ಮಹಲಿಂಗಪುರ

ಮಕ್ಕಳು ಪ್ರತಿಭೆಯ ಖಣಿ : ಸಂಜು ಸಾವಳಿಗೆ

ಮಕ್ಕಳು ಪ್ರತಿಭೆಯ ಖಣಿ : ಸಂಜು ಸಾವಳಿಗೆ

ಮಹಾಲಿಂಗಪುರ 31: ಮಕ್ಕಳು ಪ್ರತಿಭೆಯ ಖಣಿ, ಅವರಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಹೊರಹಾಕುವ ವೇದಿಕೆಯೇ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಎಂದು ಶಿಕ್ಷಣ ಸಂಯೋಜಕ ಸಂಜು ಸಾವಳಿಗೆ ಹೇಳಿದರು.  

ಸ್ಥಳೀಯ ಸಿ. ಕೆ. ಚಿಂಚಲಿ ಶಾಲಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾಲಿಂಗಪುರ ಕೆಜಿಎಸ್ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವ ಈ ವೇದಿಕೆಯನ್ನು ಬಳಸಿಕೊಂಡು ಪ್ರತಿಭೆ ಮೆರೆದು ಮಕ್ಕಳು ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದವರೆಗೆ ಬೆಳೆಯಬೇಕು ಎಂದರು.  

ಬಿ ಆರ್ ಪಿ ಎಸ್‌.ಎನ್‌.ಗಣಿ ಮಾತನಾಡಿ, ಶಿಕ್ಷಣವೆಂದರೆ ಮಗುವಿನ ಸವಾಂರ್ಗೀಣ ಅಭಿವೃದ್ಧಿ, ಅದನ್ನು ಸಾಕಾರಗೊಳಿಸಲು ಈ ಕಾರ್ಯಕ್ರಮ ಪೂರಕ ಎಂದರು.  

ಸಿ ಆರ್ ಪಿ ಎಸ್‌.ಎನ್‌.ಬ್ಯಾಳಿ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹಮ್ಮಿಸುವ ಹಾಗೂ ವೈವಿಧ್ಯ ಕಲೆಗಳ ಹಬ್ಬವಾದ ಈ ಕಾರ್ಯಕ್ರಮ ನಿಜವಾದ ಪ್ರತಿಭೆಗೆ ನ್ಯಾಯ ಒದಗಿಸುವ ವೇದಿಕೆಯಾಗಬೇಕು ಎಂದರು.  

ಕ್ಲಸ್ಟರ್ ನ 50 ಕ್ಕೂ ಹೆಚ್ಚು ಶಾಲೆಯ ಮಕ್ಕಳು ಭಾಗವಹಿಸಿದ್ದರು.  

ಚಿಂಚಲಿ ಶಾಲೆಯ ಉಪಾಧ್ಯಕ್ಷ ಸಿದ್ದಪ್ಪ ಚಿಂಚಲಿ ಅಧ್ಯಕ್ಷತೆ ವಹಿಸಿದ್ದರು, ಪುರಸಭಾ ಸದಸ್ಯರಾದ ಯಲ್ಲನಗೌಡ ಪಾಟೀಲ, ಚಾಂದನಿ ನಾಯಕ, ಪಿಕೆಪಿಎಸ್ ಸದಸ್ಯ ಅಶೋಕಗೌಡ ಪಾಟೀಲ, ಸಿ ಆರ್ ಪಿ ಗಳಾದ ವೈ. ಎಸ್‌. ಲಮಾಣಿ, ಟಿ.ಎಂ.ನಾಯಿಕವಾಡಿ, ರಮೇಶ ಜಿಗಜಿನ್ನಿ, ಐ.ಎ.ನದಾಫ್ ಇದ್ದರು. ಮುಖ್ಯೋಪಾಧ್ಯಾಯ ಸರೇಶರೆಡ್ಡಿ ಗೊರಬಾಳ ಸ್ವಾಗತಿಸಿ, ನಿರೂಪಿಸಿದರು. 


ಸುದ್ದಿ ಓದಿ