ಶಿಗ್ಗಾವ್

ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಶಿಗ್ಗಾವಿ : ಮಕ್ಕಳಲ್ಲಿ ವಿಭಿನ್ನ ಮತ್ತು ವಿಶೇಷ ಆಶಕ್ತಿಗಳು ಹುಟ್ಟಿನೊಂದಿಗೆ ಬಂದಿದ್ದು, ಅವುಗಳನ್ನು ಶಿಕ್ಷಕರು ಗುರುತಿಸಿ ಸೂಕ್ತ ಮಾರ್ಗದರ್ಶನ ಮತ್ತು ವಿಶೇಷ ತರಬೇತಿ ನೀಡಿದರೆ ಪ್ರತಿ ಶಾಲೆಯ ಮಕ್ಕಳು ಜಗತ್ತಿನ ಯಾವುದೇ ರಂಗದಲ್ಲಿ ಮಿಂಚಲು ಸಿದ್ದರಾಗುತ್ತಾರೆ ಎಂದು ಸಿ ಬಿ ಯಲಿಗಾರ ಸೇವಾ ಸಂಸ್ಥೆ  ಅದ್ಯಕ್ಷ ಶಶಿಧರ ಯಲಿಗಾರ ಹೇಳಿದರು.

ಪಟ್ಟಣದ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ, ತಮ್ಮ ಸಂಸ್ಥೆಯ ವತಿಯಿಂದ ಉಚಿತ ಪುಸ್ತಕಗಳನ್ನು ವಿದ್ಯಾಥರ್ಿಗಳಿಗೆ ಹಂಚಿ ಮಾತನಾಡಿದ ಅವರು ಮಕ್ಕಳನ್ನು ವಿಮಷರ್ಾ ಪ್ರವೃತ್ತಿಯುಳ್ಳವರನ್ನಾಗಿ ಬೆಳೆಸಬೇಕು, ಮಕ್ಕಳಿಗೆ ಹಳೆಯ ಕಥೆಗಳನ್ನು ವಿಮಷರ್ೆ ಮಾಡುವಂತೆ, ಮತ್ತು ಅವುಗಳನ್ನು ಹೊಸರೂಪದಲ್ಲಿ ಭದಲಾಯಿಸಿ ಹೇಳುವಂತೆ ಮಾಡಬೇಕು ಇದರಿಂದ ಮಕ್ಕಳ ಕಲ್ಪನಾ ಶಕ್ತಿ ಹೆಚ್ಚುತ್ತದೆ. ಮಕ್ಕಳು ಪ್ರಶ್ನಿಸುವ ಗುಣವನ್ನು ಬೆಳಿಸಿಕೊಳ್ಳಬೇಕು ಎಂದು ವಿವಿಧ ಮಕ್ಕಳ ಕಥೆಗಳನ್ನು ಹೇಳಿ ಕೆಲ ಹೊತ್ತು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮಕ್ಕಳ ದಿನಾಚರಣೆಯನ್ನು ಆಚರಿಸಿದರು. 

ಈ ಸಂದರ್ಭದಲ್ಲಿ ಸಂಸ್ಥೆ ಅದ್ಯಕ್ಷ ಮಂಜುನಾಥ ಮೊರಬದ, ಕಾರ್ಯದಶರ್ಿ ದೇವರಾಜ ಸುಣಗಾರ, ಕಣರ್ಾಜರ್ುನ ಚಲನ ಚಿತ್ರದ ನಿದರ್ೇಶಕ ಬಸವರಾಜ ಕುರಗೋಡಿ, ಶಾಲಾ ಮುಖ್ಯೋಪಾಧ್ಯಾಯಿನಿ ಅನಿತಾ ಹಿರೇಮಠ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾಥರ್ಿಗಳು, ಪಾಲಕರು ಉಪಸ್ಥಿತರಿದ್ದರು.

 

ಸುದ್ದಿ ಓದಿ