ಸಂಗೊಳ್ಳಿ ರಾಯಣ್ಣ ಹುತಾತ್ಮನಾದರೂ ಜನಮಾನಸದಲ್ಲಿ ಬದುಕಿದ್ದಾರೆ : ಚನ್ಮಯಾನಂದ ಸ್ವಾಮೀಜಿ
ಮಹಾಲಿಂಗಪುರ : ಭಾರತ ದೇಶ ಅನೇಕ ಕ್ರಾಂತಿಕಾರಿಗಳು, ಯುಗಪುರುಷರು,ಮಹಾತ್ಮರು, ತತ್ವಜ್ಞಾನಿಗಳು, ಸಂತರು ಜನಿಸಿದ ಪುಣ್ಯ ಭೂಮಿ, ಅವರಲ್ಲಿ ಸಂಗೊಳ್ಳಿ ರಾಯಣ್ಣ ಒಬ್ಬರು, ಅವರು ಹುತಾತ್ಮರಾಗಿ ಇಂದಿಗೆ 192 ವರ್ಷವಾದರೂ ಭಾರತ ಮಾತೆಯ ಹೆಮ್ಮೆಯ ಪುತ್ರ ಜನಮಾನಸದಲ್ಲಿ ಇನ್ನು ಜೀವಂತವಾಗಿದ್ದರೆ. ಎಂದು ಚಿನ್ಮಯಾನಂದ ಮಹಾಸ್ವಾಮಿಗಳು ಹೇಳಿದರು.
ನಗರದ ಕರಿಸಿದ್ದೇಶ್ವರ ಸಮುದಾಯ ಭವನದಲ್ಲಿ ನಡೆದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣರ 192 ನೇ ಹುತಾತ್ಮ ದಿನಾಚರಣೆಯ ಕಾರ್ಯಕ್ರಮವನ್ನು ರಾಯಣ್ಣ ಹಾಗೂ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅವರು ಫೋಟೋಗಳಿಗೆ ಪುಷ್ಪಾರಚನೆ ಮಾಡಿ ಉದ್ಘಾಟಸಿ ಮಾತನಾಡಿದ ಗಣಿಯ ಸಿದ್ದಾರೂಢ ಮಠದ ಶ್ರೀ ಚಿನ್ಮಯಾನಂದ ಮಹಾಸ್ವಾಮಿಗಳು, ರಾಯಣ್ಣ ಹುಟ್ಟಿದ್ದು ಆಗಸ್ಟ್ 15 ರ ದಿನ ಸ್ವಾತಂತ್ರ ಸಿಕ್ಕರೆ, ಅವರನ್ನು ಗಲ್ಲಿಗೇರಿಸಿದ ಜನವರಿ 26 ರ ದಿನ ದೇಶದ ಗಣರಾಜ್ಯೋತ್ಸವ ಆಗಿದ್ದು, ಹಾಗೂ ರಾಯಣ್ಣ ಸಮಾಧಿ ಮೇಲೆ ನೆಟ್ಟ ಆಲದ ಮರ ಅದು ಕೂಡಾ ರಾಷ್ಟ್ರೀಯ ಮರ ಎಂದು ಘೋಸಿಸಲಾಗಿದೆ. ಇದು ಕಾಕತಾಳಿಯ ಆದರೂ ಸತ್ಯ ಆಗಿದೆ ರಾಯಣ್ಣ ಭಾರತದ ಜನಮಾನಸದಲ್ಲಿ ಸೂರ್ಯ ಚಂದ್ರ ಹಾಗೂ ಭೂಮಿ ಇರುವವರೆಗೆ ಜೀವಂತವಾಗಿರುತ್ತಾರೆ. ಎಂದು ಹೇಳಿದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ರವಿ ಜವಳಗಿ, ಮಹಾತ್ಮಾ ಗಾಂಧಿ, ಸಂಗೊಳ್ಳಿ ರಾಯಣ್ಣ, ಶಿವಾಜಿ, ವಿವೇಕಾನಂದರಂತ ಮಹಾನ ಪುರುಷರು ಜನಿಸಿದ ಪುಣ್ಯ ಭೂಮಿ, ಬ್ರಿಟಿಷರ ಎದೆ ನಡುಗಿಸಿದ ಗೆರಿಲ್ಲಾ ಯುದ್ಧ ಪರಿಣಿತನಾಗಿದ, ಕ್ರಾಂತೀವೀರ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮನ ಬಲಗೈ ಬಂಟನಾಗಿದ್ದ. ಇಂತಹ ಹುತಾತ್ಮರ ದಿನಾಚರಣೆಯನ್ನು ಆಚರಿಸುವುದರಿಂದ ಇಂದಿನ ಯುವ ಜನರಿಗೆ ಸ್ಫೂರ್ತಿಯಾಗುತ್ತದೆ. ಎಂದು ಹೇಳಿದರು.
ಪ್ರಸ್ತಾವಿಕವಾಗಿ ಜಯರಾಮ ಶೆಟ್ಟಿ ಮಾತನಾಡಿಡರು ಹಾಗೂ ಬಸವರಾಜ ಮೇಟಿ, ಅಂಬಾದಾಸ ಕಾಮೂರ್ತಿ ಮಾತನಾಡಿದರು, ಕಾ ನಿ ಪ ಅಧ್ಯಕ್ಷರಾದ ಮಹೇಶ ಆರಿ, ಮಲ್ಲಪ್ಪಾ ಭಾವಿಕಟ್ಟಿ, ಶ್ರೀಕಾಂತ್ ಮೂದೇಗೋಳ, ಸತ್ಯಪ್ಪ ಹುದ್ದಾರ, ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಮಹಾಲಿಂಗಪ್ಪ ಜಕ್ಕಣ್ಣವರ, ಚಂದ್ರ್ಪ ದೋಣಿ,ಗಂಗಾಧರ ಮೇಟಿ, ಮಲ್ಲಪ್ಪಾ ಸಿಂಗಾಡಿ,ಭೀಮಶಿ ತಿಮ್ಮಾಪುರ,ಸಿದ್ರಾಮ ಯರಗಟ್ಟಿ, ಮಹಾಲಿಂಗಪ್ಪ ಲಾತುರ,ಭೀಮಶಿ ಸಂಶಿ, ಮಹೇಶ ಇಟಕನ್ನವರ,ಪ್ರಭು ಹುಬ್ಬಳ್ಳಿ, ಚಂದ್ರು ಸಂಶಿ, ಶ್ರೀಶೈಲ ಅವಟಿ, ಬರಮಪ್ಪ ಅವಟಿ, ಕರೆಪ್ಪ ಮೇಟಿ, ಸಿದ್ದಪ್ಪ ಕಿಶೋರಿ, ಕರೆಪ್ಪ ಪೂಜೇರಿ, ಹಣಮಂತ ಅವಟಿ, ಮಾನಿಂಗ ಅವಟಿ,ಮುತ್ತು ದಿವಾನ, ಈರ್ಪ ಜಕ್ಕಣ್ಣವರ, ಸೇರಿದಂತೆ ಹಲವರು ಇದ್ದರು ಕಾರ್ಯಕ್ರಮವನ್ನು ಲಕ್ಷ್ಮಣ ಕಿಶೋರ ನಿರೂಪಿಸಿದರು, ಭೀಮಶಿ ನೇಗಿನಾಳ ವಂದಿಸಿದರು.