ಚಿಕ್ಕೋಡಿ

ಬೈಕ್ ಸಮೇತ ನದಿ ನೀರಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯ ರಕ್ಷಿಸಿದ ಯುವಕರು

ಬೈಕ್ ಸಮೇತ ನದಿ ನೀರಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯ ರಕ್ಷಿಸಿದ ಯುವಕರು

ಚಿಕ್ಕೋಡಿ, ಆಗಷ್ಟ್, 6: ಮಹಾರಾಷ್ಟ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ಅರ್ಭಟಕ್ಕೆ ಜಿಲ್ಲೆಯಲ್ಲಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಬುಧವಾರ ಸಂಜೆ ಸದಲಗಾ ಬೋರಗಾಂವ ರಸ್ತೆಯ ಮೇಲೆ ಹೆಚ್ಚಾದ ನೀರಿನಲ್ಲಿ ಬೈಕ್ ಸಮೇತವಾಗಿ ಕೊಚ್ಚಿಕೋಂಡು ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ನೀರಿನಿಂದ ಹೊರತೆಗೆದಿರುವ ಘಟನೆ ವರದಿಯಾಗಿದೆ.

    ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಈ ಘಟನೆ ನಟೆದಿದೆ. ರಸ್ತೆಯ ಮೇಲೆ ನೀರು ಹರಿಯುತ್ತಿದ್ದರು ಅದನ್ನು ಲೆಕ್ಕಿಸದೆ ತನ್ನ ದ್ವಿಚಕ್ರ ವಾಹನವನ್ನು ಹತ್ತಿ ಸಾಗುತ್ತಿದ್ದ ವ್ಯಕ್ತಿಯು ನೀರಿನ ಸೆಳೆತಕ್ಕೆ ಸಿಲುಕಿಹಾಕಿ ಕೊಚ್ವಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ಸ್ಥಳೀಯ ಯುವಕರು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ನೀರಿನಿಂದ ಹೊರತೆಗೆದು ಆತನ ಪ್ರಾಣವನ್ನು ರಕ್ಷಿಸಿದ್ದಾರೆ. ಇದರಿಂದ ನೀರಲ್ಲಿ ಎಳೆದುಕೊಂಡು ಹೋಗುತ್ತಿದ್ದ ಒಂದು ಜೀವ ಉಳಿದಂತಾಗಿದೆ.

   ಮಹಾರಾಷ್ಟ್ರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ನದಿಯ ಪಾತ್ರದ ಜನರು ಎಚ್ಚರಿಕೆ ವಹಿಸಬೇಕಾಗಿರುವದು ಅವಶ್ಯವಾಗಿದೆ.

ಸುದ್ದಿ ಓದಿ