ಬ್ಯಾಡ್ಗಿ

ವಿಶ್ವ ಶಾಂತಿಗಾಗಿ ಣಮೋಕಾರ ಮಂತ್ರ ಪಠಣೆ

ವಿಶ್ವ ಶಾಂತಿಗಾಗಿ ಣಮೋಕಾರ ಮಂತ್ರ ಪಠಣೆ

ಬ್ಯಾಡಗಿ 15: ವಿಶ್ವ ಣಮೋಕಾರ ಮಂತ್ರ ದಿವಸ ಆಚರಣೆ ಅಂಗವಾಗಿ ಬ್ಯಾಡಗಿಯ ವಿಮಲನಾಥ್ ಜೈನ ಸೇತಾಬಂರ ಸಂಘ ಬ್ಯಾಡಗಿ ಮಹಿಳಾ ಮತ್ತು ಪುರುಷ ಸಮಾಜ, ಭಾರತೀಯ ಜೈನ ಮೀಲನ್ ವಿಶ್ವಶಾಂತಿಗಾಗಿ ಬ್ಯಾಡಗಿ ನಗರದ ದಿಗಂಬರ ಜೈನ ಮಂದಿರದಲ್ಲಿ ಗುರುವಾರ ಬೆಳಿಗ್ಗೆ 8 ರಿಂದ 9:30 ಗಂಟೆವರೆಗೆ ಸತತ ಒಂದು ಗಂಟೆ ಕಾಲ ನಿರಂತರ ಣಮೋಕಾರ ಮಂತ್ರ ಪಠಣೆ ಮಾಡಲಾಯಿತು. 

ಈ ದಿನವು ಕೇವಲ ಒಂದು ಧಾರ್ಮಿಕ ಆಚರಣೆಯಾಗಿರದೆ. ವಿಶ್ವಕ್ಕೆ ಶಾಂತಿ, ಅಹಿಂಸೆ ಮತ್ತು ಭಾತೃತ್ವದ ಸಂದೇಶವನ್ನು ಸಾರುವ ಮಹೋನ್ನತ ದಿನವಾಗಿದೆ. ಣಮೋಕಾರ ಮಹಾಮಂತ್ರವು ಜೈನ ಧರ್ಮದ ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರವಾದ ಮಂತ್ರ. ಇದು ಯಾವುದೇ ಒಬ್ಬ ವ್ಯಕ್ತಿಗಾಗಲಿ ಅಥವಾ ದೇವರ ನಾಮಸ್ಮರಣೆಗೆ ಸೀಮಿತವಾಗಿಲ್ಲ. ಇದು ಪಂಚ ಪರಮೇಷ್ಠಿಳಾದ ಅಂರಿಹಂತ, ಸಿದ್ದ, ಆಚಾರ್ಯ, ಉಪಾಧಯ್ಯ ಮತ್ತು ಸಾಧುಗಳ ಗುಣಗಳಿಗೆ ಸಲ್ಲಿಸುವ ಗೌರವಾಗಿದೆ.  

ಣಮೋಕಾರ ಮಂತ್ರ ಪಠಣೆಯಲ್ಲಿ ಸಮಸ್ತ ಶ್ರಾವಕ ಮತ್ತು ಶ್ರಾವಕಿಯರ, ಮಕ್ಕಳು ಭಾಗವಹಿಸಿದ್ದರು 


ಸುದ್ದಿ ಓದಿ