ಮಹಲಿಂಗಪುರ

ಮಕ್ಕಳ ದಿನ ಆಚರಣೆ ,...

ಮಕ್ಕಳ ದಿನ ಆಚರಣೆ ,...


ಮಹಾಲಿಂಗಪುರ14 : ದೇಶದ ಪ್ರಥಮ ಪ್ರಧಾನಿ ಚಾಚಾ ನೆಹರು ಅವರ 132 ನೇ ಜಯಂತಿಯನ್ನು ಪಟ್ಟಣದ ಬನಶಂಕರಿ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. 

ಚಾಚಾ ನೆಹರು ಅವರಿಗೆ ಚಿಕ್ಕ ಮಕ್ಕಳೆಂದರೆ ಪಂಚಪ್ರಾಣ. ನವಂಬರ್ 14 ಅವರ ಜಯಂತಿಯನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ.  

ಈ ಕಾರಣ ಶಾಲಾ ಸಿಬ್ಬಂದಿ ಶಾಲೆಯ ಮಕ್ಕಳನ್ನು ಶ್ರೀಕೃಷ್ಣ, ಜವಾಹರಲಾಲ್ ನೆಹರೂ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ ರೂಪದ ಚದ್ಮವೇಷಧಾರಿಗಳನ್ನಾಗಿ ಮಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಇದೆ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆಯನ್ನು ಏರಿ​‍್ಡಸಲಾಗಿತ್ತು. 

ಶಾಲೆಯ ಅಧ್ಯಕ್ಷ ಶೇಖರ ಅಂಗಡಿ, ಕಾರ್ಯದರ್ಶಿ ಶ್ರೀಶೈಲ ಹಳ್ಳಿ, ಮುಖ್ಯ ಗುರುಮಾತೆಯರಾದ ಜಿ.ಬಿ.ಪಾಟೀಲ್, ಜೆ.ಜಿ.ಸೋನೂನಿ, ಎ.ಜಿ. ಚಿಚಖಂಡಿ, ಎಸ್‌.ಬಿ. ಹಿರೇಮಠ, ಎಸ್‌. ಸಿ. ಗಂಜಾಳಿ, ಮಂಜುಳ ನಾಶಿ, ಜಯಶ್ರೀ ಹುಬ್ಬಳ್ಳಿ, ರೇಷ್ಮಾ ಜಮಖಂಡಿ ಮತ್ತು ಪಾಲಕರು ಮಕ್ಕಳು ಭಾಗವಹಿಸಿದ್ದರು. 


ಸುದ್ದಿ ಓದಿ