ಬ್ರಿಟಿಷ್ರ್ ರನ್ನು ಬೆಂಡೆತ್ತಿದ್ದ ಚನ್ನಮ್ಮಾಜಿಯ ಕಾಕತಿ ಕೋಟೆ ಈಗ ಅನೈತಿಕ ಅಡ್ಡೆ : ಮದ್ಯ ಸೇವನೆ ತಾಣವಾಯಿತು ತವರೂರಿನ ಕೋಟೆ

ಬ್ರಿಟಿಷ್ರ್ ರನ್ನು ಬೆಂಡೆತ್ತಿದ್ದ ಚನ್ನಮ್ಮಾಜಿಯ ಕಾಕತಿ ಕೋಟೆ ಈಗ ಅನೈತಿಕ ಅಡ್ಡೆ : ಮದ್ಯ ಸೇವನೆ ತಾಣವಾಯಿತು ತವರೂರಿನ  ಕೋಟೆ

ಪಾರೇಶ ಭೋಸಲೆ

ಬೆಳಗಾವಿ : ಈ ಹಿಂದೆ ಬ್ರಿಟಿಷ್ ರಿಗೆ ಸಿಂಹಸ್ವಪ್ನವಾಗಿ ಕಾಡಿ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿಯಾಗಿದ್ದ ಕಿತ್ತೂರು ಚನ್ನಮ್ಮಾಜಿಯ ತವರೂರಾದ ಕಾಕತಿಯ  ಕೋಟೆ ಈಗ ಪುಂಡ ಪೋಕರಿಗಳ ಮೋಜು ಮಾಡುವ ತಾಣವಾಗಿ ಮಾರ್ಪಟ್ಟಿದ್ದು, ಇಲ್ಲಿ ಮದ್ಯ ಸೇವನೆ ಸೇರಿದಂತೆ ಅನೇಕ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವದು ನೋವಿನ ಸಂಗತಿಯಾಗಿದೆ. 


     ಹೌದು ಓದುಗರೇ ಒಂದು ವೇಳೆಯಲ್ಲಿ ರಾಜಾಡಳಿತ ನಡೆದ ಕಿತ್ತೂರು ಚನ್ನಮ್ಮನ ತವರೂರಾದ ಕಾಕತಿಯ ಕೋಟೆ ಈಗ ಮದ್ಯ ಸೇವನೆ ಸ್ಥಳವಾಗಿ ಬದಲಾಗಿದ್ದು ಬೇಸರ ತರುವದ ಸಂಗತಿಯಾಗಿದೆ. 

      ಕಾಕತಿಯ ಕೋಟೆ ಆವರಣದಲ್ಲಿ ಸಂಜೆ ಆದರೆ ಸಾಕು ಮದ್ಯ ಸೇವನೆ ಮಾಡಿ, ಅದರ ಜೊತೆಗೆ ತಿನಿಸು ತಿಂದು ಎಸೆಯುವ ಮದ್ಯದ ಬಾಟಲು ಹಾಗೂ ಪ್ಲ್ಯಾಸ್ಟಿಕ್ ಗಳು ಎಲ್ಲಿ ನೋಡಿದರು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯವು ಗೋಚರಿಸತೋಡಗಿವೆ. 

    ಮದ್ಯ ಸೇವಿಸುವ ಪುಂಡ ಪೋಕರಿಗಳಿಗೆ ಕಾಕತಿಯ ಚನ್ನಮ್ಮಾಜಿಯ ಕೋಟೆಯು ಹೇಳಿ ಮಾಡಿಸಿದಂತಾ ಜಾಗವಾಗಿದ್ದು, ಇತ್ತ ಜಿಲ್ಲಾಡಳಿತ ಆಗಲಿ ಅಥವಾ ಸಂಬಂಧ ‌ಪಟ್ಟ ಅಧಿಕಾರಿಗಳಾಗಲಿ ಗಮನ ಹರಿಸದೆ ಇರುವದು ದುರಂತ ಎಂದು ಹೇಳಲಾಗಿದೆ. 


     ಒಂದು ಸಮಯದಲ್ಲಿ ರಾಜ ದರ್ಬಾರ್ ನಡೆಸಿ ಬ್ರಿಟಿಷ್ ರ ಪಾಲಿಗೆ ಯಮನಾಗಿ ಕಾಡಿ ಕೆಂಪು ಮುಖದ ಮಂಗಿಗಳಿಗನ್ನು ಪಾಠ ಕಲಿಸಿದ್ದ ತಾಯಿ ಚನ್ನಮ್ಮನ ತವರೂರಿನ ಕೋಟೆ ಈಗ ಈ ಸುಸ್ಥಿತಿಗೆ ಬಂದು ತಲುಪಿದ್ದು ಹಲವಾರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. 

    ಪ್ರತಿವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರಕಾರ ಮತ್ತು ಬೆಳಗಾವಿ ಜಿಲ್ಲಾಡಳಿತವು ಕಿತ್ತೂರು ಉತ್ಸವ ಮಾಡುವ ಮೂಲಕ ಚನ್ನಮ್ಮ ನೆನಪಿಸುವ ಕಾರ್ಯ ಮಾಡುತ್ತಿದೆ. ಅದರಂತೆ ಕಿತ್ತೂರಿನಲ್ಲಿ ಇರುವ ಚನ್ನಮ್ಮನ ಕೋಟೆಯನ್ನು ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. 

     ಆದರೆ ಚನ್ನಮ್ಮನ ತವರೂರಾದ ಕಾಕತಿಯಲ್ಲಿರುವ ಕೋಟೆಯನ್ನು ಯಾಕೆ ಕಡೆಗಣಿಸಲಾಗುತ್ತಿದೆ ಎನ್ನುವದು ಕೆಲವರ ಯಕ್ಷ ಪ್ರಶ್ನೆಯಾಗಿದೆ. ಕೆಲವರು ಹೇಳುವ ಪ್ರಕಾರ ಕಾಕತಿಯ ಕೋಟೆಯನ್ನು ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ನಮಗೆ ಬೇಸವಾಗಿದೆ ಎನ್ನುವ ಮಾತು ಕಾಕತಿ ಜನರಿಂದ ಕೇಳಿ ಬರುತ್ತಿವೆ. 

ಕಾಕತಿ ಕೋಟೆ ಕೂಡಾ ಅಭಿವೃದ್ಧಿ ಆಗಲಿ : 

    ಸರಕಾರ, ಜಿಲ್ಲಾಡಳಿತ ಕೋಟೆಯನ್ನು ತಮ್ಮ ಆಧಿನಕ್ಕೆ ತೆಗೆದುಕೊಳ್ಳಲಿ,  ಆ ಕೋಟೆಯನ್ನು ಕೂಡಾ ಕಿತ್ತೂರು ಕೋಟೆಯ ರೀತಿ ಅಭಿವೃದ್ಧಿ ಮಾಡಲಿ ಎಂದು ನಮ್ಮ ಒತ್ತಾಯವಾಗಿದೆ. ಈ ಕುರಿತು ಸರಕಾರಕ್ಕೆ ಹಲವು ಬಾರಿ ಪತ್ರಗಳನ್ನು ಕೂಡಾ ಬರೆದಿದ್ದೇವೆ, ಆದರೆ ಸರಕಾರ ಅಥವಾ ಜಿಲ್ಲಾಡಳಿತ ಇದರ ಬಗ್ಗೆ ಯಾವ ಕ್ರಮಕೈಗೊಳ್ಳದೆ ಇರುವದು ಬೇಸರದ ಸಂಗತಿ. 

ಅಶೋಕ ಚಂದರಗಿ (ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ) 


ಕಾಕತಿ ಕೋಟೆ ಅಸ್ವಚ್ಚತೆ ಬೇಸರ ತಂದಿದೆ, ಅಭಿವೃದ್ಧಿ, ಸ್ವಚ್ಚತೆಗೆ ಸಹಕಾರ ನೀಡುತ್ತೇವೆ : ದರೆಕರ್ : 

     ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಬೆಳ್ಳಿಚುಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮನ ಜನ್ಮ ಸ್ಥಳವಾದ ಕಾಕತಿಯ ಕೋಟೆ ಸುಸ್ಥಿತಿಗೆ ತಲುಪಿದ್ದು ನೋವಿನ ಸಂಗತಿ. ಆ ಕೋಟೆಯನ್ನು ಸ್ವಚ್ಚ ಹಾಗೂ ಅಭಿವೃದ್ಧಿ ಮಾಡಲು ನಮ್ಮ ಫೇಸ್ ಬುಕ್ ತಂಡದವರು ಕೂಡಾ ಶ್ರಮದಾನ ಮಾಡಲು ಸಿದ್ದರಿದ್ದೇವೆ. ಆದರೆ ಸರಕಾರ, ಜಿಲ್ಲಾಡಳಿತ ಮನಸು ಮಾಡಲಿ.

ಸಂತೋಷ ಧರೆಕರ್ (ಫೇಸ್ ಬುಕ್ ಪ್ರೆಂಡ್ಸ್ ಸರ್ಕಲ್ ಬೆಳಗಾವಿ )


ಸುದ್ದಿ ಓದಿ