ಮಹಲಿಂಗಪುರ

ಚಂದ್ರಿಕಾ ಇಟ್ನಾಳಗೆ ವಿಜ್ಞಾನದಲ್ಲಿ ಶೇ.100 ಅಂಕ

ಚಂದ್ರಿಕಾ ಇಟ್ನಾಳಗೆ ವಿಜ್ಞಾನದಲ್ಲಿ ಶೇ.100 ಅಂಕ

ಮಹಾಲಿಂಗಪುರ 13: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಪದವಿ ಕಾಲೇಜಿನ ಬಿಎಸ್‌ಸಿ ವಿದ್ಯಾರ್ಥಿನಿ ಚಂದ್ರಿಕಾ ಇಟ್ನಾಳ ರಸಾಯನಶಾಸ್ತ್ರ ವಿಷಯದಲ್ಲಿ 1 ನೇ ಸೆಮ್ ನಲ್ಲಿ ಶೇ.100, 2ನೇ ಸೆಮ್‌ನಲ್ಲಿ ಶೇ.99, 3ನೇ ಸೆಮ್‌ನಲ್ಲಿ ಶೇ.100 ಮತ್ತು ಇತ್ತೀಚೆಗೆ 4ನೇ ಸೆಮಿಸ್ಟರ್‌ನಲ್ಲೂ ಶೇ.100 ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಇವರಿಗೆ ದೀಪಾ ನಾಯಿಕ ಮಾರ್ಗದರ್ಶನ ಮಾಡಿದ್ದರು. ಅದೇ ರೀತಿ ಕಾವೇರಿ ಮಾಕಾಳಿ ಪ್ರಾಣಿಶಾಸ್ತ್ರ ವಿಷಯದಲ್ಲಿ 4ನೇ ಸೆಮಿಸ್ಟರ್‌ನಲ್ಲಿ ಶೇ.100 ಅಂಕ ಪಡೆದಿದ್ದಾರೆ. ಇವರಿಗೆ ಚಂದ್ರಕಲಾ ಗೆಣ್ಣೂರ, ಡಾ. ಸುಭಾಸ್ ಬಿಜ್ಜರಗಿ ಮಾರ್ಗದರ್ಶನ ಮಾಡಿದ್ದರು ಎಂದು ವಿಜ್ಞಾನ ವಿಭಾಗದ ಮುಖ್ಯಸ್ಥೆ ಜಯಮಂಗಲಾ ಪಾಟೀಲ ತಿಳಿಸಿದ್ದಾರೆ. 


ಸುದ್ದಿ ಓದಿ