ಹೆತ್ತ ಅಪ್ಪನನ್ನೆ ಅನಾಥ ಮಾಡಿದ ಮಕ್ಕಳು : ಬಾರದ ಮಕ್ಕಳು, ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಎತ್ತಿ ಹಿಡಿದ ಚಿಕ್ಕೋಡಿ ಪೊಲೀಸರು

ಹೆತ್ತ ಅಪ್ಪನನ್ನೆ ಅನಾಥ ಮಾಡಿದ ಮಕ್ಕಳು : ಬಾರದ ಮಕ್ಕಳು, ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಎತ್ತಿ ಹಿಡಿದ ಚಿಕ್ಕೋಡಿ ಪೊಲೀಸರು

ಬೆಳಗಾವಿ : ಹಿಂದೆ ಒಂದು ಕಾಲ ಇತ್ತು ಶ್ರವಣಕುಮಾರ ತನ್ನ ತಂದೆ ತಾಯಿಯರನ್ನು ತೊಟ್ಟಿಲಲ್ಲಿ ಹಾಕಿ ಹೆಗಲ ಮೇಲೆ ಹೊತ್ತು ಪುಣ್ಯಕ್ಷೇತ್ರಗಳಿಗೆ ಹೋಗಿದ್ದರು ಎನ್ನುವದನ್ನು ನಾವು ಬಲ್ಲಿದ್ದೇವೆ. ಆದರೆ ಇಲ್ಲಿ ಜನ್ಮ ನೀಡಿದ್ದ ತಂದೆ ಆಸ್ಪತ್ರೆ ಒಂದರಲ್ಲಿ ಅನಾಥ ಶವವಾಗಿ ಬಿದ್ದರು ಪಾಪಿ ಮಕ್ಕಳು ತಿರುಗಿ ನೋಡಲಿಲ್ಲ ಎನ್ನು ಕಲೆಗಾಲ ನಾವು ನೋಡುವ ಪರಿಸ್ಥಿತಿ ಬಂದಿದೆ. ಆದರೆ ಇಲ್ಲಿ ಮಕ್ಕಳು ಇದ್ದರೂ ಹೆತ್ತ ತಂದೆಯ ಅಂತ್ಯಕ್ರಿಯೆಗೆ ಬಾರದ ಅಮಾನವೀಯ ದುರ್ಧೈವ ಸಂಗತಿಯೊಂದು ಬೆಳಗಾವಿ ಜಿಲ್ಲೆಯಲ್ಲಿ ವರದಿಯಾಗಿದೆ. 


    ಹೌದು ಓದುಗರೇ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಅಮಾನವೀಯ ಇಂತಹ ಘಟನೆ ನಡೆದಿರುವದು ನೋವಿನ ಸಂಗತಿಯಾಗಿದೆ. ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳ್ಳಿ ಗ್ರಾಮದಲ್ಲಿ ಈ  ಘಟನೆ ನಡೆದಿದ್ದು, ಮಹಾರಾಷ್ಟ್ರದ ಪುಣೆ ಮೂಲಕ ಮೂಲಚಂದ ಶರ್ಮಾ ( 72 ) ಮೃತ ತಂದೆಯಾಗಿದ್ದಾನೆ. 

    ಜನ್ಮ ನೀಡಿ ಸಾಕಿ ಸಲುಹಿದ ಅಪ್ಪನನ್ನೇ ಅನಾಥನನ್ನಾಗಿ ಮಾಡಿದ‌ ಪಾಪಿ ಮಕ್ಕಳು ಅಪ್ಪನ ಅಂತ್ಯ ಸಂಸ್ಕಾರಕ್ಕೂ ಬರಲಿಲ್ಲ. ಮಕ್ಕಳ ಬಗ್ಗೆ ಏನೇನೂ ಕನಸುಗಳನ್ನು ಕಂಡಿದ್ದ ಆ ಹಿರಿಯ ಜೀವ ಅನಾಥ ಶವವಾಗಿದ್ದ ತಂದೆಯ ಶವಕ್ಕೆ ಚಿಕ್ಕೋಡಿ ಪೋಲಿಸರೇ ಬಂಧುಗಳಾಗಿ ಪರಿಣಮಿಸಿದ್ದಾರೆ.

    ಈ ತಂದೆ ಸಾವಿನ ಸುದ್ದಿ ತಿಳಿದಿದ್ದರು ವಿದೇಶದಲ್ಲಿರುವ ಮಕ್ಕಳಿಗೆ ಅಪ್ಪನ ಸಾವಿನ‌ ಸುದ್ದಿ ಬಗ್ಗೆ ಕರಗಿಲ್ಲ ಮನಸ್ಸು ಎನ್ನುವದು ವಿಪರ್ಯಾಸ ಸಂಗತಿಯಾಗಿದೆ.  ಪುಣೆ ಮೂಲದ ಮೂಲಚಂದ ಶರ್ಮಾಗೆ ಪಾರ್ಶ್ವ ವಾಯಿ ಕಾಯಿಲೆಯಿಂದ ಬಳಲುತ್ತಿದ್ದಾಗ 1.5 ತಿಂಗಳ ಹಿಂದೆ ಚಿಕಿತ್ಸೆ ಗಾಗಿ ಯಾರೊ ಅಪರಿಚಿತರು ವಸತಿಗೃಹದಲ್ಲಿ ನಾಗರಮುನ್ನೊಳ್ಳಿಯಲ್ಲಿ ಬಿಟ್ಟು ಹೋಗಿದ್ದರು.


    ಆಗ ವಿಚಾರಣೆ ನಡೆಸಿದ ಚಿಕ್ಕೋಡಿ ಪೋಲಿಸರು, ಮೂಲಚಂದ ಪಾರ್ಶ್ವವಾಯು ರೋಗದ ಮಾಹಿತಿ ದೊರಕಿದೆ. ಆಗ ನಾನು ಬಡವ ಅಲ್ಲ,‌ ನನ್ನ ಮಕ್ಕಳು ವಿದೇಶದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾರೆ ಎಂದು‌‌ ಮೂಲಚಂದ ಪೋಲಿಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. 

    ಮಗಳು ಕೆನಡಾ, ಮಗ ಆಫ್ರಿಕಾದಲ್ಲಿ ಅಂತ ಹೇಳಿ ಚಿಕ್ಕೋಡಿ ಸಾರ್ವಜನಿಕ‌ ಆಸ್ಪತ್ರೆಗೆ ಬರಲ್ಲ ಎಂದ ಮೂಲಚಂದ ಅವರು ನಿನ್ನೆ ಮೂಲಚಂದ ಶರ್ಮಾ ಅದೇ ಲಾಡ್ಜನಲ್ಲಿ ಮೃತರಾಗಿದ್ದರು. ತಂದೆ ಮೂಲಚಂದ ಸಾವಿನ ಬಳಿಕ ಮಕ್ಕಳಿಗೆ ಕರೆ ಮಾಡಲು‌ ಪೋಲಿಸ್ ಪ್ರಯತ್ನ ಮಾಡಿದ್ದರು. ಕೊನೆಯಲ್ಲಿ ಮಗಳನ್ನು ಸಂಪರ್ಕ ಮಾಡಿದಾಗ ಪೋಲೀಸರಿಗೂ ಆಘಾತವಾಗಿದ್ದು, "ಅವರು ನಮ್ಮ ತಂದೆ ಅವಾಗ ಇದ್ದರು ಈಗ ಇಲ್ಲ" " ನಿಮಗೆ ನಾವು ಚಿಕಿತ್ಸೆ ಕೊಡಿಸಿ ಎಂದು ಹೇಳಿಲ್ಲ"

" ಅಂತ್ಯಕ್ರಿಯೆ ಮಾಡೋಕೆ ಆದರೆ ಮಾಡಿ‌ ಇಲ್ಲ ಹೆಣ ಬಿಸಾಕಿ " ಎಂದು ಪೋಲಿಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಬೇರೆ ದಾರಿ ಇಲ್ಲದೆ ಮೃತ‌ ಮೂಲಚಂದರ‌ ಶವವನ್ನು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಸಾರ್ವಜನಿಕ  ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಚಿಕ್ಕೊಡಿ ಪೋಲಿಸರು ನಂತರ‌ ನಾಗರಮುನ್ನೊಳ್ಳಿ ಗ್ರಾಮದಲ್ಲಿ ಮೃತ ವೃದ್ಧ ಮೂಲಚಂದ ಅಂತ್ಯಕ್ರಿಯೆ ನೆರವರಿಸುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ.

   ಚಿಕ್ಕೋಡಿ ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡ ಮೆಚ್ವುಗೆ ವ್ಯಕ್ತವಾಗತೋಡಗಿದೆ.

ಸುದ್ದಿ ಓದಿ