ಚನ್ನಮ್ಮನ ಇತಿಹಾಸ ಬೆಂಗಳೂರು, ದೆಹಲಿ ವರೆಗೆ ಸಾರುವ ಕೆಲಸವಾಗಲಿ : ಸಚಿವ ಜಾರಕಿಹೊಳಿ
ಬೆಳಗಾವಿ : ಕಿತ್ತೂರು ಚೆನ್ನಮ್ಮ ಉತ್ಸವ ಬೆಳಗಾವಿ ಜಿಲ್ಲೆಗೆ ನಿಯಮಿತ ಆಗದೆ ಬೆಂಗಳೂರು, ದೆಹಲಿ ವರೆಗೆ ಚನ್ನಮ್ಮನ ಇತಿಹಾಸವು ಈ ವೇದಿಕೆ ಮೂಲಕ ಸಾರಬೇಕಾಗಿದೆ. ಹೊಸಪೀಳಿಗೆಗೆ ವೇದಿಕೆ ಮುಖಾಂತರ ಯುವ ಪೀಳಿಗೆ ತಿಳಿಸುವ ಕೆಲಸ ಸರಕಾರ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕಿತ್ತೂರನಲ್ಲಿ ನಡೆದ ಕಿತ್ತೂರು ಚೆನ್ನಮ್ಮ ಉತ್ಸವದ ಮೂರು ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಾರಿ 200 ವರ್ಷಗಳ ಸಂಭ್ರಮ ವಿಭಿನ್ನ ರೀತಿ ಆಚರಣೆಗೆ ಸಭೆಗಳ ಮೂಲಕ ಅಚ್ವುಕಟ್ಟಾಗಿ ಮಾಡಲು ಬೆಳಗಾವಿ ಜಿಲ್ಲಾಡಳಿತ ಶ್ರಮ ವಹಿಸಿದೆ. ಈ ಕಿತ್ತೂರು ಉತ್ಸವ ವು ಜಿಲ್ಲೆಗೆ ಸಿಮಿತವಾಗದೆ ರಾಜ್ಯ, ದೇಶಕ್ಕೆ ವಿಸ್ತೀರ್ಣ ಮಾಡಲು ನಮ್ನ ಸರಕಾರ ಕೆಲಸ ಮಾಡುತ್ತಿದೆ ಎಂದರು.
ಕಲಾವಿದರು ಬುದ್ಧಿಜೀವಿಗಳು, ಸಾಹಿತಿಗಳು ಈ ಇತಿಹಾಸ ಸಾರುವ ಕಾರ್ಯ ಈ ವೇದಿಕೆ ಯಿಂದ ಸಾರುವ ಕೆಲಸ ಮಾಡಬೇಕಿದೆ. ಚನ್ನಮ್ಮನ ಇತಿಹಾಸದ ಜೊತೆಗೆ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ನವರ ಇತಿಹಾಸ ಕೂಡಾ ಸಾರುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಕಳೆದ ಬಾರಿಯ ಹಾಗೆ ಕಿತ್ತೂರು ಅಭಿವೃದ್ಧಿಗೆ ನಮ್ಮ ಸರಕಾರದಿಂದ 5 ಕೋಟಿ ಹಣ ಈ ಬಾರಿ ಕೂಡಾ ಅನುದಾನ ನೀಡಲಾಗಿದೆ. ನಮ್ಮ ಇಲಾಖೆಯ ನೀಡಿರುವ ಈ ಹಣ ಸದುಪಯೋಗ ಆಗಬೇಕು ಎನ್ನುವ ಕಲ್ಪನೆ ನಮ್ಮದು ಆಗಿದೆ.
ವಿಜಯಪೂರ ದಲ್ಲಿರುವ ರಾಣಿ ಚೆನ್ನಮ್ಮ ಇತಿಹಾಸ ಅಧ್ಯಯನ ಕೇಂದ್ತ ಬೆಳಗಾವಿಗೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಸದಸ್ಯ ರಾಗಿ ಅಧಿಕಾರ ವಹಿಸಿರುವ ಸದಸ್ಯರು ಎರಡನೇ ತಿಂಗಳಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದರು.
ಸ್ಮರಣ ಸಂಚಿಕೆ ಬಿಡುಗಡೆ ಸಚಿವೆ ಹೆಬ್ಬಾಳಕರ್ ಅವರು ಮಾಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಸ್ವಾಭಿಮಾನಕ್ಕೆ ಇನ್ನೊಂದು ಹೆಸರು ಕಿತ್ತೂರು ಚೆನ್ನಮ್ಮ. ಬ್ರಿಟಿಷ್ ರ ಸಾಮ್ರಾಜ್ಯವನ್ನು ಮುರಿದು ಬ್ರಿಟಿಷ್ ಅಧಿಕಾರಿಗಳನ್ನು ಚೆಂಡಾಡಿದ ಬೆಳ್ಳಿಚುಕ್ಕಿಯಾಗಿದ್ದಾರೆ. ಇಂತಹ ಉತ್ಸವಕ್ಕೆ
ನಾಡಿದ್ದು ಸಿಎಂ ಸಮಾರೋಪಕ್ಕೆ ಆಗಮಿಸುತ್ತಾರೆ ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಇದು ಕಿತ್ತೂರು ಉತ್ಸವ ಅಲ್ಲ ಜನೋತ್ಸವ ಮಾಡಲು ಸರಕಾರ ಅಧಿಕಾರಿಗಳು ಜನಪ್ರತಿನಿಧಿಗಳೂ ಸೇರಿ ಆಚರಣೆ ಮಾಡಲಾಗಿದೆ ಇದು ವಿಜಯೋತ್ಸವಾಗದೆ ಪ್ರೇರಣಾ ಉತ್ಸವ ಆಗಲಿ ಎಂದರು. ಇದೇ ವೇಳೆ 200ನೇ ಚನ್ನಮ್ಮನ ಉತ್ಸವ ಹಿನ್ನೆಲೆಯಲ್ಲಿ ಚನ್ನಮ್ಮನ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.
ಶಾಸಕ ಬಾಬಾಸಾಹೇಬ ಪಾಟೀಲ ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರಾಸ್ತಾವಿಕವಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಸತೀಶ್ ಜಾರಕಿಹೊಳಿ, ನಿಜಗುಣಾನಂದ ಸ್ವಾಮಿಜಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ರಾಜು ಶೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, sp ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ಪ್ರಭಾ, ವಿದ್ಯಾವತಿ ಬಜಂತ್ರಿ ಉಪಸ್ಥಿತರಿದ್ದರು.