಬಾಬುಸಾಬ ದಿವಾನವರ, ವೀರಭದ್ರಗೌಡ ಪಾಟೀಲ, ಇಂತಿಯಾ ದಿವಾನವರ, ಮಹ್ಮದ ಬಾವಾಖಾನವರ, ರೂಪಾದೊಡ್ಡಮನಿ, ನಿರ್ಮಲಾ ಪೂಜಾರ ಹಾಗೂ ಇತರರು ಇದ್ದರು. 


ಸುದ್ದಿ ಓದಿ